ವಿಕಲಚೇತನರಿಗೆ ವಿಶೇಷ ಪ್ಯಾಕೇಜ್ ಘೋಷಣೆಗೆ:ಬೀರಪ್ಪ ಅಂಡಗಿ ಒತ್ತಾಯ


ಕೊಪ್ಪಳ: ವಿಕಲಚೇತನರಗೂ ಕೂಡಾ ವಿಶೇಷ ಪ್ಯಾಕೇಜ್ ನ್ನು ಘೋಷಣೆ ಮಾಡುವಂತೆ ವಿಕಲಚೇತನ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಬೀರಪ್ಪ ಅಂಡಗಿ ಚಿಲವಾಡಗಿ ಮುಖ್ಯಮಂತ್ರಿಗಳನ್ನು ಒತ್ತಾಯಿಸಿದ್ದಾರೆ.
ಈ ವಿಷಯದ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು ಮುಖ್ಯಮಂತ್ರಿಗಳು ವಿವಿಧ ವಲಯಗಳನ್ನು ಗುರುತಿಸಿ ಹಾಗೂ ಅವರ ಸಂಕಷ್ಟವನ್ನು ಅರಿತು ಅವರಿಗಾಗಿ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿರುವುದು ಮಾದರಿಯ ಕಾರ್ಯವಾಗಿದೆ.ಅದರ ಜೊತೆಯಲ್ಲಿ ರಾಜ್ಯದಲ್ಲಿ ಇರುವ ಸುಮಾರು ೩೦ ಲಕ್ಷ ನಿರುದ್ಯೋಗಿ ವಿಕಲಚೇತನರ ಬದುಕು ಕೂಡಾ ಸಂಕಷ್ಟದ ಸ್ಥಿತಿಯಲ್ಲಿ ಇದ್ದು ಜೀವನ ನಿರ್ವಹಣೆ ಕಷ್ಟವಾಗಿದೆ.ಆರ್ಥಿಕವಾಗಿ ಸದೃಢವಿಲ್ಲದ ವಿಕಲಚೇನರ ಸಮಸ್ಯೆಗಳನ್ನು ಸರಕಾರವು ಅರಿತು ಲಾಕ್ ಡೌನ್ ನಲ್ಲಿ ವಿಶೇಷ ವಲಯಗಳಿಗೆ ನೀಡಿರುವ ಪ್ಯಾಕೇಜ್ ನಂತೆ ವಿಕಲಚೇತನರಿಗೂ ಕೂಡಾ ವಿಶೇಷವಾದ ಪ್ಯಾಕೇಜ್ ನ್ನು ಮುಖ್ಯಮಂತ್ರಿಗಳು ಘೋಷಣೆ ಮಾಡುವುದರ ಮೂಲಕ ವಿಕಲಚೇತನರಿಗೆ ಅನುಕೂಲ ಮಾಡಿಕೊಡುವಂತೆ ಮನವಿ ಮಾಡಿದ್ದಾರೆ.

Please follow and like us:
error