ಲೇಹ್-ಲಡಾಕ್‍ನಲ್ಲಿ ನಡೆದ ಏಕತಾ ಶಿಬಿರದಲ್ಲಿ ಕೊಪ್ಪಳದ ವಿದ್ಯಾರ್ಥಿಗಳು

ಕೊಪ್ಪಳ: ಕಾರ್ಗಿಲ್ ಯುದ್ಧದ ವಿಜಯೋತ್ಸವದ 20ನೇ ವರ್ಷಾಚರಣೆ ಹಿನ್ನೆಲೆಯಲ್ಲಿ ಜಮ್ಮುಕಾಶ್ಮೀರದ ಕಾರ್ಗಿಲ್ ಬಳಿಯ ದ್ರಾಸ್ ಯುದ್ಧ ಸ್ಮಾರಕಗಳ ಬಳಿ ದೆಹಲಿ ಎನ್‍ಸಿಸಿಯು 12 ದಿನಗಳ ರಾಷ್ಟ್ರೀಯ ಏಕತಾ ಶಿಬಿರ ಆಯೋಜಿಸಿತ್ತು. ನಗರದ ಶ್ರೀ ಗವಿಸಿದ್ಧೇಶ್ವರ ಮಹಾವಿದ್ಯಾಲಯದ ಎನ್‍ಸಿಸಿ ಅಧಿಕಾರಿ ಕ್ಯಾಪ್ಟನ್ ದಯಾನಂದ ಸಾಳುಂಕೆ ನೇತೃತ್ವದಲ್ಲಿ 10 ಎನ್‍ಸಿಸಿ ವಿದ್ಯಾರ್ಥಿಗಳು ಶಿಬಿರದಲ್ಲಿ ಭಾಗವಹಿಸಿದ್ದರು.

ಭಾರತ ಸೇನೆಯ ನೇತೃತ್ವದಲ್ಲಿ ನಡೆದ ಈ ಶಿಬಿರದಲ್ಲಿ ಎಲ್ಲ ರಾಜ್ಯಗಳಿಂದ ಒಟ್ಟು 200 ಎನ್‍ಸಿಸಿ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಶಿಬಿರದಲ್ಲಿ ಸಾಸಹ ಕ್ರೀಡೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಕರ್ನಾಟಕದ ಸಾಂಸ್ಕೃತಿಕ ನೋಟವನ್ನು ಪರಿಚಯಿಸಿದ ಕಾಲೇಜಿನ ವಿದ್ಯಾರ್ಥಿಗಳು ಪ್ರಶಸ್ತಿಗೆ ಭಾಜನರಾದರು.

ಸೇನೆಯಲ್ಲಿ ಬಳಸುವ ಅತ್ಯಾಧುನಿಕ ಶಸ್ತ್ರಾಸ್ತ್ರಗಳು, ಯುದ್ದ ಟ್ಯಾಂಕ್‍ಗಳನ್ನು ಅಲ್ಲಿನ ವೀರಯೋಧರ ದೇಶಾಭಿಮಾನ ಕಂಡು ದೇಶಸೇವೆಗೆ ಮುಂದಾಗುವುದಾಗಿ ತಿಳಿಸಿದರು. ಕಾರ್ಗಿಲ್, ಟೈಗರ್ ಹಿಲ್‍ಗಳಲ್ಲಿ ನಡೆದ 1999ರ ಯುದ್ಧದ ಅನೇಕ ಸ್ಥಳಗಳಿಗೆ ಭೇಟಿ ನೀಡಿದ ಕಾಲೇಜಿನ ತಂಡ ಜಿಲ್ಲೆಯ ಹೆಮ್ಮೆಯ ಯೋಧ ಮಲ್ಲಯ್ಯ ಮೇಗಳಮಠ ಅವರ ಸ್ಮಾರಕವನ್ನು ಕಂಡು ಪುಳಕಿತರಾದರು. ಅಲ್ಲಿನ ಬೌದ್ಧಸ್ತೂಪಗಳನ್ನು ಕಂಡು ಮೆಚ್ಚುಗೆ ಸೂಚಿಸಿದರು.

ಅಲ್ಲಿನ ಭಯೋತ್ಪಾದಕ ಸ್ಥಳಗಳು ಎನಿಸಿದ ಪುಲ್ವಾಮಾ, ಅನಂತ್‍ನಾಗ್ ಹಾಗೂ ಬಾರಾಮುಲ್ಲಾ ಜಿಲ್ಲೆಗಳಲ್ಲಿ ಸಂಚರಿಸಿ ಏಕತೆ ಸಾರಿ ಬಂದಿರುವ ಸಾರಿ ಬಂದಿರುವುದು ಹೆಮ್ಮೆಯ ಸಂಗತಿ ಎಂದು ಕಾಲೇಜಿನ ಪ್ರಾಚಾರ್ಯ ಪ್ರೊ.ಮನೋಹರ್ ದಾದ್ಮಿ ಹಾಗೂ ಆಡ:ಿತ ಸಿಬ್ಬಂದಿ ಮತ್ತು ಎಸ್.ಜಿ.ಕಾಲೇಜಿನ ಟ್ರಸ್ಟ್‍ನ ಪದಾಧಿಕಾರಿಗಳು ಕಾಲೇಜಿನ ಎನ್‍ಸಿಸಿ ಕ್ಯಾಪ್ಟನ್ ದಯಾನಂದ ಸಾಳುಂಕೆ ಹಾಗೂ ಎನ್‍ಸಿಸಿ ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.

Please follow and like us:
error