ವಿಕೋಪ ನಿರ್ವಹಣೆಗೆ ಯೋಜನೆ ಸಹಕಾರಿ : ಬಾಲಚಂದ್ರ

ಕೊಪ್ಪಳ ಜೂ  : ಕೊಪ್ಪಳ ಜಿಲ್ಲಾ ವಿಕೋಪ ನಿರ್ವಹಣೆಯನ್ನು ಯಶಸ್ವಿಯಾಗಿ ನಿರ್ವಹಿಸಲು ಜಿಲ್ಲಾ ಮಟ್ಟದ ವಿಕೋಪ ನಿರ್ವಹಣಾ ಯೋಜನೆ ಸಹಕಾರಿಯಾಗುತ್ತದೆ ಎಂದು ಅಪರ ಜಿಲ್ಲಾಧಿಕಾರಿ ಬಾಲಚಂದ್ರ ಹೇಳಿದರು.
ಅವರು (ಜೂನ್. 06 ಹಾಗೂ 07 ರಂದು) ಕೊಪ್ಪಳ ಜಿಲ್ಲಾಡಳಿತ ಹಾಗೂ ವಿಕೋಪ ನಿರ್ವಹಣಾ ಕೇಂದ್ರ, ಆಡಳಿತ ತರಬೇತಿ ಸಂಸ್ಥೆ, ಮೈಸೂರು ಇವರ ಸಹಯೋಗದಲ್ಲಿ ಜಿಲ್ಲಾ ವಿಕೋಪ ನಿರ್ವಹಣಾ ಯೋಜನೆಯನ್ನು ಪರಿಷ್ಕರಿಸುವ ಸಲುವಾಗಿ, ಜಿಲ್ಲಾ ತರಬೇತಿ ಸಂಸ್ಥೆಯಲ್ಲಿ ಆಯೋಜಿಸಲಾಗಿದ್ದ 02 ದಿನಗಳ ಕಾರ್ಯಗಾರ ಉದ್ಘಾಟಿಸಿ ಮಾತನಾಡಿದರು.
ವಿಕೋಪ ನಿರ್ವಹಣಾ ಕಾಯಿದೆ-2005 ರ ಪ್ರಕಾರ ನಮ್ಮ ದೇಶದ ಪ್ರತಿ ಜಿಲ್ಲೆಯಲ್ಲಿ ಜಿಲ್ಲಾ ವಿಕೋಪ ನಿರ್ವಹಣಾ ಪ್ರಾಧಿಕಾರ ಹಾಗೂ ಜಿಲ್ಲಾ ವಿಕೋಪ ನಿರ್ವಹಣಾ ಯೋಜನೆ ಕಡ್ಡಾಯವಾಗಿ ಇರಬೇಕು. ಈ ನಿಟ್ಟಿನಲ್ಲಿ ಅಧಿಕಾರಿಗಳು ತಮ್ಮ- ತಮ್ಮ ಇಲಾಖೆ ಮಾಹಿತಿಗಳೊಂದಿಗೆ ವಿಕೋಪ ನಿರ್ವಹಣಾ ಯೋಜನೆಯ ಪರಿಷ್ಕರಣೆಗೆ ಸಹಕರಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಬಾಲಚಂದ್ರ ತಿಳಿಸಿದರು.
