ಶ್ರೀರಾಮ ಮಂದಿರ ನಿರ್ಮಾಣದ ನಿಧಿ ಸಮರ್ಪಣಾ ಅಭಿಯಾನ : ಸಂಸದ ಸಂಗಣ್ಣ ಕರಡಿ ಭಾಗಿ

ಇಂದು ಹಿಟ್ನಾಳ ಮತ್ತು ಬಂಡಿಹರ್ಲಾಪೂರ ಜಿಲ್ಲಾ ಪಂಚಾಯತ ಕ್ಷೇತ್ರ  ,

Kannadanet NEWS  ಶ್ರೀರಾಮ ಮಂದಿರ ನಿಧಿ ಸಮರ್ಪಣಾ ಅಭಿಯಾನ ದಲ್ಲಿ ಇಂದು ಹುಲಿಗಿ ಗ್ರಾಮದಲ್ಲಿ  ಸಂಸದರು ಭಾಗಿಯಾದರು ಆಭಿಯಾನದಲ್ಲಿ ಅನೇಕರು ಉತ್ಸಾಹದಿಂದ ಪಾಲ್ಗೊಂಡು ನಿಧಿ ಸಮರ್ಪಣೆ ಮಾಡಿದರು ವಿಶೇಷವಾಗಿ ಹುಲಿಗಿ ಗ್ರಾಮದ ಟಿ, ಜನಾರ್ಧನ ಹುಲಿಗಿ ಅವರು ಒಂದು ಲಕ್ಷ ರೂಪಾಯಿಗಳನ್ನು ಈರಣ್ಣ ಈಳಗೇರ ಇಪ್ಪತ್ತೈದು ಸಾವಿರ, ಶ್ರೀನಿವಾಸ ರೆಡ್ಡಿ ಹೊಸಪೇಟೆ ಇಪ್ಪತ್ತೈದು ಸಾವಿರ, ರೂಪಾಯಿಗಳ ಚೆಕ್ ನ್ನು ಸಂಸದರಿಗೆ ಹಸ್ತಾಂತರಿಸಿದರು,
ಹಿಟ್ನಾಳ ಜಿಲ್ಲಾ ಪಂಚಾಯತಿ ವ್ಯಾಪ್ತಿಯ ಹೊಸ ನಿಂಗಾಪುರ ಗ್ರಾಮದಲ್ಲಿ  ವೀರನಗೌಡ ಪಾಟೀಲ (VR PATIL) ಇವರು ಎರಡು ಲಕ್ಷದ ಒಂದು ಸಾವಿರ ರೂಪಾಯಿಗಳ (2,01,000/-) ಚೆಕ್ ನ್ನು ಸಂಸದರಿಗ ಹಸ್ತಾಂತರಿಸಿದರು

ಗ್ರಾಮದ ಅನೇಕರು ನಿಧಿ ಸಂಗ್ರಹದ ಅಭಿಯಾನದಲ್ಲಿ ಉತ್ಸಾಹದಿಂದ ಭಾಗವಹಿಸಿದ್ದರು, ಅಭಿಯಾನದಲ್ಲಿ ತಾ,ಪಂ ಸದಸ್ಯರಾದ ಪಾಲಾಕ್ಷಪ್ಪ ಗುಂಗಾಡಿ, ಸಹಕಾರ ಧುರಿಣರು ರಮೇಶ ವೈದ್ಯ,ತಾಲುಕು ಬಿಜೆಪಿ ಗ್ರಾಮೀಣ ಅಧ್ಯಕ್ಷ ಪ್ರದೀಪ ಹಿಟ್ನಾಳ, ಹುಲಿಗಿ ಗ್ರಾಮದ ಪರುಷರಾಮ ನಾಯಕ್, ಪರುಷರಾಮ ಅಕ್ಕಸಾಲಿ, ಅನೀಲ ದೇಸಾಯಿ, ತ್ರಯಂಬಕ ಕೊಂಡಿ, ಬಸವರಾಜ ಗದ್ದಿಕೇರಿ, ರಾಘವೇಂದ್ರ ರೆಡ್ಡಿ, ಅಗಳಕೇರಿ ಗ್ರಾಮದ ಪಂಚಾಯತ ಸದಸ್ಯ ವಿಶ್ವನಾಥ ಹೀರೆಮಠ, ಮಹೇಶ ಮಂಗಳೂರ,ಬಸವರಾಜ ಕರ್ಕಿಹಳ್ಳಿ, ವೀರಭದ್ರಯ್ಯ ಭೂಸನೂರಮಠ, ಶಹಪೂರ ಗ್ರಾಮದ ಪಂಪಯ್ಯ ಹೀರೆಮಠ, ಹೊಸಳ್ಳಿ ಗ್ರಾಮದ ಸತೀಶ್ ಪಾಟೀಲ ಶಿವಪೂರ ಗ್ರಾಮದ ಬಸವರಾಜ ಬಾರಕೇರ, ಮಂಜುನಾಥ ಪೂಜಾರ, ಶಿವಣ್ಣ ಮಹಮ್ಮದ ನಗರ, ಮತ್ತು ಅನೇಕ ಹಿಂದೂಪರ ಸಂಘಟನೆಯ ಕಾರ್ಯಕರ್ತರು ಭಾಗವಹಿಸಿದ್ದರು,

Please follow and like us:
error