ರೈತರ ಭದ್ರತೆ ದೇಶದ ಭದ್ರತೆ ಜನಜಾಗೃತಿ ಅಭಿಯಾನ ಜನವರಿ ೮ ರಿಂದ ೧೫ ರವರೆಗೆ

ಕೊಪ್ಪಳ :   ಭಾರತದ ಕೃಷಿಯು ಅನೇಕ ಬಿಕ್ಕಟ್ಟುಗಳನ್ನು ಎದುರಿಸುತ್ತಿದೆ ಎಂದು ಇಂದು ರೈತರು ಬೆಳೆದ ಬೆಳೆಗಳಿಗೆ ಸೂಕ್ತ ನಿಗದಿತ ಬೆಲೆ ಮತ್ತು ಮಾರುಕಟ್ಟೆ ಇಲ್ಲ. ನೀರಾವರಿ ಸೌಲಭ್ಯ, ಬಿತ್ತನೆ ಬೀಜ, ರಸಗೊಬ್ಬರ, ವಿದ್ಯುತ್ ಪೂರೈಕೆ, ದಾಸ್ತಾನು ಕೊಠಡಿ, ಸಾಲ ಸೌಲಭ್ಯ, ತಂತ್ರಜ್ಞಾನಗಳು ಸರಿಯಾಗಿ ಸಿಗದ ಪರಿಣಾಮ ರೈತ ಆತ್ಮಹತ್ಯೆಗೆ ಶರಣಾಗುತ್ತಿದ್ದಾನೆ. ಮುಂದುವರೆದು ಅಸಂಖ್ಯಾತ ರೈತ ಮತ್ತು ಕೃಷಿ ಕೂಲಿಕಾರರು ಕೃಷಿಯಿಂದ ದೂರವಾಗಿ ಹೊಟ್ಟೆಪಾಡಿಗಾಗಿ ಹಳ್ಳಿಯಿಂದ ನಗರಗಳಿಗೆ ವಲಸೆ ಹೊರಡುತ್ತಿದ್ದಾರೆ. ಇದರ ಬಗ್ಗೆ ಗಮನ ಹರಿಸಬೇಕಾದ ನಮ್ಮ ಸರ್ಕಾರಗಳು ತಮ್ಮ ಜವಾಬ್ದಾರಿಯನ್ನು ಮರೆತಿವೆ.

