ವಿವಿಧ ಕಾಲೇಜು ಹಾಗೂ ಶಾಲೆಗಳ ಖಾಲಿ ಇರುವ ಭೋದಕ ಹುದ್ದೆಗಳಿಗೆ ಅರ್ಜಿ ಆಹ್ವಾನ

ಕೊಪ್ಪಳ ಮೇ. :  ಕೊಪ್ಪಳ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವತಿಯಿಂದ ನಿರ್ವಹಣೆಯಾಗುತ್ತಿರುವ ಬಾಲಕಿಯರ ವಸತಿ ಕಾಲೇಜ್/ ವಸತಿ ಶಾಲೆ ಹಾಗೂ ಮೌಲಾನ್ ಆಜಾದ್ ಮಾದರಿ ಶಾಲೆಗಳಲ್ಲಿ ಖಾಲಿ ಇರುವ ಭೋದಕ ಹುದ್ದೆಗಳಿಗೆ ಅತಿಥಿ ಶಿಕ್ಷಕ, ಉಪನ್ಯಾಸಕರಿಂದ ಅರ್ಜಿ ಆಹ್ವಾನಿಸಲಾಗಿದೆ.
ಕೊಪ್ಪಳ ಜಿಲ್ಲೆಯ ಸರ್ಕಾರಿ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಿಜ್ಞಾನ ಮತ್ತು ವಾಣಿಜ್ಯ ಬಾಲಕಿಯರ ಪದವಿ ಪೂರ್ವ ವಸತಿ ಕಾಲೇಜ್ ಯಲಬುರ್ಗಾ, ಮೌಲಾನ ಆಜಾದ್ ಮಾದರಿ ಶಾಲೆ, ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳು ನಿರ್ವಹಣೆಯಾಗುತ್ತಿದ್ದು, ಈ ವಸತಿ ಕಾಲೇಜು ಹಾಗೂ ಶಾಲೆಗಳಿಗೆ  ಪ್ರಸಕ್ತ ಸಾಲಿಗಾಗಿ ಪಾಠ ಭೋದನೆಗಾಗಿ ಗೌರವಧನ ಆಧಾರದ ಮೇಲೆ ವಿವಿಧ ವಿಷಯವಾರು ಅತಿಥಿ ಉಪನ್ಯಾಸಕರು/ ಶಿಕ್ಷಕರನ್ನು ಗೌರವಧನ ಆಧಾರದ ಮೇಲೆ ಆಯ್ಕೆ ಮಾಡಿಕೊಳ್ಳಲಾಗುವುದು.
ಖಾಲಿ ಇರುವ ಭೋದಕ ಹುದ್ದೆಗಳ ವಿವರ;
ಸರ್ಕಾರಿ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಿಜ್ಞಾನ ಮತ್ತು ವಾಣಿಜ್ಯ ಬಾಲಕಿಯರ ಪದವಿ ಪೂರ್ವ ವಸತಿ ಕಾಲೇಜ್ ಯಲಬುರ್ಗಾ, ಇಲ್ಲಿ ಎಂ.ಎಸ್.ಸಿ ಬಿ.ಎಡ್ ಪದವಿಧರ ಫಿಜಿಕ್ಸ್ (ಭೌತಶಾಸ್ತç), ಮೆತೆಮೆಟಿಕ್ಸ್ (ಗಣಿತ), ಜೀವಶಾಸ್ತç (ಜೂವಲಾಜಿ & ಬಾಟ್ನಿ) ಈ ವಿಷಗಳಲ್ಲಿ ತಲಾ 01 ಉಪನ್ಯಾಸಕರು, ಎಂ.ಎ ಬಿ.ಎಡ್ ಪದವಿಧರ ಇತಿಹಾಸ, ವಾಣಿಜ್ಯ ಶಾಸ್ತç ಹಾಗೂ ಅರ್ಥಶಾಸ್ತç ಈ ವಿಷಗಳಲ್ಲಿ ತಲಾ 01 ಉಪನ್ಯಾಸಕರ ಹುದ್ದೆ ಖಾಲಿ ಇವೆ.  ಮೌಲಾನಾ ಆಜಾದ್ ಮಾದರಿ ಶಾಲೆಯ ಕೊಪ್ಪಳ ಜಿಲ್ಲೆಯಲ್ಲಿ ಬಿ.ಎಡ್ (ಟಿಇಟಿ) ಪದವಿಧರ ಕನ್ನಡ-01, ಇಂಗ್ಲಿÃಷ್-03, ಉರ್ದು-01, ಗಣಿತ-02, ಸಮಾಜ ವಿಜ್ಞಾನ-05, ವಿಜ್ಞಾನ-06 ಹಾಗೂ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ ಹಿರೇಬೆಣಕಲ್-1 ಇಲ್ಲಿ ಎಮ್.ಎಸ್‌ಸಿ. ಕಂಪ್ಯೂಟರ್ ಪದವಿಯ ಗಣಕಯಂತ್ರ ಶಿಕ್ಷಕರ 01 ಹುದ್ದೆ ಖಾಲಿ ಇವೆ.
