ವಿ.ಎಸ್.ಕೆ.ಯು.ಬಿ. ಸಿಂಡಿಕೇಟ್ ಸದಸ್ಯರಾಗಿ ಪ್ರೊ. ಪಿ.ಸಿ. ನಾಗನೂರ್ ನಾಮನಿರ್ದೇಶನ

ಕೊಪ್ಪಳ ನ. : ಬಳ್ಳಾರಿಯ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯ (ವಿ.ಎಸ್.ಕೆ.ಯು.ಬಿ)ದ ಸಿಂಡಿಕೇಟ್ ಸದಸ್ಯರನ್ನಾಗಿ ನಂದಿಹಳ್ಳಿ-ಸಂಡೂರು ಸ್ನಾತಕೊತ್ತರ ಕೇಂದ್ರ (ಅನ್ವಯಿಕ ಭೂವಿಜ್ಞಾನ ನಿಕಾಯ, ಖನಿಜ ಸಂಸ್ಕರಣ ವಿಭಾಗ) ದ ಡೀನ್ ಆಗಿರುವ ಪ್ರೊ. ಪಿ.ಸಿ. ನಾಗನೂರ್ ಇವರನ್ನು ನಾಮನಿರ್ದೇಶನ ಮಾಡಲಾಗಿದೆ ಎಂದು ವಿ.ಎಸ್.ಕೆ.ಯು.ಬಿ ಕುಲಸಚಿವರು ತಿಳಿಸಿದ್ದಾರೆ.
ಕುಲಪತಿಗಳ ಅನುಮೋದನೆ ಮೇರೆಗೆ ಹಾಗೂ ಕರ್ನಾಟಕ ವಿಶ್ವವಿದ್ಯಾಲಯಗಳ ಅಧಿನಿಯಮ-೨೦೦೦ ಅಧಿನಿಯಮ ೨೮(೧)(ಡಿ) ರನ್ವಯ ಪ್ರೊ. ರಾಬರ್ಟ್ ಜೋಷ್ ಡೀನರು, ಕಲಾ ನಿಕಾಯ ಇವರನ್ನು ಸಿಂಡಿಕೇಟ್ ಸದಸ್ಯರನ್ನಾಗಿ ೨೦೧೭ರ ಅಕ್ಟೋಬರ್. ೦೫ ರಿಂದ ಅನ್ವಯಿಸಿ ಒಂದು ವರ್ಷದ ಅವಧಿಗೆ ಅಥವಾ ಡೀನ್ ಅವಧಿ ಮುಕ್ತಾಯದ ದಿನಾಂಕದವರೆಗೆ (ಯಾವುದು ಮೊದಲು ಘಟಿಸುವುದೋ ಅಲ್ಲಿಯವರೆಗೆ) ವಿ.ಎಸ್.ಕೆ.ಯು.ಬಿ ಕ್ಕೆ ನಾಮನಿರ್ದೇಶನ ಮಾಡಲಾಗಿದ್ದು, ಇವರ ಸಿಂಡಿಕೇಟ್ ಸದಸ್ಯತ್ವದ ಅವಧಿ ೨೦೧೮ರ ನವೆಂಬರ್. ೧೨ ರಂದು ಮುಕ್ತಾಯವಾಗಿದೆ. ಈ ಪ್ರಯುಕ್ತ ಜೇಷ್ಠತಾ ಆಧಾರದ ಮೇಲೆ ಪ್ರೊ. ಪಿ.ಸಿ. ನಾಗನೂರ್, ಡೀನರು, ಅನ್ವಯಿಕ ಭೂವಿಜ್ಞಾನ ನಿಕಾಯ, ಖನಿಜ ಸಂಸ್ಕರಣ ವಿಭಾಗ, ಸ್ನಾತಕೊತ್ತರ ಕೇಂದ್ರ, ನಂದಿಹಳ್ಳಿ-ಸಂಡೂರು ಇವರನ್ನು ೨೦೧೮ರ ನ. ೧೩ ರಿಂದ ಅನ್ವಯಿಸಿ “ಒಂದು ವರ್ಷದ ಅವಧಿಗೆ ಅಥವಾ ಡೀನ್ ಅವಧಿ ಮುಕ್ತಾಯದ ದಿನಾಂಕದವರೆಗೆ (ಯಾವುದು ಮೊದಲು ಘಟಿಸುವುದೋ ಅಲ್ಲಿಯವರೆಗೆ) ಬಳ್ಳಾರಿಯ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರನ್ನಾಗಿ ನಾಮನಿರ್ದೇಶನ ಮಾಡಲಾಗಿದೆ

Please follow and like us:
error