ಲಾಕ್‌ಡೌನ್ ಹೊಡೆತಕ್ಕೆ ಮುದ್ರಣಾಲಯಗಳು ತತ್ತರ !

ಕೊಪ್ಪಳ: ಮುದ್ರಣವು ಬಹಳ ವರ್ಷಗಳಿಂದ ಬಂದಂತಹ ಉದ್ಯೋಗವಾಗಿದೆ. ಈ ಮೊದಲು ಮೊಳೆ ಜೋಡಣೆಯಿಂದ ಯಂತ್ರಗಳ ಮುಖಾಂತರ ಪ್ರಿಂಟಿಂಗ್ ಕೆಲಸ ನಡೆಯುತ್ತಿತ್ತು, ಆದರೆ ಈಗ ಕಂಪ್ಯೂಟರ ಹಾಗೂ ಆಫ್‌ಸೆಟ್ ಯಂತ್ರಗಳ ಮೂಲಕ ಮಾಡುವುದರಿಂದ ಇತ್ತೀಚಿಗೆ ಸುಧಾರಿಸಿದೆ. ಕೆಲಸಗಾರರ ಸಂಬಳ, ಕರೆಂಟ್ ಬಿಲ್ ಹೆಚ್ಚಳ, ಮಳಿಗೆ ಭಾಡಿಗೆ ಹೆಚ್ಚಳ ಇವುಗಳನ್ನು ನೀಗಿಸುವ ಸಲುವಾಗಿ ಮಾಲಕರೇ ಕಾರ್ಮಿಕರಾಗಿ ಕೆಲಸ ಮಾಡುತ್ತಿರುವವರು ಹೆಚ್ಚು. ಇಂದು ಕ.ಕಾ.ಪ.ಸಂಘ ದ ಕಾಂರ್ಯಾಲಯದಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಅಧ್ಯಕ್ಷರಾದ ಶರಣಪ್ಪ ನಾಯಕ ಮಾತನಾಡಿ, ವರ್ಷದಲ್ಲಿ ೬ ತಿಂಗಳು ಮಾತ್ರ ಕೆಲಸ ಇನ್ನು ೬ ತಿಂಗಳು ಇರುವುದಿಲ್ಲ. ಮಾರ್ಚ, ಏಪ್ರಿಲ್, ಮೇ ತಿಂಗಳುಗಳಲ್ಲಿ ಬಹಳಷ್ಟು ಶುಭ ಸಮಾರಂಭಗಳನ್ನು ಅಂದರೆ, ಉಪನಯನ, ಗೃಹ ಪ್ರವೇಶ, ಮದುವೆ ಕಾರ್ಯಕ್ರಮಗಳ ಆಹ್ವಾನ ಪತ್ರಿಕೆಗಳ ಮುದ್ರಣವನ್ನು ನೆಚ್ಚಿಕೊಂಡು ಬದುಕುತ್ತಿದ್ದ ಮುದ್ರಣಗಳು ಇಂದು ಲಾಕ್‌ಡೌನ್
ನಿಂದ ಸಂಕಷ್ಟಕ್ಕೆ ಸಿಲುಕಿವೆ.
