ಲಿಂ. ಶ್ರೀ ಶಿವಶಾಂತವೀರ ಮಹಾಶಿಯೋಗಿಗಳ ಪುಣ್ಯಸ್ಮರಣೋತ್ಸವ

– 
ಕೊಪ್ಪಳ- ನಗರದ ಗವಿಮಠದ ಪೀಠಾಧಿಪತಿಗಳಾದ ಲಿಂ. ಶ್ರೀ ಶಿವಶಾಂತವೀರ ಮಹಾಶಿಯೋಗಿಗಳ ಪುಣ್ಯಸ್ಮರಣೋತ್ಸವ ಕಾರ್ಯಕ್ರಮವು ೨೯.೦೩.೧೯ ಶುಕ್ರವಾರದಂದು ಜರುಗಲಿದೆ. ಪುಣ್ಯರಾಧನೆ ನಿಮಿತ್ಯ ಅಂದು ಬೆಳಿಗ್ಗೆ ೬.೦೦ ಗಂಟೆಗೆ ಮಳೆಮಲ್ಲೇಶ್ವರ ದೇವಸ್ಥಾನದಿಂದ ಗವಿಮಠದವರೆಗೆ ಪೂಜ್ಯರಾದ ಅಭಿನವ ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳ ನೇತೃತ್ವದಲ್ಲಿ ಪಾದಯಾತ್ರೆ ನಡೆಯಲಿದೆ. ಬೆಳಿಗ್ಗೆ ೧೦ ರಿಂದ ಸಂಜೆ ೪ ಗಂಟೆಯವರೆಗೆ ಗವಿಮಠದ ಆವರಣದಲ್ಲಿರುವ ಜಗದ್ಗುರು ಶ್ರೀಗವಿಸಿದ್ಧೇಶ್ವರ ಆರ್ಯವೇದ ಮಹಾವಿದ್ಯಾಲಯ ಹಾಗೂ ಸ್ನಾತಕೊತ್ತರ ಅಧ್ಯಯನ ಕೇಂದ್ರದ ವತಿಯಿಂದ ಉಚಿತ ಹೃದಯ ರೋಗ ಮತ್ತು ಮೂತ್ರ ತಪಾಸಣಾ ಹಾಗೂ ಸಲಹಾ ಶಿಬಿರ ಕಾರ್ಯಕ್ರಮ ಜರುಗಲಿದೆ.s
ಸಾಯಂಕಾಲ ೬ ಗಂಟೆಗೆ ಮಠದ ಕೆರೆಯ ದಡದಲ್ಲಿ ನಡೆಯುವ ಮತ್ತೊಮ್ಮೆ ಅವತರಿಸು ಶಿವಶಾಂತವೀರ ಗುರುಸ್ಮರಣೆ ಕಾರ್ಯಕ್ರಮದಲ್ಲಿ ಹೊಸಳ್ಳಿ ಬೂದಿಶ್ವರ ಸಂಸ್ಥಾನ ಮಠದ ಶ್ರೀಮನಿಪ್ರಜ ಬೂದಿಶ್ವರ ಮಹಾಸ್ವಾಮಿಗಳು ಕಾರ್ಯಕ್ರಮದ ಸಾನಿಧ್ಯ ವಹಿಸುವರು. ಶಿರಸಿಯ ಜಲ ತಜ್ಞರಾದ ಶಿವಾನಂದ ಕಳವೆ. ಬೆಂಗಳೂರಿನ ಕೆರೆ ಸಂರಕ್ಷರಾದ ಆನಂದ ಮಲ್ಲಿಗೆವಾಡ್ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಶ್ರೀ ಗವಿಸಿದ್ಧೇಶ್ವರ ಸಂಗೀತ ವಿದ್ಯಾಪೀಠದ ವಿದ್ಯಾರ್ಥಿಗಳಿಂದ ಸಂಗೀತ. ನಾಗರಾಜ ಶ್ಯಾವಿ ಇವರಿಂದ ಬಾನ್ಸುರಿ ಕಾರ್ಯಕ್ರಮ ಜರುಗಲಿದೆ ಎಂದು ಗವಿಮಠದ ಪ್ರಕಟಣೆ ತಿಳಿಸಿದೆ.

