ಲೋಕಸಭಾ ಚುನಾವಣೆ : ಬಿಸಿ ಊಟ ತಯಾರಕರಿಗೆ ಮತದಾನ ಜಾಗೃತಿ

ಕೊಪ್ಪಳ ಮಾ. : ಲೋಕಸಭಾ ಚುನಾವಣೆ ನಿಮಿತ್ಯ ಕೊಪ್ಪಳ ಜಿಲ್ಲಾ ಸ್ವೀಪ್ ಸಮಿತಿ & ಅಕ್ಷರ ದಾಸೋಹ ಯೋಜನೆಯಿಂದ ಬಿಸಿ ಊಟ ತಯಾರು ಮಾಡುವ ಮಹಿಳೆಯರಿಗೆ ಮತದಾನಕುರಿತು ಜಾಗೃತಿ ಮೂಡಿಸಲಾಯಿತು.
ಕೊಪ್ಪಳ ನಗರದ ಸರ್ದಾರಗಲ್ಲಿ ಶಾಲೆಯಲ್ಲಿ ಜಿಲ್ಲಾ ಸ್ವೀಪ್ ಸಮಿತಿ ಮತ್ತು ಅಕ್ಷರ ದಾಸೋಹ ಯೋಜನೆಯಿಂದ ಬಿಸಿ ಊಟ ತಯಾರಿಸುವ ಮಹಿಳೆಯರಿಗೆ ಇವಿಎಂ ಹಾಗೂ ವಿವಿ ಪ್ಯಾಟ್ ಯಂತ್ರಗಳ ಕುರಿತು ಶನಿವಾರದಂದು ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆರ್.ಎಸ್. ಪೆದ್ದಪಯ್ಯ ಅವರು ಮಾತನಾಡಿ, “ನಮ್ಮ ಮತ ನಮ್ಮ ಹಕ್ಕು”, ಮತದಾನವು ಶ್ರೇಷ್ಠ ಮತ್ತು ಆಧ್ಯ ಕರ್ತವ್ಯವಾಗಿದ್ದು, ಸಿಂವಿಧಾನಬದ್ಧವಾಗಿ ನಮಗೆ ನೀಡಲಾದ ಮತದಾನದ ಹಕ್ಕನ್ನು ಚಲಾಯಿಸುವುದು 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬ ಭಾರತೀಯ ಪ್ರಜೆಯ ಕರ್ತವ್ಯವಾಗಿದೆ. ಆದ್ದರಿಂದ ಏಪ್ರೀಲ್. 23 ರಂದು ತಪ್ಪದೇ ಮತದಾನ ಮಾಡಿ ಎಂದರು.
ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಕೃಷ್ಣಮೂರ್ತಿ ದೇಸಾಯಿ, ಜಿಲ್ಲಾ ವಯಸ್ಕರ ಶಿಕ್ಷಣ ಇಲಾಖೆಯ ಉಮೇಶ ಪೂಜಾರ, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಟಿ. ಕೃಷ್ಣಮೂರ್ತಿ ಸೇರಿದಂತೆ ಶಾಲಾ ಮುಖ್ಯ ಮತ್ತು ಸಹ ಶಿಕ್ಷಕರು ಹಾಗೂ ರಾಜ್ಯ ಸರ್ಕಾರಿ ನೌಕರರ ಉಪಾಧ್ಯಕ್ಷರು, ಇನ್ನಿತರ ಸಿಬ್ಬಂದಿಗಳು ಉಪಸ್ಥಿತರಿದ್ದರು. ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡುವ ಕುರಿತು ಇದೇ ಸಂದರ್ಭದಲ್ಲಿ ಪ್ರತಿಜ್ಞಾವಿಧಿಯನ್ನು ಸ್ವೀಕರಿಸಿದರು