ದೇಶದ ವಿವಿಧ ರಾಜ್ಯಗಳ ಕೃಷಿಕರು ಕಳೆದ ಒಂದು ತಿಂಗಳಿಂದ ದೆಹಲಿ ಗಡಿಗಳಲ್ಲಿ ರಸ್ತೆಯ ಮೇಲೆ ಠಿಕಾಣಿ ಹೂಡಿ ಚಳಿ ಗಾಳಿಯನ್ನು ಲೆಕ್ಕಿಸದೆ ಸತ್ಯಾಗ್ರಹ ನಡೆಸುತ್ತಿದ್ದಾರೆ. ತಮ್ಮ ಸರ್ಕಾರ ರೈತರ ಕೂಗಿಗೆ ಕಿವಿ ಮುಚ್ಚಿಕೊಂಡಿರುವುದು ಖಂಡನೀಯ. ಹೊಸ ಕೃಷಿ ಕಾಯ್ದೆಗಳು ಮತ್ತು ವಿದ್ಯುಚ್ಛಕ್ತಿ ತಿದ್ದುಪಡಿ ಮಸೂದೆ ರೈತರ ಹಿತಕ್ಕೆ ವಿರುದ್ಧವಾಗಿವೆ ಮಾತ್ರವಲ್ಲ ಬಡ ಕೃಷಿ ಕೂಲಿಕಾರರ ಹಿತಕ್ಕೂ ವಿರುದ್ಧವಾಗಿವೆ.
೧. ಹೊಸ ಕೃಷಿ ಕಾಯ್ದೆಗಳು ರೈತರಿಗೆ ಸರ್ಕಾರದ ನೆರವು ಕಡಿತ ಮಾಡಲಿದೆ. ಗುತ್ತಿಗೆ ಕೃಷಿಗೆ ಪ್ರೊತ್ಸಾಹ ನೀಡಲಿವೆ. ರೈತರು ತಮ್ಮ ಭೂಮಿಯನ್ನು ಗುತ್ತಿಗೆಗೆ ನೀಡುವ ಬಲವಂತಕ್ಕೆ ಒಳಗಾಗುವರು. ಇದರಿಂದ ಕೃಷಿ ಕೂಲಿಕಾರರ ಮೇಲೆ ನೇರವಾದ ಪರಿಣಾಮ ಬೀರುವುದು.
೨. ಕೃಷಿಯ ಕಾರ್ಪೋರೇಟೀಕರಣ ತೀವ್ರಗೊಂಡ ಯಾಂತ್ರೀಕರಣ ಹೆಚ್ಚಾಗುವುದು. ಕೂಲಿಕಾರರು ಕೆಲಸ ಕಳೆದುಕೊಂಡು ಬೀದಿ ಪಾಲಾಗುವರು.
೩. ಗುತ್ತಿಗೆ ಕೃಷಿಯಲ್ಲಿ ಹೆಚ್ಚು ಕೂಲಿಕಾರರು ಬೇಕಾಗುವ ಭತ್ತ ಮೊದಲಾದ ಬೆಳೆಗಳನ್ನು ಕೈಬಿಡಲಾಗುವುದು.
೪. ಗುತ್ತಿಗೆ ಕೃಷಿಯಿಂದ ಗೇಣಿದಾರ ರೈತರಿಗೆ ಬೇಸಾಯ ಮಾಡಲು ಭೂಮಿ ಸಿಗದಂತಾಗುವುದು.
೫. ರೈತರ ಫಸಲಿಗೆ ಕನಿ? ಬೆಂಬಲ ಬೆಲೆಯನ್ನು ಕಾನೂನು ಮೂಲಕ ಖಚಿತ ಪಡೆಸಲು ನಿಮ್ಮ ಸರ್ಕಾರ ಒಪ್ಪದಿರುವುದರಿಂದ ಕೃಷಿ ಕೂಲಿಕಾರರಿಗೂ ನ್ಯಾಯಸಮ್ಮತ ಕನಿ? ವೇತನ ಸಿಗದಂತಾಗುವುದು.
೬. ಗುತ್ತಿಗೆ ಕೃಷಿ ಪದ್ಧತಿಯಲ್ಲಿ ಆಹಾರ ಧಾನ್ಯಗಳಿಗಿಂತ ಹೆಚ್ಚಾಗಿ ವಾಣಿಜ್ಯ ಬೆಳೆಗಳನ್ನು ಬೆಳೆಯಲಾಗುವುದು. ಇದರಿಂದಾಗಿ ದೇಶ ಆಹಾರದ ಕೊರತೆಯನ್ನು ಎದುರಿಸಬೇಕಾಗುವುದು.
೭. ಅಗತ್ಯವಸ್ತುಗಳ ಕಾಯ್ದೆಯನ್ನು ತಿದ್ದುಪಡಿ ಮಾಡಿರುವುದರಿಂದ ಅಕ್ರಮ ದಾಸ್ತಾನುದಾರರಿಗೆ, ಕಾಳಸಂತೆಕೋರರಿಗೆ ಕೃತಕ ಅಭಾವ ಸೃಷ್ಟಿಸಿ ಲಾಭ ಮಾಡಿಕೊಳ್ಳಲು ನೆರವಾಗುವುದು. ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ಬೆಲೆ ಏರಿಕೆಯ ಹೊರೆಯನ್ನು ಹೊರಬೇಕಾಗುವುದು.

