ವಾರ್ತಾ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳಿಗೆ ಕರುನಾಡ ಚೇತನ ಪ್ರಶಸ್ತಿ ಪ್ರದಾನ

ಕೊಪ್ಪಳ: ಮಾ-೩೦. ಜಿಲ್ಲಾಡಳಿತ ಭವನದ ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ಮಂಗಳವಾರ ವಿಶಾಲ ಪ್ರಕಾಶನದ ವತಿಯಿಂದ ವಿಶಾಲ ಪ್ರಕಾಶನದ ಬೆಳ್ಳಿಹಬ್ಬದ ಸಂಭ್ರಮ ಕಾರ್ಯಕ್ರಮದ ಅಂಗವಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗಳಿಗೆ
ಕರುನಾಡ ಚೇತನ ಎಂಬ ಪ್ರಶಸ್ತಿಯನ್ನು ನೀಡಿ, ಸನ್ಮಾನಿಸಲಾಯಿತು.

ಕಾರ್ಯಕ್ರಮದ ಸಂಘಟಕ ಹಿರಿಯ ಪತ್ರಕರ್ತರಾದ ಜಿ.ಎಸ್.ಗೋನಾಳ ಸನ್ಮಾನಿಸಿ ಮಾತನಾಡಿ, ಜಿಲ್ಲೆಯ ಅಭಿವೃದ್ದಿಗೆ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಸೇರಿದಂತೆ ಉಳಿದ ಎಲ್ಲಾ ಇಲಾಖೆಗಳೂ ನಿರಂತರವಾಗಿ ಸ್ಪಂದಿಸುತ್ತಿವೆ. ಅಂತಹ ಇಲಾಖೆಗಳ ಸುದ್ದಿಗಳನ್ನು, ಸಭೆ-ಸಮಾರಂಭಗಳ ಮಾಹಿತಿಯನ್ನು ಸಾರ್ವಜನಿಕರಿಗೆ ತಲುಪಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಮುದ್ರಣ ಹಾಗೂ ವಿದ್ಯುನ್ಮಾನ ಮಾಧ್ಯಮದ ಎಲ್ಲ ಪತ್ರಕರ್ತರಿಗೂ ವಿವಿಧ ಇಲಾಖೆಗಳ ಪ್ರಕಟಣೆಗಳು, ಸಭೆ, ಸಮಾರಂಭಗಳ ಸುದ್ದಿಗಳನ್ನು ತಲುಪಿಸುವಲ್ಲಿ ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಸೇವೆ ಅಭಿನಂದನೀಯವಾಗಿದೆ ಎಂದರು.

ದಿನವಿಡಿ ನಿಸ್ವಾರ್ಥ ಸೇವೆಯಲ್ಲಿ ತೊಡಗಿಕೊಂಡಿರುವ ವಾರ್ತಾ ಮತ್ತು ಪ್ರಚಾರ ಇಲಾಖೆಯ ಏಳು ಸಿಬ್ಬಂದಿಗಳನ್ನು ನಮ್ಮ ವಿಶಾಲ ಪ್ರಕಾಶನದ ಬೆಳ್ಳಿಹಬ್ಬದ ಸಂಭ್ರಮದಲ್ಲಿ ಸನ್ಮಾನಿಸಲಾಗಿದೆ. ಅವರನ್ನು ಕರುನಾಡ ಚೇತನ ಎಂಬ ಪ್ರಶಸ್ತಿಯನ್ನು ಪ್ರದಾನ ಮಾಡಿ, ಸನ್ಮಾನಿಸುತ್ತಿದ್ದೇವೆ . ಲಾಕ್ ಡೌನ್‌ನಲ್ಲಿ ಒಂದು ರೀತಿ ತುರ್ತು ಪರಿಸ್ಥಿತಿ ಇದ್ದ ಹಾಗೆ ಇತ್ತು ಇಂಥಹ ಕ?ದ ಕಾಲದಲ್ಲಿಯೂ ವಾರ್ತಾ ಇಲಾಖೆಯ ವಾರ್ತಾಧಿಕಾರಿ ಜಿ.ಸುರೇಶ , ಅವಿನಾಶ್ , ಅರುಣ , ತಿಪ್ಪಯ್ಯ ನಾಯ್ಡು , ಪಾಂಡುರಂಗ , ಆರಿಫ್ ಅಹ್ಮದ , ?ಣ್ಮುಖಪ್ಪ ಎಂ.ಜಿ. ವಾಹನ ಚಾಕಲರು ಇವರೆಲ್ಲರೂ ಪತ್ರಕರ್ತರನ್ನು ವಿವಿಧ ಜಿಲ್ಲಾ ಮಟ್ಟದ ಮತ್ತು ರಾಜ್ಯ ಮಟ್ಟದ ಕಾರ್ಯಕ್ರಮಗಳಿಗೆ ಸುರಕ್ಷಿತವಾಗಿ ಕರೆತರುವ ಕಾರ್ಯ ಮಾಡಿದ್ದಾರೆ. ಇಂತಹ ಮುಗ್ಧ ಸಿಬ್ಬಂದಿಗಳ ನಿಸ್ವಾರ್ಥ ಸೇವೆಯನ್ನು ಗುರುತಿಸಿ , ಸನ್ಮಾನಿಸುವುದು ನಮ್ಮ ನಿಮ್ಮೆಲ್ಲರ ಜವಾಬ್ದಾರಿಯಾಗಿರುವುದರಿಂದ ಅವರನ್ನು ಈ ಪುಸ್ತಕ ಬಿಡುಗಡೆಯ ಸಮಾರಂಭದ ಪ್ರಯುಕ್ತ ಸನ್ಮಾನಿಸಿ ಕರುನಾಡ ಚೇತನ ಪ್ರಶಸ್ತಿ ನೀಡಲಾಯಿತು. ಹಿರಿಯ ಪತ್ರಕರ್ತರಾದ ಹರೀಶ್ ಎಚ್.ಎಸ್., ಸಿದ್ದಪ್ಪ ಹಂಚಿನಾಳ, ಮಹೇಶಬಾಬು ಸುರ್ವೆ, ಎಂ.ಸಾದಿಕ್ ಅಲಿ, ಗಿರೀಶ್ ಕುಲಕರ್ಣಿ, ದೇವು ನಾಗನೂರು, ಉಮೇಶ ಪೂಜಾರ, ಯುಸೂಫ್ ಖಾನ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

Please follow and like us:
error