ವಿಚಾರವಾದಿಗಳು  ಹಾಗೂ ಪತ್ರಕರ್ತರ ಹತ್ಯೆ ಖಂಡಿಸಿ ಕೊಪ್ಪಳದಲ್ಲಿ ಲೇಖನಿ ರಕ್ಷಿಸಿ ಚಳುವಳಿ

ಕೊಪ್ಪಳ : ಸಂಶೋಧಕ ಡಾ.ಎಂ.ಎಂ.ಕಲ್ಬುರ್ಗಿ, ಪತ್ರಕರ್ತೆ ಗೌರಿ ಲಂಕೇಶ್ ಹಂತಕರನ್ನು ಬಂಧಿಸಿ ಜನಪರ ಚಿಂತನೆಗೆ ನ್ಯಾಯ ದೊರಕಿಸುವಂತೆ ಆಗ್ರಹಿಸಿ ಮತ್ತು ಹಂತಕರನ್ನು ಬಂಧಿಸುವ ಜತೆಗೆ ವಿಚಾರವಾದಿಗಳ ಸಾವನ್ನು ಸಂಭ್ರಮಿಸುತ್ತಿರುವ ಕೊಲೆಗಡುಕ ಮನಸುಗಳಿಗೆ ಕಡಿವಾಣ ಹಾಕಲು ಒತ್ತಾಯಿಸಿ ಕೊಪ್ಪಳದಲ್ಲಿ ಲೇಖನಿ ರಕ್ಷಿಸಿ ಚಳುವಳಿ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ಕೊಪ್ಪಳದಲ್ಲಿಂದು ಪತ್ರಕರ್ತರು, ಸಾಹಿತಿಗಳು, ಹೋರಾಟಗಾರರು ಹಾಗೂ ಸಮಾನಮನಸ್ಕರು ಅಭಿವ್ಯಕ್ತಿ ಸ್ವಾತಂತ್ರ್ಯ  ರಕ್ಷಿಸುವಂತೆ  ಒತ್ತಾಯಿಸಿದರಲ್ಲದೇ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಎಂ.ಎಂ.ಕಲ್ಬುರ್ಗಿಯವರ ಹತ್ಯೆ ನಡೆದ ಸಂದರ್ಭದಲ್ಲಿ ೩೦ಕ್ಕೂ ಹೆಚ್ಚು ಸಾಹಿತಿಗಳು ಪ್ರಶಸ್ತಿಗಳನ್ನು ಮರಳಿಸುವುದರ ಮೂಲಕ ತಮ್ಮ ಪ್ರತಿಭಟನೆಯನ್ನು ವ್ಯಕ್ತಪಡಿಸಿದ್ದರು. ಅದೇ ರೀತಿ ಇಂದೂ ಸಹ ಬರಹಗಾರರು ಮತ್ತು ಪತ್ರಕರ್ತರು ತಮ್ಮ ಲೇಖನಿಯನ್ನು ನೀಡುವ ಮೂಲಕ ರಕ್ಷಿಸಲು ಆಗ್ರಹಿಸಿದರು.  ಜಿಲ್ಲಾಧಿಕಾರಿಯ ಮೂಲಕ  ಮುಖ್ಯಮಂತ್ರಿಗಳಿಗೆ ಸಲ್ಲಿಸಿದ ಮನವಿಯ ಜೊತೆ ಪೆನ್  ಸಲ್ಲಿಸಲಾಯಿತು. ಜಿಲ್ಲಾಧಿಕಾರಿಗಳ ಅನುಪಸ್ಥಿತಿಯಲ್ಲಿ ಉಪವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಚಳುವಳಿಯಲ್ಲಿ  ಜೆ.ಭಾರದ್ವಾಜ, ಎಚ್.ವಿ.ರಾಜಾಬಕ್ಷಿ, ಸಿರಾಜ್ ಬಿಸರಳ್ಳಿ, ಬಸವರಾಜ್ ಶೀಲವಂತರ, ಕೆ.ಎಸ್.ಕೊಡತಗೇರಿ,ಸುನೀಲ್ ಭಾಸ್ಕರ್,ಶಿವಾನಂದ ಹೊದ್ಲೂರ, ಟಿ.ರಮೇಶ್, ಬಸವರಾಜ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
Please follow and like us:
error