ರೈತರನ್ನು ಬಡವರನ್ನು ನಿರ್ಲಕ್ಷಿಸಿದ ಬಿಜೆಪಿ ಸರ್ಕಾರ : ಶಾಸಕ ಕೆ. ರಾಘವೇಂದ್ರ ಹಿಟ್ನಾಳ

ಕೊಪ್ಪಳ :  ಕೇಂದ್ರ ಹಾಗೂ ರಾಜ್ಯದ ಬಿಜೆಪಿ ಸರ್ಕಾರದ ವವಿರುದ್ಧ ಕಟುವಾಗಿ ಮಾತನಾಡಿ ಬಡವರ ಕಲ್ಯಾಣಕ್ಕಾಗಿ ಬಿಜೆಪಿ ಸರ್ಕಾರವು ಯಾವುದೇ ಪೂರಕ ಯೋಜನೆಗಳನ್ನು ಸಿದ್ದ ಮಾಡದೆ ಬಡವರ ಅಭಿವೃದ್ದಿ ಬಗ್ಗೆ ಮಾತನಾಡುತ್ತಿದೆ ಸರ್ವರಿಗೂ ಸಮಪಾಲು ಸಮಬಾಳು ಎಂದು ಹೇಳುವ ಮುಖ್ಯಮಂತ್ರಿ ಯಡ್ಡಿಯೂರಪ್ಪನವರು ದಿನೆ ದಿನೆ ಬೆಲೆಗಳು ಗಗನಕ್ಕೆರುತ್ತಿದ್ದು ಬಡವರಿಗೆ ಜೀವನ ಕಷ್ಟಮಯವಾಗಿದ್ದು ಪೆಟ್ರೋಲ್ ಡೀಸೆಲ್ ಹಾಗೂ ದಿನಸಿ ವಸ್ತುಗಳ ಬೆಲೆ ದೈನಂದಿಕ ಜೀನಕ್ಕೆ ಮುಳುವಾಗುತ್ತಿವೆ.  ಮಳೆಯಿಂದ ಹಾನಿಯಾಗಿರುವ ಮನೆಗಳಿಗೆ ಬಿಡಿ ಕಾಸು ನೀಡಿಲ್ಲ ಎಂದು ಶಾಸಕ ರಾಘವೇಂದ್ರ ಹಿಟ್ನಾಳ ಆಕ್ರೋಶ ವ್ಯಕ್ತಪಡಿಸಿದರು.

ಅವರು ಲೇಬಗೇರಾ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಗ್ರಾಮಗಳಾದ

ಹನುಮನಹಳ್ಳಿ ಟಣಕನಕಲ್ ಹಟ್ಟಿ ಕಲಕೇರಿ ದೇವಲಾಪುರ ಚಿಲವಾಡಗಿ ಓಜನಹಳ್ಳಿ ಯತ್ನಟ್ಟಿ ಹುಚ್ಚೇಶ್ವರ ಕ್ಯಾಂಪ್ ನರೆಗಲ್ ಹಾಗೂ ಮಾದಿನೂರುಗಳಲ್ಲಿ   ವಿವಿಧ ಕಾಮಾಗಾರಿಗಳ ಭೂಮಿ ಪೂಜೆ ಶಾಲಾ ಕಟ್ಟಡಗಳ ಶುದ್ದಕುಡಿಯುವ ನೀರಿನ ಘಟಕ ಉದ್ಘಾಟನೆ ನೇರವೇರಿಸಿ ಮಾತನಾಡುತ್ತಿದ್ದರು.