ಮಾರ್ಚ ಲೆಕ್ಕಪತ್ರದ ಸಂದರ್ಭದಲ್ಲಿ ಅಲ್ಪಸ್ವಲ್ಪ ಸರಕಾರಿ ಕೆಲಸಗಳನ್ನು, ಶಾಲಾ ಕಾಲೇಜುಗಳ ಕೆಲಸದ ಮುದ್ರಣವನ್ನು ನಂಬಿಕೊಂಡು ಬದುಕುತ್ತಿದ್ದವರ ಬದುಕು ಮುರಾಬಟ್ಟಿಯಾಗಿದೆ. ಎಂದು ಅವರು ಹೇಳಿದರು. ನಂತರ ಕಾರ್ಯಾಧ್ಯಕ್ಷ ಮಂಜುನಾಥ ಗೊಂಡಬಾಳ ಮಾತನಾಡುತ್ತ ಒಂದುಕಡೆ ಮಳಿಗೆ ಬಾಡಿಗೆ, ಇನ್ನೊಂದುಕಡೆ ಬ್ಯಾಂಕ್‌ಗಳಿಂದ ಸಾಲ ಪಡೆದು ಮರಳಿಸುವ ಚಿಂತೆ, ಈ ಕಡೆ ಮದುವೆ ಸಮಾರಂಭದ ಆಮಂತ್ರಣಗಳನ್ನು ಮಾಡಲು ಕೊಟ್ಟು ಅವುಗಳನ್ನು ತೆಗೆದುಕೊಂಡು ಹೋಗದೇ ನಮ್ಮಲ್ಲೇ ಉಳಿದಿರುವ ಚಿಂತೆ, ಹೀಗಿರುವಾಗ ಸಣ್ಣದೊಂದು ಮುದ್ರಣ ಯಂತ್ರದಿಂದ ಜೀವನ ಸಾಗಿಸುತ್ತಿದ್ದವರ ಬಾಳು ಹೇಳತೀರದು. ಇದೆಲ್ಲವು ಲಾಕ್ ಡೌನ್‌ನಿಂದ ಆಗಿದೆ ಎಂದು ಹೇಳಿದರು. ಪತ್ರಿಕಾ ಗೋಷ್ಠಿಯಲ್ಲಿ ಹಸನ್‌ಸಾಬ ಹಿರೇಮಸೂತಿ, ರಾಜಶೇಖರ ತಂಬ್ರಳ್ಳಿಮಠ, ರುದ್ರಗೌಡ ಪಾಟೀಲ, ಸಿದ್ದಣ್ಣ, ಆನಂದ ಗೊಂಡಬಾಳ, ಶರಣು ಡೊಳ್ಳಿನ, ಶ್ರೀನಿವಾಸ, ಇನ್ನಿತರ ಪ್ರಿಂಟಿಂಗ್ ಪ್ರೆಸ್ ಮಾಲಕ ಕಾರ್ಮಿಕರು ಇದ್ದರು

ಕಾರ್ಮಿಕರು ಜೀವನ ನಡೆಸಲು ಹರಸಾಹಸ:
ಕೊಪ್ಪಳ ಜಿಲ್ಲೆಯಲ್ಲೇ ೨೦೦ ಕುಟುಂಬಗಳು ಮುದ್ರಣದ ಕೆಲಸದಲ್ಲಿ ಬದುಕುತ್ತಿವೆ. ಮುದ್ರಣ ಕೆಲಸವಿಲ್ಲದೇ ಕೆಲವು ಸಿಬ್ಬಂದಿಗಳಿಗೆ ಸಂಬಳವಿಲ್ಲ, ಆದರೆ ಮಾನವೀ ಯತೆಯಿಂದ ಕಾರ್ಮಿಕರಿಗೆ ಸಂಬಳ ನೀಡಬೇಕು ಎನ್ನುವುದು ಮಾಲಕರ ಮಾತು ಆದರೆ ಅವರಿಗೆ ಕೆಲಸವಿಲ್ಲ ಇದರಲ್ಲಿ ಬೈಂಡಿಂಗ್, ಪ್ರಿಂಟಿಂಗ್, ನಂಬರ್ ಹಾಕುವವರು, ಪೇಪರ್ ಕಟಿಂಗ್ ಮಾಡುವವರು ತಮ್ಮ ದಿನನಿತ್ಯದ ಜೀವನ ಸಾಗಿಸಲು ಹರಸಾಹಸ ಪಡುವಂತಾಗಿದೆ. ಇತ್ತ ನಗರಗಳಲ್ಲಿ ಅಂಗಡಿಗಳು, ಶಾಲಾ-ಕಾಲೇಜು ಸಂಸ್ಥೆಗಳು ಮುಚ್ಚಿರುವುದರಿಂದ ಅಲ್ಲಿಯೂ ಕೆಲಸವಿಲ್ಲದಂತಾಗಿದೆ. ಇದರಿಂದ ಬಹಳಷ್ಟು ಮುದ್ರಣಾಲಯಗಳ ಮಾಲಕರು ಕೈಕಟ್ಟಿ ಕುಳಿತುಕೊಳ್ಳುವಂತಾಗಿದೆ. ಮುದ್ರಣಾಲಯಗಳು ನಗರದಲ್ಲಿ ರುವುದರಿಂದ ಹೆಚ್ಚಾಗಿ ಭಾಡಿಗೆ ಮಳಿಗೆಗಳನ್ನು ಅವಲಂಭಿಸಿರುತ್ತವೆ.ಕೆಲಸವಿರಲಿ, ಇಲ್ಲದೇ ಇರಲಿ ಭಾಡಿಗೆಯನ್ನಂತು ನೀಡಲೇಬೇಕು. ನಗರಸಭೆಗಳಿಗೆ ತೆರಿಗೆ ಕಟ್ಟಬೇಕು.
