fbpx

ಶ್ರೀ ಅಭಿನವ ಸಂಗೀತ ಹಾಗೂ ಸಾಂಸ್ಕೃತಿಕ ಶಿಕ್ಷಣ ಸಂಸ್ಥೆ ಸಂಗೀತ ಸಂಭ್ರಮ


ಕೊಪ್ಪಳ :  ಶ್ರೀ ಅಭಿನವ ಸಂಗೀತ ಹಾಗೂ ಸಾಂಸ್ಕೃತಿಕ ಶಿಕ್ಷಣ ಸಂಸ್ಥೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕೊಪ್ಪಳ ಸಹಯೋಗದಲ್ಲಿ ನಗರದ ಪವಾರ ಆಡಿಟೋರಿಯಂ ಹಾಲ್‌ನಲ್ಲಿ ಸಂಗೀತ ಸಂಭ್ರಮ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಹಾಗೂ ಗಾಯಕರಾದ ಭಾಷಾ ಹಿರೇಮನಿ ವಹಿಸಿದ್ದರು. ಉದ್ಘಾಟನೆಯನ್ನು ವೈದ್ಯರಾದ ಶಿವನಗೌಡ್ರು ಪಾಟೀಲ್‌ರವರು ನೆರೆವೇರಿಸಿದರು. ಮುಖ್ಯ ಅತಿಥಿಗಳಾಗಿ ಸಂಸ್ಕೃತಿ ಇಲಾಖೆಯ ರಾಜೇಂದ್ರಬಾಬು, ಶಿಕ್ಷಕರಾದ ತೋಟಪ್ಪ ಬೆಲ್ಲದ ಹಾಗೂ ಕೀಬೋರ್ಡ ವಾದಕರಾದ ಜೋಸೆಫ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಮಾರುತಿ ದೊಡ್ಡಮನಿಯವರು ಹಿಂದುಸ್ತಾನಿ ಶಾಸ್ತ್ರೀಯ ಸಂಗೀತದಲ್ಲಿ ಪ್ರಸ್ತುತ ಪಡಿಸಿದ ರಾಗ ಭಾಗ್ಯಶ್ರೀ ಕಾರ್ಯಕ್ರಮದ ಶೋಭೆಯನ್ನು ಹೆಚ್ಚಿಸಿತು. ವಾಣಿಶ್ರೀಯವರಿಂದ ಸುಗಮ ಸಂಗೀತ ನೆರೆವೇರಿತು. ವಾದ್ಯ ವೃಂದದಲ್ಲಿ ಕೀಬೋರ್ಡನಲ್ಲಿ ಪೂಜಾ ಕುಲಕರ್ಣಿ ಕೊಳಲಿನಲ್ಲಿ ನಾಗರಾಜ ಶ್ಯಾವಿ ತಬಲಾದಲ್ಲಿ ಕುಮಾರೇಶ ದೊಡ್ಡಮನಿ ಹಾಗೂ ರಿಧಂ ಪ್ಯಾಡ್‌ನಲ್ಲಿ ವೆಂಕಟೇಶ ಹೊಸಮನಿ ಇದ್ದರು.

Please follow and like us:
error
error: Content is protected !!