ಲಾಕ್‌ಡೌನ್: ನಿರ್ದಿಷ್ಟ ಕೈಗಾರಿಕಾ ಚಟುವಟಿಕೆಗಳಿಗೆ ಅನುಮತಿ

ಕೊಪ್ಪಳ, ಕೊಪ್ಪಳ ಜಿಲ್ಲೆಯಾದ್ಯಂತ ಮೇ 17 ರ ಬೆಳಿಗ್ಗೆ 06 ಗಂಟೆಯಿAದ ಮೇ 21 ರ ರಾತ್ರಿ 12 ಗಂಟೆಯವರೆಗೆ ಲಾಕ್‌ಡೌನ್ ಜಾರಿಗೊಳಿಸಲಾಗಿದ್ದು, ಈ ಸಂದರ್ಭದಲ್ಲಿ ಅಗತ್ಯ ಸೇವೆಗಳನ್ನು ಹೊರತುಪಡಿಸಿ ಉಳಿದೆಲ್ಲಾ ಚಟುವಟಿಕೆಗಳಿಗೆ ಜಿಲ್ಲೆಯಾದ್ಯಂತ ನಿರ್ಬಂಧ ವಿಧಿಸಲಾಗಿತ್ತು. ಆದೇಶದಲ್ಲಿ ವಿನಾಯಿತಿ ನೀಡಿದ ಚಟುವಟಿಕೆಗಳಲ್ಲಿ ಕೈಗಾರಿಕಾ ಚಟುವಟಿಕೆಗಳನ್ನು ಸೇರ್ಪಡೆಗೊಳಿಸಿ ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ಅವರು ಆದೇಶ ಹೊರಡಿಸಿದ್ದಾರೆ.
ಈ ಆದೇಶದನ್ವಯ ಇ-ಕಾಮರ್ಸ್/ಹೋಮ್ ಡೆಲಿವರಿ ಸೇವೆಗಳ ಮುಖಾಂತರ ಎಲ್ಲಾ ವಸ್ತುಗಳನ್ನು ಮನೆಗೆ ಸರಬರಾಜು ಮಾಡಲು ಅನುಮತಿಸಲಾಗಿದೆ. ಕೊಪ್ಪಳ ಜಿಲ್ಲೆಯಲ್ಲಿನ ನಿರ್ದಿಷ್ಟ ಕೈಗಾರಿಕೆಗಳು, ಕೈಗಾರಿಕಾ ಸಂಸ್ಥೆಗಳು, ಉತ್ಪಾದನಾ ಘಟಕಗಳಿಗೆ ಕೋವಿಡ್ (ಕಂಟೈನ್‌ಮೆAಟ್ ವಲಯ ಹೊರತುಪಡಿಸಿ) ಸಮುಚಿತ ವರ್ತನೆಯನ್ನು ಪಾಲಿಸಿ ಹಾಗೂ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ ವತಿಯಿಂದ ಹೊರಡಿಸಿರುವ ರಾಷ್ಟಿçÃಯ ಮಾರ್ಗಸೂಚಿ ಪಾಲಿಸಿ ಕಾರ್ಯನಿರ್ವಹಿಸಲು ಅನುಮತಿಸಲಾಗಿದೆ. ಸಿಬ್ಬಂದಿಗಳು ಸಂಬAಧಪಟ್ಟ ಕೈಗಾರಿಕೆಗಳು, ಕೈಗಾರಿಕಾ ಸಂಸ್ಥೆಗಳು ನೀಡಿರುವ ಗುರುತಿನ ಚೀಟಿ ಅಥವಾ ಅಧಿಕೃತ ಪತ್ರವನ್ನು ತೋರಿಸುವ ಮೂಲಕ ಓಡಾಡುವುದಕ್ಕೆ ನಿರ್ದಿಷ್ಟ ಘಟಕಗಳಿಗೆ ಅನುಮತಿ ನೀಡಲಾಗಿದೆ.
