ಲಾಕ್‌ಡೌನ್ ಮತ್ತು ನೋಟ್ ಅಮಾನ್ಯಿಕರಣದಿಂದ ಅರ್ಥವ್ಯವಸ್ಥೆ ಬುಡಮೇಲು : ಕೆ. ರಾಘವೇಂದ್ರ ಹಿಟ್ನಾಳ

ಕೊಪ್ಪಳ : .  ಕೇಂದ್ರ ಹಾಗೂ ರಾಜ್ಯದ ಬಿಜೆಪಿ ಸರ್ಕಾರಗಳು ದೀನ ದಲಿತರ ಶೋಷಿತ ವರ್ಗಗಳ ಜನರ ಕಲ್ಯಾಣ ಯೋಜನೆ ರೂಪಿಸದೆ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಪ್ರಯತ್ನಿಸುತ್ತಿಲ್ಲ ಇದರಿಂದ ಗ್ರಾಮೀಣ ಜನರ ಆರ್ಥಿಕ ಸಮಾಜಿಕ ಮತ್ತು ಶೈಕ್ಷಣಿಕ ಬದುಕು ಇವತ್ತಿಗೂ ಶೋಚನಿಯವಾಗಿದೆ, ಲಾಕ್‌ಡೌನ್ ಮತ್ತು ನೋಟ್ ಅಮಾನ್ಯಿಕರಣದಿಂದ ಅರ್ಥವ್ಯವಸ್ಥೆ ಬುಡಮೇಲಾಗಿದೆ ಎಂದು ಶಾಸಕ ರಾಘವೇಂದ್ರ ಹಿಟ್ನಾಳ ಹೇಳಿದರು

ಗಿಣಗೇರಾ ಜಿಲ್ಲಾಪಂಚಾಂiiತ್ ವ್ಯಾಪ್ತಿಯ ಗಬ್ಬೂರು ಗುಡದಳ್ಳಿ, ಕೆರೆಹಳ್ಳಿ ಲಿಂಗದಳ್ಳಿ ಹಾಗೂ ಬೇವಿನಹಳ್ಳಿ ಗ್ರಾಮಗಳಲ್ಲಿ ವಿವಿಧ ಯೊಜನೆಯಡಿಯಲ್ಲಿ ಅಂದಾಜು ಮೋತ್ತ ೧.೫೦ ಕೋಟಿಯ ಶಾಲಾ ಕೊಠಡಿ ಗ್ರಂಥಾಲಯ ಅಂಬೇಡ್ಕರ ಭವನ ಕ್ಷೇಮಾಭಿವೃದ್ದಿ ಕೇಂದ್ರ (ಆರೋಗ್ಯ ಇಲಾಖೆ) ಉದ್ಘಾಟನೆ ಹಾಗೂ ಜನಸಂಪರ್ಕ ಸಭೆ ಉದ್ದೇಶಿಸಿ ಮಾತನಾಡಿದ ಶಾಸಕ ಕೆ. ರಾಘವೇಂದ್ರ ಹಿಟ್ನಾಳ   ಗ್ರಾಮಗಳು ಸಂಪೂರ್ಣವಾಗಿ ಅಭಿವೃದ್ದಿ ಹೊಂದಲು ಅತ್ಯವಶ್ಯವಿರುವ ಮೂಲ ಸೌಕರ್ಯಗಳನ್ನು ಕಲ್ಪಿಸಲು ಆದ್ಯತೆ ನೀಡಬೇಕು ರಸ್ತೆ ಚರಂಡಿ ಪ್ರಾಥಮಿಕ ಆರೋಗ್ಯ ಕೇಂದ್ರ ಸಮುದಾಯ ಭವನಗಳು ಅಂಗನವಾಡಿ ಕಟ್ಟಡ ಶಾಲಾ ಕೊಠಡಿ ಈ ಎಲ್ಲಾ ಅವಶ್ಯಗಳನ್ನು ಪೂರೈಸಿದಾಗ ಗ್ರಾಮದ ನಾಗರಿಕರ ಅದಮ್ಯ ಕರ್ತವ್ಯ ತಮ್ಮ ಗ್ರಾಮವನ್ನು ರೋಗ ರುಜನಿಗಳಿಂದ ತಡೆಗಟ್ಟಲು ಗ್ರಾಮ ಸ್ವಚ್ಚತೆಗೆ ಮುಂದಾಗಬೇಕು.  ಡಾ|| ಮನ್‌ಮೋಹನ ಸಿಂಗ್‌ರವರ ಅಧಿಕಾರದ ಅವದಿಯಲ್ಲಿ ಯುಪಿಐ ಸರ್ಕಾರವು ದೇಶದ ರೈತರ ೭೦ಸಾವಿರ ಕೋಟಿ ಸಾಲ ಮನ್ನಮಾಡಿತು ಅದೇ ರೀತಿ ಸಿದ್ದರಾಮಯ್ಯನವರು ಸರ್ಕಾರ ಸಹಕಾರ ಸಂಘಗಳಲ್ಲಿದ್ದ ರೈತರ ೫೦ಸಾವಿರ ಸಾಲ ಮನ್ನಮಾಡಿ ಭಾಗ್ಯಗಳ ಸರಮಾಲೆಯೇ ರಾಜ್ಯದ ಜನತೆಗೆಗ ನೀಡಿತ್ತು. ನರೇಗಾ ಯೋಜನೆಯು ಯುಪಿಐ ಸರ್ಕಾರದ ಮಹತ್ವಾಂಕ್ಷೆಯ ಯೋಜನೆಯಾಗಿದ್ದು ಕೊವಿಡ್-೧೯ ರೋಗವು ಬಂದ ನಂತರ ಗ್ರಾಮೀಣ ಬಾಗದ ಜನತೆಗೆ ೧೫೦ ದಿವಸ ಉದೋಗಾವಕಾಶವು ನರೇಗಾ ಯೋಜನೆ ನೀಡಿದ್ದು ಪ್ರತಿ ಕುಟುಂಬಕ್ಕೆ ೩೬ಸಾವಿರ ಆದಾಯ ಲಭ್ಯವಾಗುತ್ತಿದ್ದು ಇದರಿಂದ ಕುಟುಂಬ ನಿರ್ವಹಣೆಗೆ ಸಹಕಾರಿ ಹಾಗೂ ಅನ್ನಬಾಗ್ಯ ಯೋಜನೆಯಿಂದ ಗ್ರಾಮೀಣ ಜನತೆ ನೆಮ್ಮದಿಯಿಂದ ಬದಕಲು ಹೆಚ್ಚು ಅನೂಕುಲವಾಗಿದೆ ಜನರು ಸರ್ಕಾರ ಕೋಡುವ ಅನುದಾನದ ಸದ್ಬಳೆಕೆ ಆದಾಗ ಮಾತ್ರ ಗ್ರಾಮಗಳ ಅಭಿವೃದ್ಧಿ ಸಾದ್ಯವೆಂದು ಹೇಳಿದರು.

