ವಾಹನವೂ ಇಲ್ಲ – ಹಣ ಕೂಡ ಕಳೆದುಕೊಂಡಿದ್ದೇನೆ ನ್ಯಾಯ ಕೊಡಿಸಿ -ಕನಕರಾಯಪ್ಪ

Koppal News  ಕಳೆದ ಆರು ವರ್ಷಗಳ ಹಿಂದೆ ಮಹಿಂದ್ರ ಮಿನಿ ವ್ಯಾನ ಅನ್ನು ಹೊಸಪೇಟೆಯ ಬಳ್ಳಾರಿ ಮೋಟರ್‍ಸ್ ಸೇಲ್ಸ್ ಪ್ರವೇಟ್ ಲಿಮಿಟೆಡ್ ನಲ್ಲಿ ಖರೀದಿ ಮಾಡಿದ ವ್ಯಕ್ತಿಯೋರ್ವವ ನನಗೆ ಕಂಪನಿ ಅನ್ಯಾಯ ಮಾಡಿದೆ. ಖರೀದಿ ಮಾಡಿದ ಮೂರೆ ತಿಂಗಳಲ್ಲಿ ವ್ಯಾನ್ ಪದೇ ಪದೇ ಕೆಟ್ಟು ನಿಲ್ಲುತ್ತಿತ್ತು. ರಿಪೇರಿಗೆ ಅಂತ ಶೋ ರೂಂಗೆ ಬಿಟ್ಟರೆ ಇಂಜೇನ್ ಸಮಸ್ಯೆ ಎಂದು ೪೫ ಸಲ ಬಿಚ್ಚಿ ಸುಮಾರು ೭೫೦೦೦ ಸಾವಿರ ಬಿಲ್ ಮಾಡಿ ನನಗೆ ವಂಚಿಸಿದ್ದಾರೆ ಎಂದು ಅಳಲು ತೋಡಿಕೊಂಡಿದ್ದಾನೆ.

ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಕೊಪ್ಪಳ ಜಿಲ್ಲೆಯ ಬಸಪೂರದ ಕನಕರಾಯಪ್ಪ ಹೊಸಪ್ಭೆಟೆಯ ಮಹಿಂದ್ರ ಶೋ ರೂಂಲ್ಲಿ ದುಡಿದು ತಿನ್ನಲು ಸಾಲ ಮಾಡಿ ೩.೮೦೦೦ ರೂ ಗಳ ಮಿನಿ ವ್ಯಾನ್ ೨೦೧೨ ರಲ್ಲಿ ಖರೀದಿಸಿದ್ದಾರೆ. ೮೦೦೦೦ ರೂ ಮುಂಗಡ ಹಣ ನೀಡಿದ್ದಾರೆ. ಉಳಿದ ಹಣ ಫೈನಾನ್ಸ್ ಮಾಡಿದ್ದಾರೆ. ಒಟ್ಟು ೪೭ ಕಂತುಗಳಲ್ಲಿ ಹಣ ಕಟ್ಟಬೇಕಾಗಿತ್ತು. ಸಾಲಸೋಲ ಮಾಡಿ ೨ ಲಕ್ಷ ೫ ಸಾವಿರ ಹಣವನ್ನು ಕನಕರಾಯ ಕಟ್ಟಿದ್ದಾರೆ. ಇನ್ನು ೨ ಲಕ್ಷ ೯೫೦೦೦ ರೂ ಕಟ್ಟಬೇಕಾಗಿತ್ತು ಆದ್ರೆ ಕೇವಲ ಒಚಿದು ವರ್ಷ ಮಾತ್ರ ವಾಹನ್ ನಡೆಸಿದ್ದು ೨೦೧೩ ನಚಿತರ ವಾಹನ ಕೆಟ್ಟು ಹೊಸಪೇಟೆ ಶೋ ರೂಂ ನಲ್ಲಿ ನಿಂತಿದೆ. ಆದ್ರೆ ಮಹೀಚಿದ್ರ ಫೈನಾನ್ಸ್ ಮಾತ್ರ ಬಿಡಿ ಸೇರಿಸಿ ಇನ್ನು ೩ಲಕ್ಷ ೩೭೦೦೦ ಕಟ್ಟುವಂತೆ ನೋಟಿಸ್ ಕಳುಹಿಸಿದೆ. ಇದು ಸದ್ಯ ಬಳ್ಳಾರಿ ಜಿಲ್ಲಾ Uಹಕರ ಕೋರ್ಟ್‌ನಲ್ಲಿ ಕೇಸ್ ನಡೆಯುತ್ತಿದ್ದು, ಕನಕರಾಯ ನನಗೆ ಕಂಪನಿ ದ್ರೋಹ ಮಾಡಿದೆ. ಸಾಲಸೋಲ ಮಾಡಿ ಹಣ ಕಟ್ಟಿದ್ದೇನೆ ಮತ್ತೆ ಇಷ್ಟೊಂದು ಹಣ ಕಟ್ಟುವುದಕ್ಕೆ ನನ್ನಲ್ಲಿ ಹಣವಿಲ್ಲ. ಅತ್ತ ದುಡಿದು ತಿನ್ನಲು ವಾಹನವೂ ಇಲ್ಲ ಇತ್ತ ಹಣ ಕೂಡ ಕಳೆದುಕೊಂಡಿದ್ದೇನೆ. ನನಗೆ ನ್ಯಾಯ ಕೊಡಿಸಿ ಅಂತ ಮಾಧ್ಯಮದವರ ಮುಂದೆ ಅಳಲು ತೋಡಿಕೊಂಡರು.

Please follow and like us:
error