ರೈತರು ಎಫ್‌ಐಡಿ ಸಂಖ್ಯೆ ಪಡೆಯಿರಿ : ವಿಕಾಸ್ ಕಿಶೋರ್ ಸುರಳ್ಕರ್

ಕೊಪ್ಪಳ,  : ಕೊಪ್ಪಳ ಜಿಲ್ಲೆಯ ರೈತರು ಎಫ್.ಐ.ಡಿ ಸಂಖ್ಯೆ ಪಡೆದುಕೊಳ್ಳುವಂತೆ ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ಅವರು ತಿಳಿಸಿದ್ದಾರೆ.
ಕೊಪ್ಪಳ ಜಿಲ್ಲೆಯಲ್ಲಿ ಒಟ್ಟಾರೆ 4,21,711 ತಾಕುಗಳಿದ್ದು (ಸರ್ವೇ ನಂಬರ್), ಈಗಾಗಲೇ 2,51,877 ತಾಕುಗಳಿಗೆ ಆಧಾರ್ ಜೋಡಣೆಯಾಗಿದ್ದು, ಇನ್ನೂ ಬಾಕಿ ಉಳಿದಿರುವ 1,69,834 ತಾಕುಗಳಿಗೆ ಆಧಾರ್ ಜೋಡಣೆ ಬಾಕಿ ಇರುತ್ತದೆ. ಜಿಲ್ಲೆಯ ರೈತರುಗಳಿಗೆ ವಿವಿಧ ಇಲಾಖೆಗಳ ಯೋಜನೆಗೆ ಸಹಕಾರಿಯಾಗಲು ಅನುವಾಗುವಂತೆ ಜಿಲ್ಲೆಯಲ್ಲಿ ಆಧಾರ್ ಪಹಣಿ ಜೋಡಣೆ ಆಂದೋಲನ ಹಮ್ಮಿಕೊಂಡಿದ್ದು, ಎಫ್.ಐ.ಡಿ  (Farmer Identification) ನೋಂದಣಿ ಮಾಡದೇ ಇರುವ ರೈತರು ಅಗತ್ಯ ದಾಖಲಾತಿಗಳಾದ ಪಹಣಿ ಪ್ರತಿಕೆ, ಆಧಾರ್ ಕಾರ್ಡ್ ಪ್ರತಿಯೊಂದಿಗೆ ಒಪ್ಪಿಗೆ ಪತ್ರ, ಬ್ಯಾಂಕ್ ಖಾತೆಯ ವಿವರದ ಪ್ರತಿ, ಜಾತಿ ಮತ್ತು ಆದಾಯ ಪ್ರಮಾಣ ಪತ್ರದ ಪ್ರತಿ (ಎಸ್.ಸಿ & ಎಸ್.ಟಿ ರೈತರಿಗೆ ಮಾತ್ರ) ಅರ್ಜಿದಾರರ ಭಾವಚಿತ್ರಗಳೊಂದಿಗೆ ತಮ್ಮ ಸಮೀಪದ ಗ್ರಾಮ ಲೆಕ್ಕಾಧಿಕಾರಿ, ರೈತ ಸಂಪರ್ಕ ಕೇಂದ್ರ, ಸಹಾಯಕ ಕೃಷಿ ನಿರ್ದೇಶಕರ ಕಛೇರಿ ಹಾಗೂ ಸಹಾಯಕ ನಿರ್ದೇಶಕರು ತೋಟಗಾರಿಕೆ ಇಲಾಖೆಯ ಕಛೇರಿಗಳಿಗೆ ಭೇಟಿ ನೀಡಿ ಸಲ್ಲಿಸಬೇಕು ಎಂದು ಪ್ರಕಟಣೆ ತಿಳಿಸಿದೆ.

Please follow and like us:
error