ಪದವಿ ಪೂರ್ವ ವಸತಿ ಕಾಲೇಜಿನ ಅತಿಥಿ ಉಪನ್ಯಾಸಕರ  ಗೌರವಧನ ಮಾಹೆಯಾನ ರೂ.12000/-, ವಸತಿ ಶಾಲೆ ಶಿಕ್ಷಕರು ಗೌರವಧನ ರೂ.10000/- ಹಾಗೂ ಮೌಲಾನ ಆಜಾದ್ ಶಿಕ್ಷಕರ ಗೌರವಧನ ರೂ. 8000/- ಗಳನ್ನು ನಿಗದಿಪಡಿಸಿದೆ.  ಉಪನ್ಯಾಸಕರ/ ಶಿಕ್ಷಕರ ಹಾಜರಾತಿ ಪ್ರತ್ಯೆÃಕ ವಹಿಯಲ್ಲಿ ನಿರ್ವಹಿಸುವುದು.  ಉಪನ್ಯಾಸಕರ/ ಶಿಕ್ಷಕರ ಸೇವೆಯು ನೇರ ನೇಮಕಾತಿ ಮೂಲಕ ಶಿಕ್ಷಕರ/ ಉಪನ್ಯಾಸಕರನ್ನು ಭರ್ತಿ ಮಾಡಿಕೊಳ್ಳುವವರಗೆ ಅಥವಾ 2019-20ನೇ ಸಾಲಿನ ಶೈಕ್ಷಣಿಕ ವರ್ಷದ ಅಂತ್ಯದ ವರಗೆ ಅಂದರೆ ಮಾರ್ಚ-2020 ರವರಗೆ ಮಾತ್ರ ಸೀಮಿತವಾಗಿರುತ್ತದೆ.  ಈ ಸೇವೆ ತಾತ್ಕಾಲಿಕವಾಗಿ ಪಡೆಯಲಾಗಿದ್ದು, ಸೇವೆ ಖಾಯಂ ನೇಮಕಾತಿ ಅಥವಾ ಯಾವುದೇ ತರಹದ ಸೇವಾ ಕೃಪಾಂಕಕ್ಕೆ ಅರ್ಹರಿರುವುದಿಲ್ಲ.  ನೇಮಕಾತಿ ಅಧಿಸೂಚಿಸಿದ (ನೇರ ನೇಮಕಾತಿ) ವಸತಿ ಶಾಲೆ/ ಕಾಲೇಜು ಹಾಗೂ ಮಾದರಿ ಶಾಲೆ ಶಿಕ್ಷಕರ/ ಉಪನ್ಯಾಸಕರು ನೇಮಕಗೊಂಡು ಕರ್ತವ್ಯಕ್ಕೆ ಹಾಜರಾದ ತಕ್ಷಣ ಅತಿಥಿ ಉಪನ್ಯಾಸಕರ ಹುದ್ದೆಗಳು ತಂತಾನೆ ರದ್ದಾಗುವುದು.
ಅರ್ಜಿ ಸಲ್ಲಿಸಲು ಜೂನ್. 10 ಕೊನೆಯ ದಿನವಾಗಿದ್ದು, ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಜಿಲ್ಲಾ ಆಡಳಿತ ಭವನ ಕೊಪ್ಪಳ ಇವರಿಗೆ ಅರ್ಜಿ ಸಲ್ಲಿಸಬಹುದಾಗಿದೆ.  ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 08539-225070 ಕ್ಕೆ  ಸಂಪರ್ಕಿಸಬಹುದಾಗಿದೆ ಕೊಪ್ಪಳ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಮಹಿಮೂದ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ

Please follow and like us:
error