ಶಂಕಿತ ಡೆಂಗ್ಯೂ ಗುನ್ನಳ್ಳಿ ಗ್ರಾಮಕ್ಕೆ ಶಾಸಕರ ದಿಢೀರ ಬೇಟಿ

ಕೊಪ್ಪಳ: ೨೫ ಗುನ್ನಳ್ಳಿ ಗ್ರಾಮದಲ್ಲಿ ಉಲ್ಬಣಗೊಂಡಿರುವ ಮಾರಕ ಡೆಂಗ್ಯೂ ಜ್ವರದ ರೋಗಿಗಳ ತಪಾಸಣೆಗೆ ಶಾಸಕ ಕೆ.ರಾಘವೇಂದ್ರ ಹಿಟ್ನಾಳರವರು ತಾಲೂಕ ವೈಧ್ಯಾಧಿಕಾರಿಗಳ ನೇತೃತ್ವದಲ್ಲಿ ಶಂಕಿತ ಡೆಂಗ್ಯೂ ಜ್ವರದ ರೋಗಿಗಳ ತೀರ್ವ ರಕ್ತ ತಪಾಸಣೆ ಮಾಡಿ ಡೆಂಗ್ಯೂ ಜ್ವರ ಖಚಿತಪಡಿಸಿಕೊಂಡು ಅಂತಹ ರೋಗಿಗಳನ್ನು ಹಿರೇಸಿಂದೋಗಿ ಆರೋಗ್ಯ ಕೇಂದ್ರದಲ್ಲಿ ದಾಖಲೆ ಮಾಡಿಕೊಳ್ಳಲು ಸೂಚಿಸಿದರು. ಗ್ರಾಮದಲ್ಲಿ ಸೊಳ್ಳೆಗಳ ನಿಯಂತ್ರಣಕ್ಕೆ ಫಾಗಿಂಗ್ ಮಾಡಲು ಗ್ರಾ.ಪಂ. ಅಭಿವೃದ್ದಿ ಅಧಿಕಾರಿಗಳಿಗೆ ಕ್ರಮ ಕೈಗೊಳ್ಳಲು ಹೇಳಿದರು.

ಗ್ರಾಮದಲ್ಲಿಯ ಕಲುಷಿತ ನೀರನ್ನು ಖಾಲಿ ಮಾಡಲು ಸೂಚಿಸಿ ಸೊಳ್ಳೆಗಳು ಉಲ್ಬಣಗೊಳ್ಳದಂತೆ ಶೀಘ್ರ ಕ್ರಮ ಕೈಗೊಂಡು ಗ್ರಾಮದ ಸ್ವಚ್ಛತೆಗೆ ಹೆಚ್ಚಿನ ಆಧ್ಯತೆ ಕೊಡಬೇಕೆಂದು ಅಧಿಕಾರಿಗಳಿಗೆ ತೀರ್ವವಾಗಿ ತರಾಟೆ ತೆಗೆದುಕೊಂಡರು, ಗ್ರಾಮಸ್ಥರು ನೈರ್ಮಲ್ಲಿಕರಣದತ್ತ ಹೆಚ್ಚು ಒತ್ತು ಕೊಡಬೇಕೆಂದು ಹೇಳಿದರು. ವೈಧ್ಯಾಧಿಕಾರಿಗಳು ಒಂದು ವಾರ ಗ್ರಾಮದಲ್ಲಿಯೇ ಉಳಿಯಲು ಹೇಳಿದರು.
ಈ ಸಂದರ್ಭದಲ್ಲಿ ಮಾಜಿ ಜಿ.ಪಂ.ಅಧ್ಯಕ್ಷ ಎಸ್.ಬಿ.ನಾಗರಳ್ಳಿ, ಎ.ಪಿ.ಎಂ.ಸಿ ಅಧ್ಯಕ್ಷ ಹನುಮರಡ್ಡಿ ಹಂಗನಕಟ್ಟಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ ಬೂಮರೆಡ್ಡಿ ತಾಲೂಕಾ ಆರೋಗ್ಯಧಿಕಾರಿ ಡಾ|| ರಾಮಾಂಜಿನೇಯ, ಡಾ|| ವೀರಣ್ಣ, ಹನುಮಂತಪ್ಪ ಬೆಳವನಾಳ, ರಮೇಶ ಹಾದಿ, ಗ್ಯಾನಪ್ಪ ಕಿನ್ನಾಳ, ಪಿ.ಡಿ.ಓ ವೈಜನಾಥ, ವಕ್ತಾರ ಅಕ್ಬರ ಪಾಷಾ ಪಲ್ಟನ ಉಪಸ್ಥಿತರಿದ್ದರು.