ವಚನ ದರ್ಶನ ಆಧ್ಯಾತ್ಮಿಕ ಪ್ರವಚನ

ವಿಶ್ವಗುರು ಬಸವಣ್ಣನವರ ಜಯಂತಿ ಅಂಗವಾಗಿ ಪ್ರವಚನ ಸೇವಾ ಸಮಿತಿ ಕೊಪ್ಪಳ ಇವರಿಂದ ಪ್ರತಿವರ್ಷದಂತೆ ಈ ವರ್ಷವೂ ಪ್ರವಚನ ಹಮ್ಮಿಕೊಂಡಿದೆ. ಜಗನ್ಮಾತೆ ಅಕ್ಕಮಹಾದೇವಿ ಜಯಂತಿಯ ದಿನವಾದ ದಿನಾಂಕ:೧೯-೦೪-೨೦೧೯ ರಿಂದ ಜಗಜ್ಯೋತಿ ಬಸವಣ್ಣನವರ ಜಯಂತಿಯ ಹಿಂದಿನ ದಿನವಾದ ದಿನಾಂಕ:೦೬-೦೫-೨೦೧೯ ರವರೆಗೆ ೧೮ ದಿನಗಳ ಕಾಲ ಪ್ರತಿದಿನ ಸಂಜೆ ೬-೩೦ ರಿಂದ ೮-೦೦ ಗಂಟೆಯವರೆಗೆ ಕೊಪ್ಪಳ ನಗರದ ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜು ಮೈದಾನ (ಸಾರ್ವಜನಿಕ ಮೈದಾನ) ದಲ್ಲಿ ವಚನ ದರ್ಶನ ಆಧ್ಯಾತ್ಮಿಕ ಪ್ರವಚನವನ್ನು ಹಮ್ಮಿಕೊಳ್ಳಲಾಗಿದೆ. ಪ್ರವಚನಕಾರರಾಗಿ ಖ್ಯಾತ ಬಸವತತ್ವ ಪ್ರಸಾರಕರಾದ ಪೂಜ್ಯ ಶರಣಶ್ರೀ ಡಾ. ಈಶ್ವರ ಮಂಟೂರ, ಬಸವಜ್ಞಾನ ಗುರುಕುಲ, ಹುನ್ನೂರು-ಮಧುರಖಂಡಿ, ತಾ||ಜಮಖಂಡಿ ಇವರು ಆಗಮಿಸಲಿದ್ದಾರೆ.
ದಿನಾಂಕ:೧೯-೦೪-೨೦೧೯ ಶುಕ್ರವಾರ ಸಂಜೆ ೬-೩೦ ಗಂಟೆಗೆ ಪ್ರವಚನ ಕಾರ್ಯಕ್ರಮ ಉದ್ಘಾಟನೆ ದಿನ ಪರಮ ಪೂಜ್ಯ ಶ್ರೀ ಮ.ನಿ.ಪ್ರ.ಸ್ವ.ಜ.ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳು, ಸಂಸ್ಥಾನ ಶ್ರೀ ಗವಿಮಠ ಕೊಪ್ಪಳ ಇವರು ಸಾನಿಧ್ಯ ವಹಿಸಲಿದ್ದಾರೆ. ಉದ್ಘಾಟಕರಾಗಿ ಕೊಪ್ಪಳ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಶ್ರೀ ರಾಜಶೇಖರ ಅಂಗಡಿ ಆಗಮಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ನಗರದ ಎಲ್ಲಾ ಸಮಾಜದ ಮುಖ್ಯಸ್ಥರು, ಸಂಘ ಸಂಸ್ಥೆಯ ಮುಖಂಡರು, ಮಹಿಳಾ ಸಂಘಟನೆಯ ಪ್ರಮುಖರು, ಸಾಹಿತಿಗಳು, ಉದ್ಯಮಿಗಳು, ಗಣ್ಯರು, ಆಗಮಿಸಲಿದ್ದಾರೆ.
ಈ ಕಾರ್ಯಕ್ರಮಕ್ಕೆ ಸರ್ವರೂ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಕೊಪ್ಪಳದ ಪ್ರವಚನ ಸೇವಾ ಸಮಿತಿ ಪ್ರಕಟಣೆಯಲ್ಲಿ ಮನವಿ ಮಾಡಿದೆ.

Please follow and like us:
error