ವರ್ಕರ್‍ಸ್ ಯುನಿಯನ್ ಸದಸ್ಯರಿಗೆ ಹಕ್ಕುಪತ್ರ ವಿತರಿಸುವ ಬಗ್ಗೆ ಜಿಲ್ಲಾಧಿಕಾರಿಗೆ ಮನವಿ


ಕೊಪ್ಪಳ, ಸೆ. ೨೦: ಚಿಕ್ಕ ಸಿಂಧೋಗಿ ಗ್ರಾಮದ ಸರ್ವೆ ನಂಬರ ೬೭/೧ ರಲ್ಲಿ ೬ ಎಕರೆ ೦೨ ಗುಂಟೆ ಜಮೀನನ್ನು ಆಶ್ರಯ ಯೋಜನೆಯಡಿಯಲ್ಲಿ ದಾನದರೂಪದಲ್ಲಿ ಖರೀದಿಸಿರುವ ಜಮೀನಿಗೆ ಮೂಲಭೂತ ಸೌಕರ್ಯಕ್ಕಾಗಿ ಅನುದಾನ ಬಿಡುಗಡೆ ಮಾಡುವ ಕುರಿತು, ತಾಲೂಕಿನ ಚಿಕ್ಕ ಸಿಂದೋಗಿ ಗ್ರಾಮದ ಸರ್ವೆ ನಂಬರ ೬೭/೧ ರಲ್ಲಿ ೬ ಎಕರೆ ೦೨ ಗುಂಟೆ ಜಮೀನನ್ನು ಆಶ್ರಯ ಯೋಜನೆಯಡಿಯಲ್ಲಿ ದಾನದರೂಪದಲ್ಲಿ ಖರೀದಿಸಿದ ಜಿಲ್ಲಾ ಡ್ರೈವರ್,ಕ್ಲೀನರ್‍ಸ್ ಮತ್ತು ವರ್ಕಶಾಫ್ ವರ್ಕರ್‍ಸ್ ಯುನಿಯನ್ ಸದ್ಯಸರಿಗೆ ನಗರ ಆಶ್ರಯ ಯೋಜನೆಯಡಿ ಸಮಿತಿ ಮೂಲಕ ೧೭೭ ಫಲಾನುಭವಿ ಕುಟುಂಬಗಳಿಗೆ ನಿವೇಶನಗಳ ಹಕ್ಕುಪತ್ರ ಕೂಡಲೇ ವಿತರಿಬೇಕು ಎಂದು ಸಂಭಂದ ಪಟ್ಟ ಅಧಿಕಾರಿಗಳ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ತಾನು ಬದುಕಬೇಕು ಮತ್ತು ಇತರರನ್ನು ಬದುಕಿಸಬೇಕೆಂದು ಹಗಲಿರುಳು ಶ್ರಮಿಸುತ್ತಿರುವ ಕೊಪ್ಪಳ ಜಿಲ್ಲಾ ಡ್ರೈವರ್,ಕ್ಲೀನರ್‍ಸ್ ಮತ್ತು ವರ್ಕಶಾಫ್ ವರ್ಕರ್‍ಸ್ ಯುನಿಯನ್ ಕೊಪ್ಪಳ (ರಿ) ಸದಸ್ಯರು ಆರ್ಥಿಕವಾಗಿ ತುಂಬಾ ಬಡವರಾಗಿದ್ದು, ವಾಸಿಸಲು ಮನೆ ಇಲ್ಲದೆ ತ್ರಾಸದಾಯಕ ಜೀವನ ಸಾಗಿಸುತ್ತಿರುವರು, ಈ ಕಾರ್ಮಿಕರಿಗೆ ಕನಸಿನ ನಿವೇಶನ ಮತ್ತು ಮನೆ ನಿಮಿತ್ಯ ತಮ್ಮ ಸಂಘದಿಂದ ತಾಲೂಕಿನ ಚಿಕ್ಕಸಿಂದೋಗಿ ಸೀಮಾದಲ್ಲಿರುವ ಸರ್ವೆ ನಂಬರ ೬೭/೧ ರಲ್ಲಿ ೬ ಎಕರೆ ೦೨ಗುಂಟೆ ಜಮೀನನ್ನು ಖರೀದಿಸಲಾಯಿತು, ಸದರಿ ಜಮೀನಿನಲ್ಲಿ ಈ ಕಾರ್ಮಿಕರಿಗೆ ಮೂಲಭೂತ ಸೌಕಂiiಗಳಾದ ರಸ್ತೆ, ಚರಂಡಿ, ಕರೆಂಟ್, ನೀರು ಪೂರೈಕೆ ಮುಂತಾದ ಮತ್ತು ಮನೆ ಕಟ್ಟಿಸಿಕೊಳ್ಳುವ ಸಾಮರ್ಥ್ಯ ಇರುವುದಿಲ್ಲ,
ಆದ ಕಾರಣ ಸಂಘದಿಂದ ಖರೀದಿಸಲಾದ ಜಮೀನನ್ನು ಆಶ್ರಯ ಯೋಜನೆಯಡಿಯಲ್ಲಿ ದಾನದರೂಪದಲ್ಲಿ ಜಮೀನು ಸರ್ಕಾರಕ್ಕೆ ನೀಡಲು ಸಂಘದಲ್ಲಿ ತಿರ್ಮಾನಿಸಲಾಯಿತು, ಸಂಘದ ತಿರ್ಮಾನದಂತೆ ಮಾನ್ಯ ರಾಜ್ಯಪಾಲರು ಕರ್ನಾಟಕ ಸರ್ಕಾರ ಇವರ ಪರವಾಗಿ ಜಮೀನು ತಹಶೀಲ್ದಾರ ಕೊಪ್ಪಳ ಇವರ ಹೆಸರಿಗೆ ನೊಂದಾವಣೆ ಮಾಡಲಾಗಿದೆ.
ಸಂಘದಿಂದ ಇಲ್ಲಿವರಿಗೆ ವಸತಿ ಸಚಿವರಿಗೆ, ಜಿಲ್ಲಾಧಿಕಾರಿಗಳು ಮತ್ತು ವಿವಿಧ ಇಲಾಖೆಗಳಿಗೆ ಪತ್ರದ ಮೂಲಕ ಮನವಿ ಸಲ್ಲಿಸಲಾಗಿದೆ. ಸದರಿ ಅನುದಾನದಲ್ಲಿ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಕಾರ್ಯಕ್ರಮಗಳನ್ನು ಅನುಷ್ಟಾನಗೊಳಿಸಲು ಯೋಜನಾ ವ್ಯವಸ್ಥಾಪಕರು ನಿರ್ಮಿತಿ ಕೇಂದ್ರ ಕೊಪ್ಪಳ ಇವರಿಗೆ ಜಿಲ್ಲಾಧಿಕಾರಿ ಪ್ರಸ್ತಾವನೆಯಲ್ಲಿ ವಿವರಿಸಿದ ಅಂಶಗಳ ಮೇರೆಗೆ ಅನುದಾನ ಬಿಡುಗಡೆ ಮಾಡಿದ್ದಾರೆ. ಹಾಗೂ ಪ್ರಧಾನ ವ್ಯವಸ್ಥಾಪಕರು, ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮ ಬೆಂಗಳೂರು ಪರಿಗಣಿಸಿ ಮೂಲಭೂತ ಸೌಕರ್ಯಗಳಾದ ರಸ್ತೆ, ಚರಂಡಿ ನಿರ್ಮಾಣ ಮತ್ತು ನೀರು ಪೂರೈಕೆ ವ್ಯವಸ್ಥೆಗಾಗಿ ಭಾರತೀಯ ಸ್ಟೇಟ್ ಬ್ಯಾಂಕ್ ಕೊಪ್ಪಳ ಶಾಖೆಯಲ್ಲಿರುವ ಜಿಲ್ಲಾಧಿಕಾರಿಗಳವರ ಹೆಸರಿನಲ್ಲಿರುವ ಖಾತೆ ಸಂಖ್ಯೆ ೩೧೯೭೨೫೬೬೨೦೮ ಗೆ ದಿ. ೦೫ ಜುಲೈ ೨೦೧೨ ರಂದು ರೂ.