ಜಿಲ್ಲೆಯ ಬೇವಿನಹಳ್ಳಿ ಗ್ರಾಮದ ಕಿರ್ಲೋಸ್ಕರ್ ಫೆರಸ್ ಇಂಡಸ್ಟಿçÃಸ್ ಲಿಮಿಟೆಡ್, ಗಿಣಿಗೇರಾ ಗ್ರಾಮದ ಹೊಸಪೇಟೆ ಸ್ಟೀಲ್ಸ್ ಲಿಮಿಟೆಡ್, ಅಲ್ಟಾçಟೆಕ್ ಸಿಮೆಂಟ್ ಲಿಮಿಟೆಡ್, ಹಾಲವರ್ತಿ ಗ್ರಾಮದ ಎಂಎಸ್‌ಪಿಎಲ್ ಲಿಮಿಟೆಡ್, ಠಾಕೂರ್ ಇಂಡಸ್ಟಿçÃಸ್, ಪಿಬಿಎಸ್ ಲಿಮಿಟೆಡ್, ಐಎಲ್‌ಸಿ ಲಿಮಿಟೆಡ್, ಕೆಪಿಆರ್ ಆಗ್ರೋಕೆಮ್ ಲಿಮಿಟೆಡ್, ಚಿಕ್ಕಕಾಸನಕಂಡಿ ಗ್ರಾಮದ ಎಂಎಸ್ ಮೆಟಲ್ಸ್ ಪ್ರೆöÊವೇಟ್ ಲಿಮಿಟೆಡ್, ಹಿರೇಬಗನಾಳ ಗ್ರಾಮದ ವನ್ಯಾ ಸ್ಟೀಲ್ಸ್ ಲಿಮಿಟೆಡ್, ಸುವರ್ಣಾ ಸ್ಟೀಲ್ ಲಿಮಿಟೆಡ್, ಹರೇಕೃಷ್ಣಾ ಮೆಟಾಲಿಕ್ಸ್, ಎಕ್ಸ್ಇಂಡಿಯಾ ಪ್ರೆöÊವೇಟ್ ಲಿಮಿಟೆಡ್, ಸಾನ್ವಿ ಸ್ಟೀಲ್ಸ್ ಲಿಮಿಟೆಡ್,  ಕುಣಿಕೇರಿ ಗ್ರಾಮದ ಭದ್ರಶ್ರೀ ಸ್ಟೀಲ್ ಪ್ರೆöÊವೇಟ್ ಲಿಮಿಟೆಡ್, ಚಿಕ್ಕಬಗನಾಳ ಗ್ರಾಮದ ಬಾಬಾ ಅಖಿಲಾ ಸತ್ಯಜ್ಯೋತಿ ಇಂಡಸ್ಟಿçÃಸ್ ಪ್ರೆöÊವೇಟ್ ಲಿಮಿಟೆಡ್,  ದೃವದೇಶ್ ಪ್ರೆöÊವೇಟ್ ಲಿಮಿಟೆಡ್, ಕನಕಾಪುರ ಗ್ರಾಮದ ಮುಕುಂದ ಸುಮಿ ಪ್ರೆöÊವೇಟ್ ಲಿಮಿಟೆಡ್, ಅಲ್ಲಾ ನಗರ ಗ್ರಾಮದ ಕಾಮಿನಿ ಐರನ್ ಸಿ.ನಂ-02, ಮುನಿರಾಬಾದ್ ಬಳಿಯ ಕೋರಮಂಡಲ್ ಇಂಟರ್‌ನ್ಯಾಷನಲ್ ಲಿಮಿಟೆಡ್ 101, 102, ಹೊಸಪೇಟೆ ರಸ್ತೆಯ ಅಭಯ್ ಸಾಲ್ವೆಂಟ್ ಪ್ರೆöÊವೇಟ್ ಲಿಮಿಟೆಡ್, ಇಂದರಗಿ ಗ್ರಾಮದ ದೊಡ್ಲಾ ಡೈರಿ ಲಿಮಿಟೆಡ್ ಸಿ.ನಂ. 163, 164 ಇಂದ್ರಾ ನಗರ ಕೈಗಾರಿಕಾ ಘಟಕಗಳಿಗೆ ಅನುಮತಿ ನೀಡಲಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Please follow and like us:
error