ವಾತ್ಸಲ್ಯ ಮಲ್ಟಿಸ್ಪೇಷಾಲಿಟಿ ಆಸ್ಪತ್ರೆ ಉದ್ಘಾಟನೆ

ವಾತ್ಸಲ್ಯದ ನಿಜವಾದ ಅರ್ಥ ಇನ್ನೊಬ್ಬರಿಗಾದ ನೋವು ನನ್ನ ನೋವು ಎಂದು ಹೃದಯ ಮಿಡಿಯುವುದು-ಅಭಿನವ ಗವಿಸಿದ್ದೇಶ್ವರ ಸ್ವಾಮಿ

ಕೊಪ್ಪಳ : ಬೆಂಗಳೂರಿನಲ್ಲಿ ಕೇಂದ್ರ ಕಚೇರಿಯನ್ನು ಹೊಂದಿರುವ ವಾತ್ಸಲ್ಯ ಮಲ್ಟಿಸ್ಪೇಷಾಲಿಟಿ ಆಸ್ಪತ್ರೆಯು ಕೊಪ್ಪಳದಲ್ಲಿ ಆಸ್ಪತ್ರೆಯನ್ನು ಆರಂಭಿಸಿದೆ. ಇಂದು ಆಸ್ಪತ್ರೆಯ ಉದ್ಘಾಟನೆಯನ್ನು ಗವಿಮಠದ ಅಭಿನವ ಗವಿಸಿದ್ದೇಶ್ವರ ಸ್ವಾಮಿಗಳು ನೆರವೇರಿಸಿದರು.
ಆಸ್ಪತ್ರೆಯನ್ನು ಉದ್ಘಾಟಿಸಿ ಆಶೀರ್ವಚನ ನೀಡಿದ ಶ್ರೀ ಅಭಿನವ ಗವಿಸಿದ್ದೇಶ್ವರ ಸ್ವಾಮಿಗಳು ಆಸ್ಪತ್ರೆಗಳು ಆರೋಗ್ಯದಾಸೋಹದ ಕೇಂದ್ರಗಳು. ನೊಂದವರ ಕಣ್ಣುಗಳನ್ನು ಒರೆಸುವುದು. ಬಿದ್ದ ವ್ಯಕ್ತಿಯನ್ನು ಕೈಹಿಡಿದು ಎತ್ತುವವರು ದೊಡ್ಡವರಾಗುತ್ತಾರೆ. ವೇದವನ್ನು ಓದಿದವರು ದೊಡ್ಡವರಾಗುವುದಿಲ್ಲ ವೇದನೆಯನ್ನು ಅರಿತವರು ದೊಡ್ಡವರಾಗುತ್ತಾರೆ ಇದು ವಾತ್ಸಲ್ಯ. ಅಳುವ ವ್ಯಕ್ತಿಯ ಕಣ್ಣೀರು ಒರೆಸುವವರು ದೊಡ್ಡವರಾಗುತ್ತಾರೆ ಇದು ವಾತ್ಸಲ್ಯ . ವಾತ್ಸಲ್ಯದ ನಿಜವಾದ ಅರ್ಥ ಇನ್ನೊಬ್ಬರಿಗಾದ ನೋವು ನನ್ನ ನೋವು ಎಂದು ವ್ಯಕ್ತಿಯ ಹೃದಯ ಮಿಡಿಯುವುದೆ ವಾತ್ಸಲ್ಯ ಅಂತಹ ಸುಂದರವಾದ ಹೆಸರನ್ನಿಟ್ಟುಕೊಂಡು ಆಸ್ಪತ್ರೆ ಆರಂಭವಾಗಿದೆ. ಉದ್ಧೇಶ ಸಾಧನೆಯಾಗಲಿ ಎಂದು ಆಶೀರ್ವದಿಸಿದರು.
