ಶರಣ ಪಡೆಯ ದಂಡನಾಯಕ ಮಡಿವಾಳ ಮಾಚಿದೇವರ : ಕೃಷ್ಣಮೂರ್ತಿ ದೇಸಾಯಿ

ಕೊಪ್ಪಳ ಫೆ.  ೧೨ನೇ ಶತಮಾನದ ಶರಣ ಪಡೆಯ ದಂಡನಾಯಕರಾಗಿದ್ದರು ಮಡಿವಾಳ ಮಾಚಿದೇವರ ಎಂದು ಕೊಪ್ಪಳ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಹಾಗೂ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಕೃಷ್ಣಮೂರ್ತಿ ದೇಸಾಯಿ ಅವರು ಹೇಳಿದರು.
ಕೊಪ್ಪಳ ಜಿಲ್ಲಾಡಳಿತದ ವತಿಯಿಂದ ನಗರದ ಸಾಹಿತ್ಯ ಭವನದಲ್ಲಿ ಶುಕ್ರವಾರದಂದು ಆಯೋಜಿಸಲಾದ ಮಡಿವಾಳ ಮಾಚಿದೇವರ ಜಯಂತಿ ಆಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮಡಿವಾಳ ಮಾಚಿದೇವರ ಅವರು ವಚನ ಸಾಹಿತ್ಯದ ರಕ್ಷಕರಾಗಿದ್ದರು. ವೀರ ಗಣಾಚಾರಿ ಮಡಿವಾಳ ಮಾಚಿದೇವರು ಭಕ್ತಿ ಮತ್ತು ನಿಷ್ಠೇಯಿಂದ ತಮ್ಮ ವೃತ್ತಿಯನ್ನು ಪೂಜಿಸಿ ಕಾಯಕವನ್ನು ಮಾಡಿ ಶರಣರಾದ ಮಹನಿಯರಲ್ಲಿ ಒಬ್ಬರಾಗಿದ್ದಾರೆ. ತಮ್ಮ ವಚನಗಳ ಮೂಲಕ ಸಮಾಜದಲ್ಲಿನ ಅಂಕುಡೊಂಕು ವ್ಯವಸ್ಥೆಗಳನ್ನು ತಿದ್ದಿದಂತಹ ಶರಣರಲ್ಲಿ ಒಬ್ಬರಾಗಿದ್ದಾರೆ. ಜಗ ಜ್ಯೋತಿ ಬಸವೇಶ್ವರರ ಜೊತೆ ಉತ್ತಮವಾದ ಒಡನಾಟವನ್ನು ಹೊಂದಿದ್ದರು. ಕಾಯಕವೇ ಕೈಲಾಸ ಎಂಬ ಬಸವಣ್ಣನವರ ಹೇಳಿದಂತೆ ತಮ್ಮ ಕಾಯಕವನ್ನು ನಿಷ್ಠೆಯಿಂದ ಮಾಡಿ ಶಿವ ಶರಣರಾದವರು ಮಾಚಿದೇವರು. ಮನುಷ್ಯರ ನಡುವೆ ಇರುವ ಅಂತರವನ್ನು ಹೋಗಲಾಡಿಸಲು ಹೋರಾಡಿದ ಮಹಾನ್ ಶರಣರಾಗಿದ್ದರು. ಇಂತಹ ಮಹಾನ ಶರಣರ ವಚನಗಳ ಮತ್ತು ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಜೀವನ ಸಾರ್ಥಕವಾಗುತ್ತದೆ. ಈ ನಿಟ್ಟಿನಲ್ಲಿ ಇಂತಹ ಮಹನಿಯರ ಜಯಂತಿಯನ್ನು ಸರ್ಕಾರಿ ಕಾರ್ಯಕ್ರಮವನ್ನಾಗಿ ಆಚರಿಸಲಾಗುತ್ತಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರು ಹಾಗೂ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಕೃಷ್ಣಮೂರ್ತಿ ದೇಸಾಯಿ ಅವರು ಹೇಳಿದರು.