೮. ಬೆಲೆ ಏರಿಕೆಯಿಂದ ಹೆಚ್ಚು ಸಂಕ?ಕ್ಕೆ ಒಳಗಾಗುವವರು ಬಡ ಕೂಲಿಕಾರರು. ಕೃಷಿ ಉತ್ಪನ್ನಗಳನ್ನು ಸರ್ಕಾರ ಹೆಚ್ಚು ಬೆಲೆ ಕೊಟ್ಟು ಖರೀದಿ ಮಾಡಿ ಕಡಿಮೆ ಬೆಲೆಗೆ ಮಾರಾಟ ಮಾಡುವ ಪಡಿತರ ಪದ್ಧತಿ ಇಲ್ಲದಂತಾಗಿ ಬಡ ಕೂಲಿಕಾರರು ಜೀವನ ನಿರ್ವಹಣೆಗೆ ಪರದಾಡುವಂತಾಗುವುದು.
೯. ರೈತರ ಭೂಮಿ ಕಾರ್ಪೊರೇಟ್ ಕಂಪನಿಗಳ ಪಾಲಾಗುವುದು. ಭೂರಹಿತ ಕೂಲಿಕಾರರ ಭೂಮಿಯ ಕನಸು ನುಚ್ಚುನೂರಾಗುವುದು. ದಲಿತರಿಗೆ ಭೂಮಿ ಸಿಗದಂತಾಗಿ ಅವರ ಮೇಲಿನ ದೌರ್ಜನ್ಯಗಳಿಗೆ ಕೊನೆ ಇಲ್ಲದಂತಾಗುವುದು. ಭೂಹೀನ ಬಡವರು ಅನೇಕ ವ?ಗಳಿಂದ ಸಾಗುವಳಿ ಮಾಡಿಕೊಂಡು ಬಂದಿರುವ ಸರ್ಕಾರಿ ಬೀಳು ಭೂಮಿ, ಅರಣ್ಯ ಭೂಮಿ, ಡಿ.ಸಿ. ಮನ್ನಾ ಭೂಮಿ ಅವರಿಂದ ಕಿತ್ತು ಕೊಳ್ಳಲಾಗುವುದು.
೧೦. ಹೊಸ ಕಾಯ್ದೆಗಳ ಅನು?ನದ ನಂತರ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಮಹತ್ವ ಕಳಕೊಂಡು ಕೂಲಿಕಾರರು ನಿರುದ್ಯೋಗಕ್ಕೆ ಒಳಗಾಗಿ ಯಾತನಾಮಯ ವಲಸೆ ಹೋಗುವುದು ಅಧಿಕವಾಗುವುದು.
೧೧. ಭೂಮಿಯ ಕೇಂದ್ರೀಕರಣ ತೀವ್ರಗೊಂಡು ಕೂಲಿಕಾರರು ಹೊಸ ಗುಲಾಮಗಿರಿಗೆ ಒಳಗಾಗುವವರು, ಸಾಮಾಜಿಕ ಅಸಮಾನತೆ ಹೆಚ್ಚಾಗುವುದು.
೧೨. ವಿದ್ಯುಚ್ಛಕ್ತಿ ತಿದ್ದುಪಡಿ ಮಸೂದೆ ಜಾರಿಗೆ ಬಂದರೆ ಸರ್ಕಾರದಿಂದ ಸಿಗುತ್ತಿದ್ದ ಎಲ್ಲ ನೆರವು ಹಿಂತೆಗೆಯಲ್ಪಟ್ಟು ಉಚಿತ ವಿದ್ಯುತ್ ಸೌಲಭ್ಯದಿಂದ ಬಡವರು ವಂಚಿತರಾಗುವರು.
ಆದ್ದರಿಂದ ರೈತರ ಹೋರಾಟಕ್ಕೆ ನಾವು ಕೂಲಿಕಾರರು ಸಂಪೂರ್ಣ ಬೆಂಬಲ ವ್ಯಕ್ತಪಡಿಸುತ್ತಾ ಈ ವಿನಾಶಕಾರಿ ಕಾಯ್ದೆಗಳನ್ನು ವಾಪಸ್ಸು ಪಡೆಯಬೇಕೆಂದು ಈ ಮೂಲಕ ಒತ್ತಾಯ

ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಬಸವರಾಜ ಮರಕುಂಬಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಂಕಪ್ಪ ಗದಗ, ಜಿಲ್ಲಾ ಸಮಿತಿ ಸದಸ್ಯರಾದ ಹುಸೇನಪ್ಪ.ಕೆ., ರಮೇಶ ಬಡಿಗಿ, ಅಂದಪ್ಪ ಬರದೂರ, ಬಾಳಪ್ಪ ಹುಲಿಹೈದರ, ಮರಿನಾಗಪ್ಪ ಡಗ್ಗಿ, ಖಾಸೀಮಸಾಬ ಸರದಾರ, ಹುಸೇನಸಾಬ ನದಾಫ್, ಹುಲಗಪ್ಪ ಗೋಕಾವಿ, ದುರಗೇಶ ತಂಬೂರಿ, ರೇಣುಕಮ್ಮ ಇಡಿಗಲ್, ಪಾರಮ್ಮ ಗದ್ದಿ, ಫಕೀರಮ್ಮ ಗೌರಿಪುರ, ರೇಣುಕಮ್ಮ ಭೀಮನೂರ, ಅಮೀನಾ ಬೇಗಂ, ಖಾಜಾಬನ್ನಿ ಕರಡಿ, ಶಶಿಕಲಾ ಇಟಿಗಿ, ಅಮರವ್ವ ಗದಗ, ರಾಮಣ್ಣ ದೊಡ್ಡಮನಿ, ಸತ್ಯಮ್ಮ ಗಬ್ಬೂರ ಇನ್ನೂ ಮುಂತಾದವರು ಬಾಗವಹಿಸಿದ್ದರು.

Please follow and like us:
error