ಈ ಸಂದರ್ಭದಲ್ಲಿ ತಾಪಂ ಅಧ್ಯಕ್ಷ ಬಾಲಚಂದ್ರನ್ ಎಪಿಎಮ್‌ಸಿ ಸದಸ್ಯ ನಾಗರಾಜ ಚಳ್ಳೂಳ್ಳಿ ಗ್ರಾಪಂ ಅಧ್ಯಕ್ಷ ಮಾಂಹತಮ್ಮ ಶಿಳಿಕ್ಯಾತರ ನಗರ ಸಭಾ ಸದಸ್ಯ ಅಕ್ಬರ ಪಾಷ ಪಲ್ಟನ್, ಮುಖಂಡರುಗಳಾದ ದೊಡ್ಡಬಸಪ್ಪ ರಮೇಶ ಹೊಳೆಯಾಚಿನ ಉಮೇಶ ಗುಡದಳ್ಳಿ ಸಿದ್ದರಾಮಪ್ಪ ಕೆರೆಹಳ್ಳಿ ಕುಮಾರ ಮಜ್ಜಿಗಿ ಅಣ್ಣಪ್ಪ ಗಬ್ಬೂರು ಮುರಳಿಧರ ಶಿವಮೂರ್ತಿ ಬಸವರಾಜ ಬೇವಿನಹಳ್ಳಿ ತಹಶೀಲ್ದಾರ ಅಂಬರೀಷ ಬಿರಾದಾರ ತಾಪಂ ನಿರ್ವಾಹಕ ಮಲ್ಲಿಕಾರ್ಜುನ ಕ್ಷೇತ್ರಶಿಕ್ಷಣಾದಿಕಾರಿ ಉಮಾದೇವಿ ಸೊನ್ನದ ಸಿಡಿಪಿಯೋ ರೋಹಿಣಿ ಹಾಗೂ ನಿರ್ಮಿತಿ ಕೇಂದ್ರ ಅಭಿಯಂತರರು ಉಪಸ್ಥಿತರಿದ್ದರು.

Please follow and like us:
error