ವಿವಿಧ ಕಾಮಗಾರಿಗಳ ಸ್ಥಳಕ್ಕೆ ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್ ಭೇಟಿ : ಪರಿಶೀಲನೆ


ಕೊಪ್ಪಳ ಸೆ.  : ಕೊಪ್ಪಳ ನಗರದ ವಿವಿಧ ಕಾಮಗಾರಿಗಳ ಸ್ಥಳಕ್ಕೆ ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್ ಅವರು ಇಂದು (ಸೆ.12) ಅನಿರೀಕ್ಷಿತವಾಗಿ ಭೇಟಿ ನೀಡಿ ಪರಿಶೀಲಿಸಿದರು.
ನಗರದಲ್ಲಿ ನಿರ್ಮಾಣ ಮಾಡಲಾಗುತ್ತಿರುವ ರಂಗಮಂದಿರ ಹಾಗೂ ತಾಲ್ಲೂಕು ಕ್ರಿÃಡಾಂಗಣಕ್ಕೆ ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್ ಅವರು ಭೇಟಿ ನೀಡಿ ಕಾಮಗಾರಿ ವೀಕ್ಷಣೆ ಮಾಡಿದರು.  ಕೊಪ್ಪಳ-ಭಾಗ್ಯನಗರ ರಸ್ತೆ, ಭಾಗ್ಯನಗರದ ಓಜನಹಳ್ಳಿ ಸಿಸಿ ರಸ್ತೆ ಕಾಮಗಾರಿಗಳನ್ನು ಪರಿಶೀಲಿಸಿದರು.  ಗಣೇಶ ನಗರಕ್ಕೆ ಭೇಟಿ ನೀಡಿ, ಗ್ರಂಥಾಲಯ ಕಾಮಗಾರಿ ವೀಕ್ಷಿಸಿ ಜಿಲ್ಲಾ ಕ್ರಿÃಡಾಂಗಣಕ್ಕೆ ತೆರಳಿ ಅಲ್ಲಿನ ಕಾಮಗಾರಿಯನ್ನು ಪರಿಶೀಲಿಸಿದರು.  ಅಪೀಲು ಪ್ರಕರಣಗಳು ಹಾಗೂ ಕೆರೆಹಳ್ಳಿ ಪ್ರಕರಣಗಳ ಕುರಿತು ಹಾಗೂ ಅಬಕಾರಿ ನಿರೀಕ್ಷಕ ಮಹಾದೇವ ಪ್ರಸಾದ್ ಪ್ರಕರಣದ ಬಗ್ಗೆ ಈ ಸಂದರ್ಭ ವಿಚಾರಣೆ ಮಾಡಿದರು. ನಿರ್ಮಿತಿ ಕೇಂದ್ರ ಹಾಗೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Please follow and like us:
error

Related posts