ವೆಲ್ಫೇರ್ ಪಾರ್ಟಿಯ ಜಿಲ್ಲಾಧ್ಯಕ್ಷರಾಗಿ ಆದಿಲ್ ಪಟೇಲ್ ಆಯ್ಕೆ


ಕೊಪ್ಪಳ : ವೆಲ್ಫೇರ್ ಪಾರ್ಟಿ ಆಪ್ ಇಂಡಿಯಾ ಕೊಪ್ಪಳ ಘಟಕದ ಜಿಲ್ಲಾಧ್ಯಕ್ಷರಾಗಿ ಅದಿಲ್ ಪಟೇಲ್ ಅವರು ಆಯ್ಕೆಯಾಗಿದ್ದಾರೆ. ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಹಬಿಬುಲ್ಲಾ ಖಾನ್ ಅವರ ಅಧ್ಯಕ್ಷತೆಯಲ್ಲಿ ಹಾಗೂ ಜಿಲ್ಲೆಯ ಕಾರ್ಯಕಾರಿ ಸದಸ್ಯರ ಸಮುಖದಲ್ಲಿ ಜರುಗಿದ ಜಿಲ್ಲಾ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ಎಲ್ಲಾ ಸದಸ್ಯರ ಅಭಿಪ್ರಾಯ ಪಡೆದು ಆಯ್ಕೆ ಮಾಡಲಾಯಿತು. ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಮೊಹಮ್ಮದ್ ಅಲಿಮುದ್ದಿನ್ ಅವರು ಆಯ್ಕೆಯಾದರೆ ಜಿಲ್ಲಾ ಖಾಜಾಂಚಿಯಾಗಿ ಅಬ್ದುಲ್ ವಾಹಿದ್ ಮುನಿರಾಬಾದ್‌ಯವರನ್ನು ಆಯ್ಕೆ ಮಾಡಲಾಯಿ. ಜಂಟಿಕಾರ್ಯದರ್ಶಿಗಳಾಗಿ ಮುಸ್ತಾಫ ಹುಡೇದ್ ಬಹಾದ್ದೂರ ಬಂಡಿ ಹಾಗೂ ಅನ್ಸಾರ್ ಅಹ್ಮದ್ ಕುಷ್ಟಗಿ ಯವರನ್ನು ನೇಮಕ ಮಾಡಲಾಯಿತು. ಮಹಿಳಾ ಘಟಕದ ಜಿಲ್ಲಾ ಸಂಚಾಕಿಯಾಗಿ ಸಲ್ಮಾ ಜಾಹನ್, ಸಹಸಂಚಾಲಕಿಯಾಗಿ ನಾಸೀರಾ ಬೇಗಂ ಅಯ್ಕೆಯಾದರು. ರೈತ ಜಿಲ್ಲಾ ಘಟಕದ ಸಂಚಾಲಕರಾಗಿ ಯಮನೂರಪ್ಪ ಬಿಳೆಗುಡ್ಡ ಅವರಿಗೆ ನೇಮಿಸಲಾಯಿತು. ಆಯ್ಕೆಯಾದ ನೂತನ ಜಿಲ್ಲಾ ಘಟಕದ ಪದಾಧಿಕಾರಿಗಳಿಗೆ ಎಲ್ಲಾ ವೆಲ್ಫೇರ್ ಪಾರ್ಟಿಯ ಕಾರ್ಯಕಾರಿ ಸದಸ್ಯರು ಹಾಗೂ ಕಾರ್ಯಕರ್ತರು ಸನ್ಮಾನಿಸಿ ಶುಭಾಕೊರಿದರು. ಈ ಸಂದರ್ಭದಲ್ಲಿ ಕೊಪ್ಪಳ ನಗರಸಭೆ ಸದಸ್ಯೆ ಶ್ರೀಮತಿ ಸಬಿಯಾ ಪಟೇಲ್, ಶ್ರೀಮತಿ ಲುತ್ಫಿಮೈಮೂನ, ಹಿರಿಯರಾದ ಹಸನೂದ್ದಿನ್ ಸಾಬ್, ಮೆಹಬೂಬ್ ಮಣ್ಣೂರು, ನಜೀರ್ ಹುಡಾ, ಮೌಲಾಹುಸೇನ್ ಹಣಗಿ, ನಾಸೀರ ಮಾಳೆಕೊಪ್ಪ, ಮೈನೂದ್ದಿನ್ ಹಿರೆಮಸೂತಿ ಇನ್ನು ಅನೇಕ ಹಿರಿಯ ಸದಸ್ಯರು ಉಪಸ್ಥಿತರಿದ್ದರು.

Please follow and like us:
error