ಹಿಂದಿನ ಕಾಂಗ್ರೆಸ್ ಸರ್ಕಾರದ ವಿದ್ಯಾರ್ಥಿಗಳಿಗೆ ನೀಡಿದ ಮಹತ್ವಾಂಕ್ಷಿ ಯೋಜನೆಯಾದ ವಿದ್ಯಾಸಿರಿ, ಉಚಿತ ಲ್ಯಾಪ್‌ಟಾಪ್ ಕೊಡುಗೆಯನ್ನು ಸ್ಥಗಿತಗೊಳಿಸಿದ್ದು ಈಗಾಗಲೇ ಶಾಲಾ ಕಾಲೇಜುಗಳು ಪ್ರಾರಂಭವಾಗಿರುವದರಿಂದ ಬಡ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಸೌಲಭ್ಯಯಿಂದ ವಂಚಿತರಾದರೆ ಈ ಸರ್ಕಾರದಲ್ಲಿ ಪರ್ಯಾಯ ಯಾವ ವ್ಯವಸ್ಥೆ ಇದೆ ? ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಾಜ್ಯ ವಿದ್ಯಾರ್ಥಿಗಳಿಗೆ ಕಲ್ಪಿಸಿದ ವಿದ್ಯಾಸಿರಿ ಯೋಜನೆಯು ಅನೇಕ ಬಡ ವಿದ್ಯಾರ್ಥಿಗಳಿಗೆ ಹೆಚ್ಚು ಅನುಕೂಲವಾಗಿತ್ತು ಅನ್ನಬಾಗ್ಯದ ಬಡವರ ಪಾಲಿನ ರೇಷನ್ ಅಕ್ಕಿಯನ್ನು ಕಸಿದುಕೊಳ್ಳುತ್ತಿರುವ ಈ ಸರ್ಕಾರವು ಎಲ್ಲಾ ಕ್ಷೇತ್ರದಲ್ಲಿ ವಿಫಲವಾಗಿದ್ದು ಮುಂಬರುವ ದಿನಗಳಲ್ಲಿ ನಾಡಿನ ಜನತೆ ಇವರಿಗೆ ತಕ್ಕ ಪಾಠ ಕಲಿಸಿ ಮತ್ತೊಮ್ಮೆ ರೈತರ ಬಡವರ ಶೋಷಿತ ವರ್ಗಗಳ ಶ‍್ರೇಯೋಭಿವೃದ್ಧಿ ಬಯಸುವ ಕಾಂಗ್ರೆಸ್ ಸರ್ಕಾರ ಮತೋಮ್ಮೆ ರಾಜ್ಯದಲ್ಲಿ ಅಧಿಕಾರ ಚುಕ್ಕಾಣಿ ಹಿಡಿಯುವುದು ಶತ ಸಿದ್ದ ಎಂದು ಹೇಳಿದರು.  ಗುಣಮಟ್ಟದ ಕಾಮಗಾರಿ ನಿರ್ವಹಿಸಲು ಗುತ್ತಿಗೆಧಾರರಿಗೆ ಹಾಗೂ ಅಧಿಕಾರಿಗಳಿಗೆ ಸೂಚಿಸಿ ಜನಪರ ಕಾರ್ಯ ಕೆಲಸಗಳನ್ನು ನಿರ್ವಹಿಸುವ ನಾಯಕರನ್ನು ಬೆಂಬಲಿಸಲು ಗ್ರಾಮಸ್ಥರಿಗೆ ಕರೆ ನೀಡಿದರು.

ಈ ಸಂದರ್ಭದಲ್ಲಿ ತಾಪಂ ಅದ್ಯಕ್ಷ ಬಾಲಚಂದ್ರನ್ ತಾಪಂ ಸದಸ್ಯ  ಸುಲೋಚನ ಸಂಕ್ಕಣ್ಣನವರ್ ಗ್ರಾಮ ಪಂಚಾಯತ್ ಅದ್ಯಕ್ಷ  ಕಮಲಮ್ಮ ಹರಿಜನ ಉಪಾದ್ಯಕ್ಷ ಉಡಚಪ್ಪ ಭೋವಿ ನಗರಸಭಾ ಸದಸ್ಯರುಗಳಾದ ಮುತ್ತುರಾಜ ಕುಷ್ಟಗಿ ಅಕ್ಬರ ಪಾಷ ಪಲ್ಟನ್ ಗ್ರಾಪಂ ಸದಸ್ಯರುಗಲಾದ ನಬಿಸಾಬ ಸಿದ್ದಪ್ಪ ಹೊಸಗೇರಿ ಯಮನುರಪ್ಪ ನಾಯಕ ಮುಖಂಡರುಗಳಾದ ಪ್ರಸನ್ನ ಗಡಾದ ಅಂಬರೀಷ ಉಪಲಾಪುರ ರಾಮಣ್ಣ ಹದ್ದಿನ ವಿರಣ್ಣ ಸೊಂಡುರು ಮುಕ್ಕಣ್ಣ ಹೊಸಗೇರಿ ಮೈಲಾರಪ್ಪ ಟಣಕನಕಲ್ ವಿವಿಧ ಇಲಾಖೆಯ ತಾಲೂಕು ಅಧಿಕಾರಿಗಳು ಕೆಆರ್‌ಐಡಿಎಲ್ ಅಭಿಯಂತರರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.

Please follow and like us:
error