ವಿಕೋಪ ನಿರ್ವಹಣಾ ಕೇಂದ್ರ, ಆಡಳಿತ ತರಬೇತಿ ಸಂಸ್ಥೆ, ಮೈಸೂರು ಬೋಧಕರಾದ ಡಾ.ಪರಮೇಶ ಜೆ.ಆರ್. ಮಾತನಾಡಿ, ವ್ಯವಸ್ಥಿತ ಮಾಹಿತಿಗಳು ಹಾಗೂ ಸೂಕ್ತ ಜವಾಬ್ಧಾರಿಗಳೊಂದಿಗೆ ವಿಕೋಪ ನಿರ್ವಹಣೆಗೆ ಸನ್ನದ್ದರಾಗಲು ಅಧಿಕಾರಿಗಳಿಗೆ ಸಲಹೆ ನೀಡಿದರು.  ವಿಕೋಪ ನಿರ್ವಹಣೆಯ ಹಂತಗಳಾದ ವಿಕೋಪ ತಡೆಗಟ್ಟುವಿಕೆ, ಪೂರ್ವ ಸಿದ್ದತೆ, ಸೂಕ್ತ ಸ್ಪಂದನೆ ಹಾಗೂ ಪುರ್ನವಸತಿ ಸಂದರ್ಭಗಳಲ್ಲಿ ವ್ಯಸಸ್ಥತ ಮಾಹಿತಿ ಹಾಗೂ ಸೂಕ್ತ ಜವಾಬ್ಧಾರಿಗಳೊಂದಿಗೆ ಸಿದ್ದರಿರಬೇಕೆಂದು ಕೊಪ್ಪಳ ಜಿಲ್ಲೆಯ ಅಧಿಕಾರಿಗಳಿಗೆ ಸಲಹೆ ನೀಡಿದರು. 02 ದಿನಗಳ ಕಾರ್ಯಗಾರದ ಸಂಯೋಜಕರಾಗಿ ಕೊಪ್ಪಳ ಜಿಲ್ಲಾ ವಿಪ್ಪತ್ತು ನಿರ್ವಹಣಾ ಯೋಜನೆಯಲ್ಲಿ ವಿಪತ್ತು ತಡೆಗಟ್ಟುವಿಕೆ, ವಿಪತ್ತು ಬಂದ ಸಂದರ್ಭದಲ್ಲಿ ಸೂಕ್ತ ಸ್ಪಂದನೆ ಹಾಗೂ ಪುನರ್‌ವಸತಿ ಸಂದರ್ಭದಲ್ಲಿ ಯೋಜನೆಯೂ ಹೇಗೆ ಉಪಯುಕ್ತವಾಗುತ್ತದೆ. ಮಾಹಿತಿಗಳನ್ನು ಹೇಗೆ ಕ್ರೊÃಢಿಕರಿಸಬೇಕು ವಿಪತ್ತು ಯೋಜನೆ ಸಿದ್ಧಪಡಿಸುವ ಸಂದರ್ಭದಲ್ಲಿ ಜಿಲ್ಲಾ ಮಟ್ಟದ ಅಪಾಯಗಳ, ಜಿಲ್ಲಾ ಮಟ್ಟದಲ್ಲಿರುವ ದುರ್ಬಲತೆ ಆಗಲಿರುವ ನಷ್ಠ ಹಾಗೂ ಜಿಲ್ಲಾ ಮಟ್ಟದ ಸಾಮರ್ಥ್ಯಗಳನ್ನು ಗುರುತಿಸಿಕೊಂಡು ಇವುಗಳ ಆಧಾರದ ಮೇಲೆ ತಡೆಗಟ್ಟುವಿP,É ಸ್ಪಂದನೆ ಹಾಗೂ ಪುನರ್‌ವಸತಿ ಯೋಜನೆಗಳನ್ನು ರೂಪಿಸಬೇಕೆಂದು ತಿಳಿಸಿದರು.