ಹಳೇ ಜಿಲ್ಲಾ ಕಚೇರಿ ಹತ್ತಿರ ( ಕೊಣ್ಣೂರು ಆಸ್ಪತ್ರೆ) ಆಸ್ಪತ್ರೆಯನ್ನು ಆರಂಭಿಸಲಾಗಿದೆ. ಕಾರ್‍ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಡಾ.ದಿವಾಕರ ಮಾತನಾಡಿ, ಐದುನೈದು ವರ್ಷಗಳಿಂದ ವಾತ್ಸಲ್ಯ ಮೊದಲು ಹುಬ್ಬಳ್ಳಿ ಯಲ್ಲಿ ಆರಂಭಿಸಲಾಯಿತು, ಎಲ್ಲವರ್ಗದವರಿಗೂ ಉತ್ತಮ ವೈದಕೀಯ ಸೌಲಭ್ಯಗಳು ಸಿಗಲಿ ಎಂಬ ಉದ್ದೇಶದಿಂದ ಐದು ಯಶಸ್ವಿ ಯಾಗಿದ್ದು, ಕೊಪ್ಪಳದಲ್ಲಿ ಆರನೇ ಆಸ್ಪತ್ರೆ ಪ್ರಾರಂಭಿಸಿದ್ದೇವೆ. ಗದಗ ಚಿಕ್ಕಮಗಳೂರು ಹಾಸನ ದಲ್ಲಿ ಗದಗಿನ ಆಸ್ಪತ್ರೆಗೆ ಹೆಚ್ಚು ಕೊಪ್ಪಳದ ರೋಗಿಗಳು ಬರುತ್ತಿದ್ದರು ಅದಕ್ಕೆ ನಾವು ಇಂದು ವಾತ್ಸಲ್ಯ ಆಸ್ಪತ್ರೆ ಪ್ರಾರಂಭಿಸಿದ್ದೇವೆ. ಆಧುನಿಕ ತಂತ್ರಜ್ಞಾನ, ವೈದ್ಯಕೀಯ ಚಿಕಿತ್ಸೆ ಸೌಲಭ್ಯ ಇಪ್ಪತ್ತು ನಾಲ್ಕು ಗಂಟೆ ವೈದರ ಸೇವೆ ಲಭ್ಯ ಇರುತ್ತದೆ, ವಿಮಾ ಸೌಲಭ್ಯ, ಜೊತೆ ಸರ್ಕಾರದ ಆರೋಗ್ಯ ಸೇವೆಗಳು ಒದಗಿಸುತ್ತೇವೆ, ಈ ಆಸ್ಪತ್ರೆಯ ನ್ನು ನಾವು ಸಂತಸದಿಂದ ಕೊಪ್ಪಳದ ಜನತೆಗೆ ಅರ್ಪಿಸುತ್ತೇವೆ ಎಂದು ಹೇಳಿದರು.
ಹಿರಿಯ ವೈದ್ಯ ಡಾ. ಬಸವರಾಜ ಸಜ್ಜನ ಮಾತನಾಡಿ, ಈ ಮೊದಲು ಕೊಣ್ಣೂರ ಆಸ್ಪತ್ರೆ ಇತ್ತು ಇದನ್ನು ನವೀಕರಿಸಿ ಹೊಸದಾಗಿ ವಾತ್ಸಲ್ಯ ಆಸ್ಪತ್ರೆಯನ್ನು ಆರಂಭಿಸಿದ್ದೇವೆ, ಇಲ್ಲಿ ಪ್ರಮುಖವಾಗಿ ಮಹಿಳೆ ಮಕ್ಕಳು ಆರೋಗ್ಯದ ಬಗ್ಗೆ ತಜ್ಞ ವೈದ್ಯರು ಇದ್ದಾರೆ ಇದು ಅರವತ್ತು ಬೆಡ್ ಆಸ್ಪತ್ರೆ ಯಾಗಿದೆ, ತಾಯಿಂದರ ಮರಣ ಕಡಿಮೆ ಯಾಗ ಬೇಕು ಮಕ್ಕಳ ಆರೋಗ್ಯ ಚೆನ್ನಾಗಿ ಇದು ಬೇಕು, ಇಲ್ಲಿ ಅನಾರೋಗ್ಯ ಇರುವವರನ್ನು ಆರೋಗ್ಯವಂತರನ್ನಾಗಿ ಮಾಡುತ್ತೇವೆ, ಉತ್ತಮ ಹಾಗೂ ಕಡಿಮೆ ವೆಚ್ಚದಲ್ಲಿ ಚಿಕಿತ್ಸೆ ನೀಡಲಾಗುವುದು. ಆಸ್ಪತ್ರೆಯ ಸದುಪಯೋಗವನ್ನು ಜನಸಾಮನ್ಯರು ಪಡೆಯಲಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಡಾ.ಬಸವರಾಜ ಸಜ್ಜನ್, ಡಾ.ಸುಮನ್ ಪಾಟೀಲ್, ಡಾ.ಮಮತಾ ಕೆ.ಎನ್. ಡಾ. ರಘು ಜಿ. ಡಾ.ಮಂಜು ಎಂ, ಚಂದ್ರಕುಮಾರ , ರಮೇಶ ಸೇರಿದಂತೆ ಆಸ್ಪತ್ರೆಯ ಸಿಬ್ಬಂದಿಗಳು ಕುಟುಂಬವರ್ಗದವರು ಹಾಗೂ ಗಣ್ಯರು ಭಾಗವಹಿಸಿದ್ದರು.
