You are here
Home > Koppal News > ವಾಲ್ಮೀಕಿ ಜಯಂತಿ ಆಚರಣೆಯಲ್ಲಿ ಸಿ.ವಿ ಚಂದ್ರಶೇಖರ ಭಾಗಿ

ವಾಲ್ಮೀಕಿ ಜಯಂತಿ ಆಚರಣೆಯಲ್ಲಿ ಸಿ.ವಿ ಚಂದ್ರಶೇಖರ ಭಾಗಿ

ಕೊಪ್ಪಳ : ತಾಲೂಕಿನ ಕುಣಿಕೇರಿ ಗ್ರಾಮದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆಯಲ್ಲಿ ಬಿಜೆಪಿ ರಾಷ್ಟ್ರೀಯ ಪರಿಷತ್ ಸದಸ್ಯ ಸಿ.ವಿ. ಚಂದ್ರಶೇಖರ ಭಾಗಿಯಾಗಿ ಮಹರ್ಷಿಯ ಭಾವಚಿತ್ರಕ್ಕೆ ಮಾರ್ಲಾಪಣೆ ಮಾಡಿ ಮಹರ್ಷೀ ವಾಲ್ಮೀಕಿಯು ಇಡೀ ಜಗತ್ತಿಗೆ ಮಹಾಕಾವ್ಯ ರಾಮಾಯಣ ಗ್ರಂಥವನ್ನು ಕೊಡುಗೆ ನೀಡಿದ್ದಾರೆ ಇಂದು ನಮ್ಮ ಪೂರ್ವಜರ ಗತಕಾಲದ ಇತಿಹಾಸವನ್ನು, ನಮ್ಮ ಸಂಸ್ಕೃತಿಯನ್ನು ತಿಳಿಸಿದ ಮೂಲ ಪುರಷರಾಗಿದ್ದಾರೆ. ಪ್ರತಿ ಗ್ರಾಮಗಳಲ್ಲಿ ಎಲ್ಲಾ ಜನಾಂಗದವರು ಜಯಂತಿಯನ್ನು ಆಚರಿಸುವಂತಾಗಬೇಕು ಆ ಮೂಲಕ ಪ್ರತಿ ಮನೆ ಮನೆಗಳಲ್ಲಿ ಮಹರ್ಷಿ ವಾಲ್ಮೀಕಿಯ ಆದರ್ಶ ತತ್ವಸಿದ್ದಾಂತಗಳು ಅಳವಡಿಸಿಕೊಳ್ಳಬೇಕು ಎಂದರು.

ಈ ಸಂದರ್ಭದಲ್ಲಿ ಜಿ.ಪಂ ಸದಸ್ಯ ರಾಮಣ್ಣ ಚೌಡ್ಕಿ, ತಾ.ಪಂ ಸದಸ್ಯ ಚಂದ್ರಕಾಂತ ನಾಯಕ, ಎಪಿಎಂಸಿ ಸದಸ್ಯ ಜಡಿಯಪ್ಪ ಬಂಗಾಳಿ, ಬಿಜೆಪಿ ಮುಖಂಡ ದೇವರಾಜ ಹಾಲಸಮುದ್ರ ಹಾಗೂ ಗ್ರಾಮದ ಹಿರಿಯರಾದ ಹನುಮಗೌಡ ಮಾಲಿಪಾಟೀಲ, ಭರಮಣ್ಣ ಕಾತರಕಿ, ಗೀರಿಯಪ್ಪ ಡಂಬ್ರಳ್ಳಿ, ಯಂಕಪ್ಪ ಪೂಜಾರ, ರಮೇಶ ಡಂಬ್ರಳ್ಳಿ, ಹುಚ್ಚಪ್ಪ ಚೌದ್ರಿ, ಸಿದ್ದನಗೌಡ ಮಾಲಿಪಾಟೀಲ್, ಸಂಜೀವಗೌಡ ಪೋ.ಪಾಟೀಲ, ರಾಮಣ್ಣ ಬೇನಾಳ, ಹನುಮಪ್ಪ ಪೂಜಾರ, ರಮೇಶ ವಾಲಿಕಾರ, ದೊಡ್ಡಯಮನೂರಪ್ಪ ವಾಲಿಕಾರ, ಆನಂದ ಬೆಳವಿನಾಳ ವಾಲ್ಮೀಕಿ ಸಮುದಾಯದವರು ಇತರರು ಉಪಸ್ಥಿತರಿದ್ದರು.

Top