ವಿಕೋಪ ನಿರ್ವಹಣಾ ಕಾಯಿದೆ-2005 ರ ಬಗ್ಗೆ ಪರಿಚಯಿಸುವುದರ ಮೂಲಕ, ವಿಕೋಪ ನಿರ್ವಹಣೆ ಕಾಯಿದೆ -2005 ರಂತೆ, ವಿಕೋಪ ಹಾಗೂ ವಿಕೋಪ ನಿರ್ವಹಣೆಯ ಪರಿಕಲ್ಪನೆಗಳು, ರಾಷ್ಟಿçÃಯ ಹಾಗೂ ರಾಜ್ಯ ಮಟ್ಟದ ವಿಕೋಪ ನಿರ್ವಹಣಾ ಪ್ರಾಧಿಕಾರಗಳು ಹಾಗೂ ಜವಾಬ್ದಾರಿಉಗಳು, ರಾಷ್ಟç ಹಾಗೂ ರಾಜ್ಯ ಮಟ್ಟದ ವಿಕೋಪ ನಿರ್ವಹಣಾ ಯೋಜನೆಗಳು ಹಾಗೂ ಪ್ರತೀ ವರ್ಷದ ಪರಿಷ್ಕರuಯ ಜವಾಬ್ದಾರಿÉ,  ಪ್ರತೀ ಜಿಲ್ಲೆಯಲ್ಲಿ ಇರಬೇಕಾದ ಜಿಲ್ಲಾ ಮಟ್ಟದ ವಿಕೋಪ ನಿರ್ವಹಣಾ ಪ್ರಾಧಿಕಾರ ಹಾಗೂ ಸ್ಥಳೀಯ ವಿಕೋಪ ನಿರ್ವಹಣಾ ಪ್ರಾಧಿಕಾರಗಳು,  ವಿಕೋಪ ನಿರ್ವಹಣಾ ಸಮಿತಿಗಳು, ಜಿಲ್ಲಾ ಮಟ್ಟದ ವಿಕೋಪ ನಿರ್ವಹಣಾ ಯೋಜನೆ ಹಾಗೂ ಪ್ರತೀ ವರ್ಷದ ಪರಿಷ್ಕರಣೆ, ಇಲಾಖಾ ಮಟ್ಟದ ಜವಾಬ್ಧಾರಿಗಳು ಇವುಗಳ ಬಗ್ಗೆ ವಿವರಿಸಿದರು.  ರಾಷ್ಟಿçÃಯ ವಿಕೋಪ ನಿರ್ವಹಣಾ ಪ್ರಾಧಿಕಾರದವರು ವಿಪತ್ತು ನಿರ್ವಹಣಾ ಯೋಜನೆಗೆ ಸಿದ್ದಪಡಿಸಿರುವ ಮಾರ್ಗದರ್ಶಿ ಆಧಾರದ ಮೇಲೆ ಸೂಕ್ತ ನಮೂನೆಗಳನ್ನು ಕಾರ್ಯಗಾರದಲ್ಲಿ ಪರಿಚಯಿಸಿದರು. ಭೌಗೋಳಿಕ  ಮಾಹಿತಿ ವ್ಯವಸ್ಥೆ ಹಾಗೂ ದೂರ ಸಂವೇದಿ (ಜಿಐಎಸ್, ಜಿಪಿಎಸ್ & ದೂರ ಸಂವೇಧಿ) ಸೂಕ್ತ ರೀತಿಯಲ್ಲಿ ಬಳಸಿಕೊಳ್ಳವುದು ವಿಪತ್ತು ನಿರ್ವಹಣೆ ಯೋಜನೆಗೆ  ಸಹಕಾರಿಯಾಗುತ್ತದೆಯೆಂದು ತಿಳಿಸಿದರು.