ಕುಮಾರಿ ವೈಷ್ಣವಿ ಪ್ರಾಥನೆ ಮಾಡಿದರೆ ಆನಂದ ಹಳ್ಳಿಗುಡಿ ಕಾರ್‍ಯಕ್ರಮ ನಿರೂಪಿಸಿದರು.

೫೦ ಬೆಡ್ ಇರುವ ಆಸ್ಪತ್ರೆಯಲ್ಲಿ ಸ್ತ್ರೀರೋಗ, ಮಕ್ಕಳ ವಿಭಾಗ, ಶಸ್ತ್ರಚಿಕಿತ್ಸೆ, ಜನರಲ್ ಫಿಜಿಶಿಯನ್. ಹೃದಯ ರೋಗ. ಮೂಳೆ ಮತ್ತು ಕೀಲು ವಿಭಾಗ, ಕಿವಿ, ಮೂಗು, ಗಂಟಲು ವಿಭಾಗದ ಸೌಲಭ್ಯಗಳು ಮತ್ತು ತೀವ್ರ ನಿಗಾ ಘಟಕ, ನವಜಾತ ಶಿಶು ತೀವ್ರ ನಿಗಾ ಘಟಕ ಹಾಗೂ ಸುಸಜ್ಜಿತ ೨ ಆಪರೇಷನ್ ಥಿಯೇಟರ್ ಘಟಕಗಳನ್ನು ಹೊಂದಿದೆ ಕೊಪ್ಪಳದಲ್ಲಿರುವ ವಾತ್ಸಲ್ಯ ಆಸ್ಪತ್ರೆಯ ಎಲ್ಲಾ ರೀತಿಯಿಂದ
ಆಧುನಿಕ ಉಪಕರಣಗಳನ್ನು ಹೊಂದಿದೆ ಮತ್ತು ಎಲ್ಲಾ ಖಾಸಗಿ ವಿಮಾ ಸೌಲಭ್ಯಗಳನ್ನು ಹೊಂದಿದ್ದು ಕೊಪ್ಪಳ ಮತ್ತು ಸುತ್ತಮುತ್ತಲಿನ ಜನತೆಗಳಿಗೆ ಕೈಗಟುಕುವ ದರದಲ್ಲಿ ಸೇವೆಯನ್ನು ನೀಡಲು ಸಜ್ಜಾಗಿದೆ . ಬೆ೦ಗಳೂರಿನಲ್ಲಿ ಕೇಂದ್ರ ಕಛೇರಿಯನ್ನು ಹೊಂದಿರುವ ವಾತ್ಸಲ್ಯ ಆಸ್ಪತ್ರೆಯು ಕರ್ನಾಟಕದಲ್ಲಿ ಗದಗ. ಮೈಸೂರು, ಚಿಕ್ಕಮಗಳೂರು. ಹಾಸನ. ಶಿವಮೊಗ್ಗ ಮತ್ತು ಇದೀಗ ಕೊಪ್ಪಳದಲ್ಲಿಯೂ ತನ್ನ ಶಾಖೆಗಳನ್ನು ಹೊಂದಿದೆ. ಕರ್ನಾಟಕದಲ್ಲಿರುವ ಎಲ್ಲಾ ಜನತೆಗೆ ಸೇವೆಯನ್ನು ನೀಡುತ್ತಿದೆ. ಮುಖ್ಯವಾಗಿ ಎರಡನೇ ಮತ್ತು
ಮೂರನೆಯ ದರ್ಜೆಯ ನಗರಗಳಲ್ಲಿ ವಾಸಿಸುವ ಜನರಿಗೆ ಸೇವೆಯನ್ನು ನೀಡಲು ಕಟಬದ್ಧವಾಗಿದೆ ಎಂದು ಆಡಳಿತ ಮಂಡಳಿ ಹೇಳಿದೆ.

Please follow and like us:
error