೭೯,೬೫೦/-ಗಳು ನಿಗಮದಿಂದ ಜಮಾವಾಗಿರುತ್ತದೆ. ಆದರೆ ಇದುವರೆಗೂ ಸಂಘದ ಸದಸ್ಯರಿಗೆ ನಗರ ಆಶ್ರಯ ಯೋಜನೆಯಡಿ ಸಮೀತಿ ಮೂಲಕ ೧೭೭ ಫಲಾನುಭವಿ ಕುಟುಂಬಗಳಿಗೆ ನಿವೇಶನಗಳ ಹಕ್ಕುಪತ್ರ ವಿತರಿಸಲಿಲ್ಲ. ಎಷ್ಟೋ ಸದಸ್ಯರು ನಿವೇಶನದ ಕನಸು ಕಾಣದೆ ಇಹಲೋಕ ಬಿಟ್ಟು ಹೋಗಿದ್ದಾರೆ. ಅವರ ಕುಟುಂಬಕ್ಕೆ ನ್ಯಾಯ ಸಿಗಬೇಕು, ಕೆಲವು ಸದ್ಯಸರಿಗೆ ದಾರಿ ತಪ್ಪಿಸಿ ಅವರ ಮೂಲಕ ಹಣ ವಾಪಸ್ಸು ಮಾಡಿ ಇತರರನ್ನು ನಿವೇಶನ ಕೊಡುವ ಸಂಚು ನಡೆದಿದೆ. ವ್ಯವಸ್ಥಾಪಕರು ನಿರ್ಮಿತಿ ಕೇಂದ್ರ ಕೊಪ್ಪಳ ಇವರು ಸದರಿ ಕಾಮಗಾರಿಗಳನ್ನು ಜಿಲ್ಲಾಧಿಕಾರಿ ನಿರ್ದೇಶನದಂತೆ ಮತ್ತು ಷರತ್ತುಗಳಂತೆ ಮಾಡಿದ್ದಾರೆ ಅಥವಾ ಇಲ್ಲ ಮತ್ತು ಇದರ ಪಾಲನಾ ವರದಿ ( Woಡಿಞ ಆoಟಿe ಖeಠಿoಡಿಣ ) ನಿಮಗೆ ಸಲ್ಲಿಸಿದ್ದಾರೊ ಇಲ್ಲ, ಇದರ ಬಗ್ಗೆ ತಾವು ಸ್ವತಃ ಜಿಲ್ಲಾಧಿಕಾರಿಗಲು ಪರಿಶೀಲಿಸಬೇಕು ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಕೊಪ್ಪಳ ಜಿಲ್ಲಾ ಘಟಕವು ಆಗ್ರಹಿಸಿದೆ. ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ಉಗ್ರ ಹೋರಾಟ ನಡೆಸಲಾಗುವದು ಎಂದು ತಳಿಸಿದೆ.
ಮಹ್ಮದ್ ಅಲೀಮುದ್ದೀನ್, ಹಸನುದ್ದೀನ್ ಆಲಂಬದಾರ, ಆದೀಲ್ ಪಟೇಲ್, ಮೆಹೆಬೂಬ್ ಮಣ್ಣೂರ, ಸಮದ್, ಸಲಾವುದ್ದಿನ್, ಜಾಫರ್ ಖಾಜಿ, ಮನ್ಸೂರ್ ದೂಣಿ ಇನ್ನು ಮುಂತಾದವರು ಉಪಸ್ಥಿತರಿದ್ದರು.

Please follow and like us:
error

Related posts