ಲಾಕಡೌನ್ ಎಫೆಕ್ಟ್ : 6 ಕಿ ಮೀ ನಡೆದುಕೊಂಡು ಬಂದು ಪರದಾಡಿದ ತುಂಬು ಗರ್ಭಿಣಿ

ಕೊಪ್ಪಳ :  ಲಾಕಡೌನ್ ನಿಂದ ವಾಹನವಿಲ್ಲದೇ ಪರದಾಡಿದ ಗರ್ಭಿಣಿ   ತನ್ನೂರಿನಿಂದ ನಡೆದುಕೊಂಡೇ ಬಂದ ಘಟನೆ ನಡೆದಿದೆ.

ಕೊಪ್ಪಳದಿಂದ 6 ಕಿಮಿ ದೂರವಿರುವ ನರೇಗಲ್ ಗ್ರಾಮದಿಂದ ಕೊಪ್ಪಳಕ್ಕೆ ನಡೆದುಕೊಂಡೇ ಬಂದಿದ್ದಾಳೆ ಈ ತುಂಬು ಗರ್ಬಿಣಿ    ವಾಹನ ಇಲ್ಲದೇ ಪರದಾಟ ನಡೆಸ್ತಾ ಇದ್ದ ಗರ್ಭೀಣಿಯನ್ನು ಗಮನಿಸಿದ  ಪತ್ರಕರ್ತರು  ತಮ್ಮ  ಕಾರಿನಲ್ಲಿ ಟ್ರಾಪ್ ಕೊಟ್ಟು ಮಾನವೀಯತೆ ಮೆರೆದಿದ್ದಾರೆ. ಆಸ್ಪತ್ರೆಗೆ ಹೋಗಲಾಗದೇ  ಮಹಿಳೆ ಪರದಾಟ ನಡೆಸ್ತಾ ಇದ್ದರು. ಇದನ್ನು ಗಮನಿಸಿ ಮಾಧ್ಯಮದ ಪ್ರತಿನಿಧಿಗಳು ಮಹಿಳೆಯನ್ನು ತಮ್ಮ ವಾಹನದಲ್ಲಿ  ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ವಾಹನಗಳು  ಇಲ್ಲದ ಕಾರಣಕ್ಕೆ ತುಂಬು ಗರ್ಭಿಣಿ ‌ ತಮ್ಮ ಊರಾದ ನರೇಗಲ್ ಗ್ರಾಮದಿಂದ ಕೊಪ್ಪಳಕ್ಕೆ ನಡೆದುಕೊಂಡೇ ಬಂದು ಆಸ್ಪತ್ರೆಗೆ ಹೋಗಲು ಪರದಾಡುತ್ತಿದ್ದರು.  ಬಿಸಿಲಿನ ತಾಪಕ್ಕೆ ಪರದಾಟ ನಡೆಸ್ತಾ ಇದ್ರು. ಇದೇ ವೇಳೆ ಗರ್ಭಿಣಿ ಲಕ್ಷ್ಮೀ ಪೂಜಾರ ಅವರ ತಾಯಿಯನ್ನು  ಮಾಧ್ಯಮದವರು ಕಾರಿನಲ್ಲಿ  ಡ್ರಾಪ್ ಮಾಡಿದ್ದಾರೆ.

Please follow and like us:
error