ವಿಶ್ವದ ನಾನಾದೇಶಗಳಲ್ಲಿ ಗೋಚರಿಸಿದ ಕಂಕಣ ಸೂರ್ಯಗ್ರಹಣ

ಹೊಸದಿಲ್ಲಿ,  : ವಿಶ್ವದ ಹಲವಡೆ ಗುರುವಾರ ಬೆಳಗ್ಗೆ ಕಂಕಣ ಸೂರ್ಯಗ್ರಹಣ ಗೋಚರಿಸಿದೆ. ಆಸ್ಟ್ರೇಲಿಯಾ,ಸೌಧಿ ಅಬುದಾಬಿ, ಕತಾರ್ ,  ಫಿಲಿಪ್ಪೆನ್ಸ್ , ಚೀನಾ, ಇಂಡೋನೇಷ್ಯಾ, ಸೋಮಾಲಿಯಾ, ಶ್ರೀಲಂಕಾ, ಜಿಂಬಾಬ್ವೆ, ಬೆಲಾರಸ್ , ಪೊಲೆಂಡ್, ಬಾಂಗ್ಲಾದೇಶ  , ಮಲೇಷ್ಯಾ, ಭೂತಾನ್  , ಅಫ್ಘಾನಿಸ್ತಾನ,  ಮಾರಿಷಸ್, ಸುಮಾತ್ರ,  ಬೆಲಾರಸ್ ಮತ್ತಿತರ ದೇಶಗಳಲ್ಲಿ ಸೂರ್ಯಗ್ರಹಣ ಗೋಚರಿಸಿದೆ.

ದೇಶದ ಕೊಚ್ಚಿ, ಕಾಸರಗೋಡು, ತಿರುವನಂತಪುರ, ಹರಿದ್ವಾರ ಚಂಡಿಗಡ,ಚೆನ್ನೈ, ಅಹ್ಮದಾಬಾದ್, ಅಜ್ಮೀರ್, ಭುವನೇಶ್ವರ್ , ಮುಂಬೈನಲ್ಲಿ ಸೂರ್ಯಗ್ರಹಣ ಗೋಚರವಾಗಿದೆ.

ರಾಜ್ಯದ ಕೊಪ್ಪಳ, ಮಂಗಳೂರು, ಉಡುಪಿ, ಬೆಳಗಾವಿ, ಶಿವಮೊಗ್ಗ , ಬಳ್ಳಾರಿ, ಕಲಬುರಗಿ, ಯಾದಗರಿ, ಧಾರವಾಡ, ಹುಬ್ಬಳ್ಳಿ, ಹಾಸನ , ಬಾಗಲಕೋಟೆ,  ಚಿತ್ರದುರ್ಗ , ಹುಬ್ಬಳ್ಳಿ, ದಾವಣಗೆರೆ, ವಿಜಯಪುರ,  ಸೇರಿದಂತೆ ರಾಜ್ಯದ ವಿವಿಧ  ನಗರಗಳಲ್ಲಿ ಕಂಕಣ ಸೂರ್ಯಗ್ರಹಣವಾಗಿದೆ.

ದಿಲ್ಲಿ ಮತ್ತು ಬೆಂಗಳೂರಿನಲ್ಲಿ ಮೋಡ ಮುಸುಕಿದ ವಾತಾವರಣದ ಕಾರಣದಿಂದಾಗಿ ಕಂಕಣ ಸೂರ್ಯಗ್ರಹಣ ವೀಕ್ಷಣೆಗೆ ಅಡ್ಡಿಯಾಗಿತ್ತು.

ದಿಲ್ಲಿಯಲ್ಲಿ ಪ್ರಧಾನ ಮಂತ್ರಿ ನರೇಂದ್ರ   ಮೋದಿ ಕಂಕಣ ಸೂರ್ಯಗ್ರಹಣ ವೀಕ್ಷಿಸಿದರು. “ದುರದೃಷ್ಟವಶಾತ್, ಮೋಡದ ಕವಿದ ವಾತಾವರಣದಿಂದಾಗಿ  ನನಗೆ ಸೂರ್ಯನನ್ನು ನೋಡಲು ಸಾಧ್ಯವಾಗಲಿಲ್ಲ. ಆದರೆ ಕೋಝಿಕ್ಕೋಡ್  ಮತ್ತು ಇತರ ಭಾಗಗಳಲ್ಲಿನ ಗ್ರಹಣದ ದೃಶ್ಯಗಳನ್ನು ನಾನು ಲೈವ್ ಸ್ಟ್ರೀಮ್‌ನಲ್ಲಿ ನೋಡಿದ್ದೇನೆ” ಎಂದು ಮೋದಿ ಅಭಿಪ್ರಾಯಪಟ್ಟಿದ್ದಾರೆ.

ಸೂರ್ಯಗ್ರಹಣದ ವೇಳೆ ಕಲಬುರುಗಿಯ  ತಾಜ್ ಸುಲ್ತಾನಪುರದಲ್ಲಿ ಪೋಷಕರು ಮಕ್ಕಳನ್ನು ಮಣ್ಣಿನಲ್ಲಿ ಕುತ್ತಿಗೆಯವರೆಗೆ ಹೂತಿಡುವುದರ ಮೂಲಕ ವಿಚಿತ್ರ ಮೌಢ್ಯಾಚರಣೆ ಕಂಡು ಬಂತು. ಕಲಬುರುಗಿಯ ಎರಡು ಕಡೆಗಳಲ್ಲಿ ಇಂತಹ ಆಚರಣೆ ಕಂಡು ಬಂದಿದೆ.ಮಕ್ಕಳನ್ನು ಕಾಡುತ್ತಿರುವ ವಿಕಲಾಂಗ ಸಮಸ್ಯೆ ಸರಿಪಡಿಸುವ ನಂಬಿಕೆಯೊಂದಿಗೆ  ಮಕ್ಕಳನ್ನು ತಿಪ್ಪೆಯಲ್ಲಿ ಹೂತಿಟ್ಟಿದ್ದಾರೆ. ಗ್ರಹಣದ ವೇಳೆ  ಮಣ್ಣಲ್ಲಿ ಮಕ್ಕಳನ್ನು ಹೂತರೆ ಒಳ್ಳೆಯದಾಗುತ್ತದೆ ಎಂಬ ನಂಬಿಕೆಯಿಂದ ಪೋಷಕರು ಈ ರೀತಿ ಮಾಡಿದ್ದಾರೆ ಎನ್ನಲಾಗಿದೆ.

ವಿಜಯಪುರದ ಇಂಡಿ ತಾಲೂಕಿನ ಅರ್ಜುನಗಿ ಬಿ.ಕೆ. ಗ್ರಾಮದಲ್ಲಿ 22 ವರ್ಷದ ವಿಕಲಚೇತನ ಯುವಕನನ್ನು ಮಣ್ಣಲ್ಲಿ ಹೂತಿಟ್ಟ ಘಟನೆಯೂ ಕಂಡು ಬಂತು.

 

Please follow and like us:
error