ಕಾರ್ಯಗಾರದಲ್ಲಿ ಭಾಗವಹಿಸಿದ್ದ ಜಿಲ್ಲಾ ಮಟ್ಟದ ವಿವಿಧ ಇಲಾಖಾ ಮಟ್ಟದ ಅಧಿಕಾರಿಗಳು ಮೂರು ತಂಡಗಳನ್ನಾಗಿ ಮಾಡಿಕೋಂಡು, ವಿಕೋಪ ನಿರ್ವಹಣಾ ಯೋಜನೆ ಹಂತಗಳಾದ ಜಿಲ್ಲಾ ಮಟ್ಟದ ಅಪಾಯ, ನಷ್ಠ, ದುರ್ಬಲತೆ ಹಾಗೂ ಸಾಮರ್ಥ್ಯಗಳನ್ನು ಗುರುತಿಸಿಕೋಂಡು ವಿಕೋಪ ತಡೆಗಟ್ಟುವಿಕೆ, ಪೂರ್ವ ಸಿದ್ದತೆ, ಸೂಕ್ತ ಸ್ಪಂದನೆ ಹಾಗೂ ಪುರ್ನವಸತಿಗಳ ಯೋಜನೆಗಳ ಬಗ್ಗೆ ಗುಂಪುಗಳಲ್ಲಿ ಚರ್ಚಿಸಿ ಗುಂಪು ಮಂಡನೆ ಮಾಡಿದರು.  ಎಲ್ಲಾ ಇಲಾಖೆಗಳ ಮಾಹಿತಿ ಹಾಗೂ ಯೋಜನೆ ಒಂದಡೆಯಲ್ಲಿ ಕ್ರೊÃಡೀಕೃತವಾಗಬೇಕು ಮತ್ತು ಈ ಮಾಹಿತಿ ಎಲ್ಲರಿಗೂ ಸಿಗುವಂತಿರಬೇಕು ಎಂದು ನಿರ್ಧರಿಸಿದರು.
ಜಿಲ್ಲಾ ಮಟ್ಟದ ಇಲಾಖೆಗಳಾದ ಅಗ್ನಿಶಾಮಕ, ಗೃಹ ರಕ್ಷಕ, ಆರೋಗ್ಯ, ಪಂಚಾಯತ್ ರಾಜ್, ನಗಾರಾಭಿವೃದ್ದಿ, ಆಹಾರ ಮತ್ತು ನಾಗರೀಕ ಸರಬರಾಜು, ಮಹಿಳಾ ಮತ್ತು ಮಕ್ಕಳ ಅಭಿವೃದಿ,್ಧ ಸಮಾಜ ಕಲ್ಯಾಣ, ಅರಣ್ಯ,À ಗಣಿ ಮತ್ತು ಭೂ ವಿಜ್ಙಾನ, ಗ್ರಾಮಿಣಾಭಿವೃದ್ದಿ, ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಕೃಷಿ, ತೋಟಗಾರಿಕೆ, ರೇಷ್ಮೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಪಶುಪಾಲನಾ,. ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗ, ಮುಂತಾದ  “ಎ” ಮತ್ತು “ಬಿ” ವೃಂದದ ಸುಮಾರು 36 ಅಧಿಕಾರಿಗಳು ಭಾಗವಹಿಸಿದ್ದರು.
ಕೊಪ್ಪಳ ಜಿಲ್ಲಾ ವಿಕೋಪ ನಿರ್ವಹಣಾ ತಜ್ಞರಾದ .ಡಾ. ಶಿವರಾಜ್ ಅವರು ಅಧಿಕಾರಿಗಳಲ್ಲಿ ಕೊಪ್ಪಳ ಜಿಲ್ಲಾ ವಿಕೋಪ ನಿರ್ವಹಣಾ ಯೋಜನೆ ಪರಷ್ಕರಣೆಗೆ ಅಗತ್ಯವಾದ ಮಾಹಿತಿಗಳನ್ನು ಒದಗಿಸಲು ಕೋರಿಕೆ ಸಲ್ಲಿಸಿದರು.
ಜಿಲ್ಲಾ ತರಬೇತಿ ಸಂಸ್ಥೆ, ಕೊಪ್ಪಳ ಇಲ್ಲಿನ ಪ್ರಭಾರ ಪ್ರಾಚಾರ್ಯರಾದ  ಜಿ.ಕೆ. ಕಿರಣ್‌ಕುಮಾರ್, ಹಾಗೂ ಸಿಬ್ಬಂದಿ ವರ್ಗದವರು ಈ ಕಾರ್ಯಗಾರದ ಯಶಸ್ವಿಗೆ ಸಹಕರಿಸಿದರು.
(ಫೋಟೋ ಕಳುಹಿಸಿದೆ)

Please follow and like us:
error