ಪರಮಪೂಜ್ಯ ಲಿಂ|| ಶ್ರೀ ಶಿವಶಾಂತವೀರ ಮಹಾಶಿವಯೋಗಿಗಳ ಪುಣ್ಯರಾಧನೆಯ ನಿಮಿತ್ಯ
ಉಚಿತ ಹೃದಯ ರೋಗ ಮತ್ತು ಮೂತ್ರ ರೋಗ ತಪಾಸಣಾ ಹಾಗೂ ಸಲಹಾ ಶಿಬಿರ

ಕೊಪ್ಪಳ- ನಗರದ ಶ್ರೀ ಗವಿಮಠದ ಪೂಜ್ಯರಾದ ಪರಮಪೂಜ್ಯ ಲಿಂ|| ಶ್ರೀ ಶಿವಶಾಂತವೀರ ಮಹಾ ಶಿವಯೋಗಿಗಳ ಪುಣ್ಯರಾಧನೆಯು ದಿನಾಂಕ ೨೯.೦೩.೧೯ ಶುಕ್ರವಾರದಂದು ನಡೆಯುವ ಪ್ರಯುಕ್ತ ಪೂಜ್ಯ ಶ್ರೀಗಳ ಅಪ್ಪಣೆಯ ಮೇರೆಗೆ ಈ ಭಾಗದ ಜನತೆಯ ಸಲುವಾಗಿ ಶ್ರೀ ಗವಿವ ಸಂಸ್ಥೆಯ ಶ್ರೀ ಜಗದ್ಗುರು ಗವಿಸಿದ್ದೇಶ್ವರ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ವತಿಯಿಂದ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ದಿನಾಂಕ ೨೯.೦೩.೧೯ ಶುಕ್ರವಾರದಂದು ಉಚಿತ ಹೃದಯ ರೋಗ ಮತ್ತು ಮೂತ್ರ ರೋಗ ತಪಾಸಣಾ ಹಾಗೂ ಸಲಹಾ ಶಿಬಿರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಅಂದು ಬೆಳಿಗ್ಗೆ ೯ ಗಂಟೆಯಿಂದ ಮದ್ಯಾಹ್ನ ೩ ಗಂಟೆಯವರೆಗೆ ಶಿಬಿರ ಜರುಗಲಿದೆ. ಹೆಸರು ನೋಂದಾವಣೆಗೆ ಅಂದೇ ಅವಕಾಶವಿದ್ದು,ನೋಂದಣಿಯಾದ ಎಲ್ಲರಿಗೂ ತಪಾಸಣಾ ಕಾರ್ಯ ನಡೆಸಲಾಗುವದು. ಬೆಂಗಳೂರಿನ ಸಾಗರ ಆಸ್ಪತ್ರೆ ಹೃದಯ ರೋಗ ತಜ್ಞವೈದ್ಯರಿಂದ ಉಚಿತ ಹೃದಯ ರೋಗ ತಪಾಸಣೆ ಮತ್ತು ಸಲಹಾ ಶಿಬಿರವನ್ನು ಏರ್ಪಡಿಸಲಾಗಿದೆ ಹಾಗೆಯೇ ಗಂಗಾವತಿ ನಗರದ ಪ್ರಸಿದ್ಧ ಮೂತ್ರರೋಗ ತಜ್ಞ ವೈದ್ಯರಾದ ಡಾ ನಾಗರಾಜ ಇವರಿಂದ ಉಚಿತ ಮೂತ ರೋಗ ತಪಾಸಣಾ ಹಾಗೂ ಸಲಹಾ ಶಿಬಿರವನ್ನು ಏರ್ಪಡಿಸಲಾಗಿದೆ ಸಾರ್ವಜನಿಕರು ಶಿಬಿರದ ಪ್ರಯೋಜನವನ್ನು ಪಡೆದುಕೊಳ್ಳಲು ಕೊರಲಾಗಿದೆ.
ವಿಶೇಷ ಸೂಚನೆ- ಅವಶ್ಯಕತೆಗನುಗುಣವಾಗಿ ಇಸಿಜಿ. ಇಕೊ. ಯುಎಸ್‌ಜಿ ಪ್ರಯೋಗಾಲಯ ಪರೀಕ್ಷೆಗಳನ್ನು ಮಾಡಲಾಗುವುದು. ತಪಾಸಣೆಗೆ ಬರುವ ರೋಗಿಗಳು ಹಳೆಯ ತಪಾಸಣಾ ದಾಖಲೆಗಳು ಇದ್ದಲ್ಲಿ ತಪ್ಪದೆ ತರಬೇಕು. ಹೆಚ್ಚಿನ ಮಾಹಿತಿಗಾಗಿ ಪ್ರಾಚಾರ್ಯರು ಶ್ರೀ ಜಗದ್ಗುರು ಗವಿಸಿದ್ದೇಶ್ವರ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ದೂರವಾಣಿ ಮೊಬೈಲ್ ಸಂಖ್ಯೆಗಳಾದ ೯೪೪೮೬೦೯೩೬೨. ೯೪೪೯೬೮೯೦೮೫. ೮೧೨೩೦೪೪೧೨೫. ೯೮೪೫೬೪೬೮೮೫ ಸಂಪರ್ಕಿಸಲು ಗವಿಮಠದ  ತಿಳಿಸಿದೆ.

Please follow and like us:
error