ಶ್ರೀಗಳ ನೇತೃತ್ವದ ಕೆರೆ ಅಭಿವೃದ್ದಿ ಕಾರ್ಯದಲ್ಲಿ ನಾವೆಲ್ಲಾ ಜೊತೆಗಿದ್ದೇವೆ-ಕೆ.ಎಂ.ಸಯ್ಯದ್

ಗಿಣಗೇರಾ ಕೆರೆ ಅಭಿವೃದ್ದಿ ಕಾರ್ಯ : 51 ಸಾವಿರ ದೇಣಿಗೆ ನೀಡಿದ ಕೆ.ಎಂ.ಸಯ್ಯದ್

Advt

ಕೊಪ್ಪಳ : ತಾಲೂಕಿನ ಅತೀ ದೊಡ್ಡ ಕೆರೆ ಗಿಣಿಗೇರಾ ಕೆರೆಯ ಅಭಿವೃದ್ದಿಗೆ ಶ್ರೀಗಳ  ನೇತೃತ್ವದಲ್ಲಿ ಎಲ್ಲರೂ ಮುಂದಾಗಿರುವುದು ಶ್ಲಾಘನೀಯ.  ಕೆರೆ ಅಭಿವೃದ್ದಿಯಾದರೆ ಈ ಭಾಗದ ಎಲ್ಲ ರೈತರಿಗೆ ಅನುಕೂಲವಾಗಲಿದೆ. ಅಂತರ್ಜಲ ಹೆಚ್ಚಳವಾಗಲಿದೆ. ಶ್ರೀಗಳ  ಈ ಕಾರ್ಯದಲ್ಲಿ  ನಾವೆಲ್ಲ ಜೊತೆಗಿದ್ದೇವೆ ಎಂದು ಉದ್ಯಮಿ,ಸಮಾಜಸೇವಕ ಕೆ.ಎಂ.ಸಯ್ಯದ್ ಹೇಳಿದರು.

Advt

ಅವರು ಗಿಣಿಗೇರಾ ಕೆರೆಯಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ಸರಳವಾಗಿ ನಡೆದ ಕಾರ್ಯಕ್ರಮದಲ್ಲಿ  ತಮ್ಮ ಮಗಳು ಆರ್ಜೂ ಳ 6ನೇ ಹುಟ್ಟುಹಬ್ಬವನ್ನು ಆಚರಿಸಿ, ಗಿಣಿಗೇರಾ ಕೆರೆ ಅಭಿವೃದ್ದಿ ಕಾರ್ಯಕ್ಕೆ ಕೆ.ಎಂ.ಸಯ್ಯದ್ 51 ಸಾವಿರ ದೇಣಿಗೆ ನೀಡಿದರು.  ದೇಣಿಗೆಯ ಚೆಕ್ ನ್ನು ಸಮಿತಿಯ ಅಧ್ಯಕ್ಷರಿಗೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯ ಗೂಳಪ್ಪ ಹಲಗೇರಿ, ಗ್ರಾಮೀಣ ಸಿಪಿಐ ವಿಶ್ವನಾಥ ಹಿರೇಗೌಡರು, ಮುನಿರಾಬಾದ್ ಪಿಎಸ್ಐ ಪ್ರೀತಮ್ ಸೇರಿದಂತೆ , ಕರಿಯಪ್ಪ ಮೇಟಿ, ವೆಂಕಟೇಶ್ ಬಾರಕೇರ್, ಕೃಷ್ಣಪ್ಪ,  ದಾವಲ್ ಮಲಿಕ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

 

Please follow and like us:
error