ಬಿ.ಜೆ.ಪಿ. ನೇತೃತ್ವದ ಕೇಂದ್ರ ಸರ್ಕಾರ ಮತ್ತು ಕರ್ನಾಟಕ ರಾಜ್ಯ ಸರ್ಕಾರಗಳು ಮೂರು ಮಹತ್ವದ ರೈತ ಮತ್ತು ಜನವಿರೋಧಿ ಕಾಯ್ದೆಗಳನ್ನು ಜಾರಿ ಮಾಡಲು ಹೊರಟಿವೆ. ಈ ಕಾಯ್ದೆಗಳು ಜಾರಿಯಾದರೆ ದೇಶದ ಕೃಷಿ ದಿವಾಳಿಯಾಗಿ ರೈತರು ಸಂಕಷ್ಟಕ್ಕೆ ಸಿಲುಕಲಿದ್ದಾರೆ. ತಿದ್ದುಪಡಿಗೆ ಒಳಗಾದ ಮೂರು ಕಾಯ್ದೆಗಳಾದ ಭೂಸುಧಾರಣೆ ತಿದ್ದುಪಡಿ ಕಾಯ್ದೆ, ಕೃಷಿ ಉತ್ಪನ್ನ ಮತ್ತು ಸರಕು ಸೇವೆಗಳ ಮಾರಾಟ ಕಾಯ್ದೆ (ಎ.ಪಿ.ಎಂ.ಸಿ) ಮತ್ತು ವಿದ್ಯುಚ್ಛಕ್ತಿ ತಿದ್ದುಪಡೆ ಕಾಯ್ದೆಗಳು ರೈತರಿಗೆ ಮಾರಕವಾಗಿ ಕೃಷಿಯನ್ನು ನಾಶಗೊಳಿಸಿ ಅಂಬಾನಿ, ಅದಾನಿ ಸೇರಿದಂತೆ ಇತರ ಕಾರ್ಪೋರೇಟ್ ಸಂಸ್ಥೆಗಳ ಮುಖ್ಯಸ್ಥರಿಗೆ ಕೃಷಿಯನ್ನು ಒಪ್ಪಲಿಸಲಿವೆ. ಕಾರ್ಪೋರೇಟ್ ಮತ್ತು ಬಂಡವಾಳ ಶಾಹಿ ಪರ ಇರುವ ರೈತ ಮತ್ತು ಜನವಿರೋಧಿ ಮೋದಿ ನೇತೃತ್ವದ ಭಾ.ಜ.ಪ. ಸರ್ಕಾರ ಬಂಡವಾಳ ಶಾಹಿಗಳ ಹಿತ ಕಾಯಲು ಮುಂದಾಗಿದೆ. ಇಂತಹ ಸೂಕ್ಷತೆಯನ್ನು ಅರಿತುಕೊಂಡು ನಾವುಗಳು ಅನ್ನದಾತರ ಜೊತೆಗೆ ನಿಲ್ಲಬೇಕಿದೆ ಹಾಗೂ ರೈತ ಕಾರ್ಮಿಕ, ದಲಿತ, ಅಲ್ಪಸಂಖ್ಯಾತ, ಮಹಿಳಾ ಮತ್ತು ಜನವಿರೋಧಿ ಸರ್ಕಾರಕ್ಕೆ ತಕ್ಕದಾದ ಪಾಠ ಕಲಿಸಿ ದೇಶವನ್ನು ಉಳಿಸಿಕೊಳ್ಳಬೇಕಿದೆ. ರೈತರ ಜೊತೆಗೆ ನಿಲ್ಲುವುದೆಂದರೆ ದೇಶದ ಜೊತೆಗೆ ನಿಂತಂತೆ. ನಾವು ರೈತರೊಂದಿಗೆ ನಿಲ್ಲೋಣ. ದೆಹಲಿಯಲ್ಲಿ ಪಂಜಾಬ್, ಹರಿಯಾಣ, ರಾಜಸ್ಥಾನ, ಮಹಾರಾಷ್ಟ್ರ ಸೇರಿ ದೇಶದ ಇತರೆ ರಾಜ್ಯಗಳ ರೈತರು ಮಾಡುತ್ತಿರುವ ಹೋರಾಟವು ದೇಶದ ಉಳಿವಿಗಾಗಿ ಮತ್ತು ಆಹಾರದ ಭದ್ರತೆಗಾಗಿ ಮಾಡುತ್ತಿರುವ ಹೋರಾಟವಾಗಿದೆ. ಈ ಹೋರಾಟಕ್ಕೆ ಇನ್ನಷ್ಟು ಶಕ್ತಿಯನ್ನು ತುಂಬುವುದಕ್ಕಾಗಿ ಹಾಗೂ ಕೃಷಿ ಸಂಬಂಧಿಸಿದ ಕಾಯ್ದೆಗಳಿಗೆ ಮಾಡಲಾದ ತಿದ್ದುಪಡಿಗಳಿಂದಾಗಿ ರೈತರಿಗೆ ಕೃಷಿಗೆ ಆಗುವ ನಷ್ಟವನ್ನು ಕುರಿತಂತೆ ರಾಜ್ಯದಲ್ಲಿ ಜನಜಾಗೃತಿಯನ್ನು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಕರ್ನಾಟಕ ರಾಜ್ಯ ಸಮಿತಿಯಿಂದ ಜನವರಿ ೮ ರಿಂದ ೧೫ ರವರೆಗೆ ಒಂದು ವಾರಗಳವರೆಗೆ ರಾಜ್ಯ ವ್ಯಾಪಿ ಜನರೊಂದಿಗೆ ಚರ್ಚೆ, ಸಂವಾದ, ಹೋರಾಟ, ಪ್ರತಿಭಟನಾ ಮೆರವಣಿಗೆ, ಜನಪ್ರತಿನಿಧಿಗಳ ಎಂ.ಪಿ., ಎಂ.ಎಲ್.ಎ. ಕಾರ್ಯಾಲಯ/ಮನೆಯ ಮುಂಭಾಗದಲ್ಲಿ ಪ್ರತಿಭಟನೆ ಮಾಡುತ್ತಿದೆ. ದೇಶ ಉಳಿಸುವ ಅನ್ನದಾತರ ಪರವಾದ ಹೋರಾಟಕ್ಕೆ ರಾಜ್ಯದ ಪ್ರಜ್ಞಾವಂತ ಜನತೆ, ವಿದ್ಯಾರ್ಥಿ ಯುವಜನರು ಸೇರಿ ಪ್ರಗತಿಪರ ಸಂಘಟನೆಗಳು ಜೊತೆಯಾಗಬೇಕೆಂದು ಆದಿಲ್ ಪಟೇ ಜಿಲ್ಲಾ ಅಧ್ಯಕ್ಷರು, ಮಹಮ್ಮದ್ ಅಲೀಮುದ್ದೀನ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ಪದಾಧಿಕಾರಿಗಳು   ಮೂಲಕ ತಿಳಿಸಿದ್ದಾರೆ.

Please follow and like us:
error