ಶಿಕ್ಷಣ ತಜ್ಞ ಟಿ.ವಿ.ಮಾಗಳದರಿಗೆ ಸಮ್ಮೇಳನಕ್ಕೆ ಅಧಿಕೃತ ಆಹ್ವಾನ

ಕೊಪ್ಪಳ, ೧೮- ಕೊಪ್ಪಳ ಜಿಲ್ಲಾ ೧೧ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾದ ಶಿಕ್ಷಣ ತಜ್ಞ ಹಾಗೂ ಹಿರಿಯ ಸಾಹಿತಿ ಟಿ.ವಿ.ಮಾಗಳದ ಅವರಿಗೆ ಸಮ್ಮೇಳನಕ್ಕೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನಿಂದ ಅಧಿಕೃತ ಆಹ್ವಾನ ನೀಡಲಾಯಿತು.
ಮಂಗಳವಾರ ಬೆಳಿಗ್ಗೆ ಗದಗನಲ್ಲಿ ಅವರ ನಿವಾಸದಲ್ಲಿ ಕಸಾಪ ಜಿಲ್ಲಾಧ್ಯಕ್ಷ ರಾಜಶೇಖರ ಅಂಗಡಿ ನೇತೃತ್ವದ ಸಾಹಿತ್ಯ ಪರಿಷತ ಪದಾಧಿಕಾರಿಗಳು ಹಾಗೂ ಸಾಹಿತಾಸಕ್ತರ ತಂಡ ಟಿ.ವಿ.ಮಾಗಳದ ದಂಪತಿಗಳಿಗೆ ಅಧಿಕೃತ ಆಹ್ವಾನ ನೀಡಿ ಸ್ವಾಗತಿಸಿದರು.
ಬೆಳಕಿನ ಕಳಸವಾಗಲಿದೆ: ಆಹ್ವಾನ ಸ್ವೀಕರಿಸಿ ಮಾತನಾಡಿದ ಶಿಕ್ಷಣ ತಜ್ಞರಾದ ಟಿ.ವಿ.ಮಾಗಳದರವರು ಕೊಪ್ಪಳ ಜಿಲ್ಲೆ ಸಾಹಿತ್ಯ, ಸಂಸ್ಕೃತಿ ಹಾಗೂ ರಂಗಭೂಮಿ ಸೇರಿದಂತೆ ಎಲ್ಲ ರಂಗದ ನಾಡಿಗೆ ಬೆಳಕಿನ ಕಳಸವಾಗಲಿದೆ ಎಂದರು.
ಶಿಕ್ಷಕನಾಗಿ ಅಲ್ಪ ಸೇವೆ ಮಾಡಿದ ನನಗೆ ನನ್ನ ವಿದ್ಯಾರ್ಥಿಗಳಿಗೆ ದೇವರು ಅವರಿಗೆ ಕಲಿಸಿದ್ದಕ್ಕಿಂತ ಅವರಿಂದ ನಾನು ಕಲಿತಿದ್ದೆ ಹೆಚ್ಚು ದೇಶದ ಭವಿಷ್ಯ ನಾಡಿನ ಭವಿಷ್ಯ ಮಕ್ಕಳ ಶಿಕ್ಷಣದಲ್ಲಿದೆ ಎಂದರು.
ಜಿಲ್ಲಾ ಕಸಾಪ ಅಧ್ಯಕ್ಷ ರಾಜಶೇಖರ ಅಂಗಡಿ ಸಮ್ಮೇಳನ ಸರ್ವಾಧ್ಯಕ್ಷ ಟಿ.ವಿ.ಮಾಗಳದ ಅವರಿಗೆ ಸನ್ಮಾನಿಸಿ ಆಹ್ವಾನ ಪತ್ರ ನೀಡಿದರು.
ಈ ಸಂದರ್ಭದಲ್ಲಿ ಪತ್ರಕರ್ತ ಸೋಮರಡ್ಡಿ ಅಳವಂಡಿ, ಕಸಾಪ ಜಿಲ್ಲಾ ಕೋಶಾಧ್ಯಕ್ಷ ಸಂತೋಷ ದೇಶಪಾಂಡೆ, ಧಾರವಾಡ ವಾರ್ತಾಧಿಕಾರಿ ಮಂಜುನಾಥ ಡೊಳ್ಳಿನ, ಪರಿಷತ್ ಪದಾಧಿಕಾರಿಗಳಾದ ರಮೇಶ ತುಪ್ಪದ, ರಾಜೇಶ ಯಾವಗಲ್, ರಾಜೇಂದ್ರ ಗಡಾದ, ರಾಮಚಂದ್ರ ಗೊಂಡಬಾಳ, ಬಸವರಾಜ ಮೇಟಿ, ಶಿವಕುಮಾರ ಕುಕನೂರ, ಉಪನ್ಯಾಸಕ ಫಕೀರಪ್ಪ ವಜ್ರಬಂಡಿ, ಕಳಕಪ್ಪ ಕುಂಬಾರ, ಬಸವರಾಜ ಕೊಡ್ಲಿ, ನಾಗರಾಜ ನರಗುಂದ, ಬಸವರಾಜ ರಡ್ಡೆರ, ಬನ್ನಿಕೊಪ್ಪದ ತಾ.ಪಂ ಸದಸ್ಯೆ ಗೌರಮ್ಮ ಬನ್ನಿಕೊಪ್ಪ ಇತರರು ಇದ್ದರು

Please follow and like us:
error