ಬ್ಯಾಂಕ್‌ಗಳ ಸಾಲದ ಕಂತು ಕಟ್ಟಬೇಕಾಗಿರುವುದರಿಂದ ಸರಕಾರ ನಮಗಾಗಿ ವಿಶೇಷ ಪ್ಯಾಕೇಜ್ ನೀಡಬೇಕೆಂಬುದು ಬೇಡಿಕೆ. ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯ ಮಂತ್ರಿಗಳಿಗೆ ಮನವಿ: ಜಿಲ್ಲೆಯಲ್ಲಿ ಇದೇ ಕಸುಬನ್ನು ನಂಬಿಕೊಂಡು ಬದುಕು ಸಾಗಿಸುತ್ತಿರುವ ಕುಟುಂಬಗಳಿಗೆ, ಈ ಮಹಾಮಾರಿ ಕೊರೊನಾದಿಂದ ನೆಲಕಚ್ಚಿರುವ ಮುದ್ರಣಾಲಯಗಳಿಗೆ ಕೂಡಲೇ ರಾಜ್ಯದ ಮುಖ್ಯಮಂತ್ರಿಗಳು, ಜಿಲ್ಲಾ ಉಸ್ತುವಾರಿ ಸಚಿವರುಗಳು, ಜಿಲ್ಲಾಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಪ್ರಿಂಟಿಂಗ್ ಪ್ರೆಸ್ ಮಾಲಕ ಕಾರ್ಮಿಕರ ಸಮಸ್ಯೆಗಳನ್ನು ಅರಿತುಕೊಂಡು ಈ ಕ್ಷೇತ್ರದಲ್ಲಿ ಕೆಲಸ ನಿರ್ವಹಿಸುತ್ತಿರುವ ೨೦೦ಕ್ಕೂ ಹೆಚ್ಚು ಬಡ ಕುಟುಂಬಗಳ ನೆರವಿಗೆ ಧಾವಿಸಬೇಕು. ಅಲ್ಲದೇ ಮುದ್ರಣ ಮಾಲಕ-ಕಾರ್ಮಿಕರ ಮಕ್ಕಳಿಗೆ ಉಚಿತ ಶಿಕ್ಷಣ, ವಿವಿಧ ಬ್ಯಾಂಕ್‌ಗಳಿಂದ ಪಡೆದ ಸಾಲ ಹಾಗೂ ಬಡ್ಡಿ ಮನ್ನಾ ಮಾಡಬೇಕೆಂದು ಜಿಲ್ಲೆಯ ಎಲ್ಲ ಮುದ್ರಣ ಮಾಲಕ-ಕಾರ್ಮಿಕರು  ಜಿಲ್ಲಾಧಿಕಾರಿಗಳಿಗೆ ಮನವಿ ಕೊಡುವುದರ ಮೂಲಕ ವಿನಂತಿಸಿಕೊಳ್ಳುತ್ತೇವೆ

Please follow and like us:
error