ಮಡಿವಾಳ ಮಾಚಿದೇವರ ಕುರಿತು ವಿಶೇಷ ಉಪನ್ಯಾಸವನ್ನು ನೀಡಲು ಆಗಮಿಸಿದ ಬೆಳಗಾವಿ ಶಿಕ್ಷಣ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕರಾದ ಎ.ಎಂ. ಮಡಿವಾಳರ ಅವರು ಮಾತನಾಡಿ, ೧೨ನೇ ಶತಮಾನವು ಶರಣರ ಸಾಹಿತ್ಯದ ಶತಮಾನ ವಾಗಿತ್ತು. ಇಂದಿನಿಂದ ಸುಮಾರು ೮೦೦ ವರ್ಷಗಳ ಹಿಂದಿನ ವ್ಯವಸ್ಥೆಯೇ ಶರಣ ಚಳುವಳಿಗೆ ಪ್ರೇರಣೆ ನೀಡಿತು. ಜಾತಿ, ಮತ, ಧರ್ಮ, ಪಂಥ, ಬೇಧ-ಭಾವ ಇವುಗಳನ್ನು ನೀರಾಕರಿಸಿ ಮಾನವಿಯತೆಯೇ ನೀಜವಾದ ಧರ್ಮವೆಂದು ಸಾರಿ ಅನೇಕ ಚಳುವಳಿಗಳನ್ನು ನಡೆಸಿ, ಜನ ಸಾಮನ್ಯರಿಗೆ ಅರ್ಥವಾಗುವಂತಂಹ ಸರಳ ಪದಗಳಿಂದ ವಚನಗಳನ್ನು ರಚಿಸಿ ಜನರಲ್ಲಿ ಅರಿವು ಮೂಡಿಸಿದಂತಹ ಮಹತ್ತರವಾದ ಕಾಲವಾಗಿತ್ತು ಅದು. ಆ ಕಾಲದ ಶರಣರಲ್ಲಿ ಮಡಿವಾಳ ಮಾಚಿದೇವರು ಕೂಡ ಒಬ್ಬರು. ಈಗಿನ ವಿಜಯಪುರ ಜಿಲ್ಲೆಯ ಹಿಬ್ಬರಗಿಯಲ್ಲಿ ಮಾಚಿದೇವರು ಕಿ.ಶ. ೧೧೧೦ ರಲ್ಲಿ ಜನಿಸಿದ್ದಾರೆ ಎಂದು ಹೇಳಲಾಗುತ್ತದೆ. ತಂದೆ ಪರ್ವತಯ್ಯ ತಾಯಿ ಪರ್ವತೆ, ಗುರು ಮಲ್ಲಿಕಾರ್ಜುನ ಸ್ವಾಮಿ. ಮಾಚಿದೇವರು ಸಾಮಾನ್ಯ ಮನುಷ್ಯನಾಗಿಯೇ ಹುಟ್ಟಿ ಕಲಿದೇವರನ್ನು ಪೂಜಿಸುತ್ತಿದ್ದರು. ಗುರು ಮಲ್ಲಿಕಾರ್ಜುನ ಸ್ವಾಮಿಗಳ ಆದೇಶದ ಮೆರಗೆ ಭಿಮಾ ನದಿಯನ್ನು ದಾಟಿ ಕಲ್ಯಾಣದ ಕಡೆ ಹೊಗುತ್ತಾರೆ. ಮಾಚಿದೇವರು ತಮ್ಮ ಕಾಯಕದ ಜೊತೆ ಜೊತೆಯೇ ಶರಣ ಚಳುವಳಿಯಲ್ಲಿ ಭಾಗವಹಿಸಿದ್ದಾರೆ. ಮಡಿವಾಳ ಮಾಚಿದೇವರು ಮುಖ್ಯವಾಗಿ ಎಲ್ಲಾ ಶರಣರಿಂದಲೂ ಗೌರವ ಪಡೆದುಕೊಂಡಂತಹ ಶರಣರಾಗಿದ್ದರು. ಇಂತಹ ಮಹನೀಯರ ತತ್ವಾದರ್ಶಗಳನ್ನು ತಿಳಿದು, ಅವುಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಶರಣರಿಗೆ ಗೌರವ ಸಲ್ಲಿಸಬೇಕು ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಕೊಪ್ಪಳ ತಹಶೀಲ್ದಾರ ಜೆ.ಬಿ. ಮಜ್ಗಿ ಅವರು ವಹಿಸಿದ್ದರು. ಸ್ವಾತಂತ್ರಯ ಯೋದರಾದ ಸುಮಂತರಾವ್ ಪಟವಾರಿ, ಹಿರಿಯ ಸಾಹಿತಿ ಹೆಚ್.ಎಸ್. ಪಾಟೀಲ್, ಸಮಾಜದ ಮುಖಂಡರಾದ ಸಿ.ವಿ. ಮಡಿವಾಳರ, ಮಂಜುನಾಥ ಕುರಗೋಡ, ಗವಿಸಿದ್ದಪ್ಪ, ಶಂಕ್ರಪ್ಪ, ಉಂಕಪ್ಪ, ಆರ್.ವಿ. ಮಡಿವಾಳರ, ಮಂಜುನಾಥ ಕುಕನೂರ ಸೇರಿದಂತೆ ಅನೇಕ ಗಣ್ಯರು ಪಾಲ್ಗೊಂಡಿದ್ದರು.
ಜಯಂತಿ ಅಂಗವಾಗಿ ಮಡಿವಾಳ ಮಾಚಿದೇವರ ಭಾವಚಿತ್ರದ ಮೇರವಣಿಗೆಯು ನಗರದ ಕೋಟೆ ರಸ್ತೆಯ ಅಕ್ಕಮಹಾದೇವಿ ದೇವಸ್ಥಾನ (ಮಹೇಶ್ವರ ದೇವಸ್ಥಾನ) ದಿಂದ ಪ್ರಾರಂಭಗೊಂಡು, ಗಡಿಯಾರ ಕಂಬ, ಜವಾಹರ ರಸ್ತೆ, ಅಶೋಕ ವೃತ್ತ ಮೂಲಕ ಸಾಹಿತ್ಯ ಭವನದವರೆಗೆ ಸಾಗಿ ಬಂದಿತು. ಮೆರವಣಿಗೆಯಲ್ಲಿ ಪೂರ್ಣಕುಂಭ ಹೊತ್ತ ಮಹಿಳೆಯರು, ಡೊಳ್ಳು ಕುಣಿತ ಸೇರಿದಂತೆ ವಿವಿಧ ಕಲಾ ತಂಡಗಳು ಭಾಗವಹಿಸಿ, ಮೆರವಣಿಗೆಯನ್ನು ಆಕರ್ಷಕಗೊಳಿಸಿದವು.

Please follow and like us:
error