ರೈತ,ಜನವಿರೋಧಿ ಕಾಯ್ದೆಗಳ ವಿರೋಧಿಸಿ ಜನಜಾಗೃತಿ ಅಭಿಯಾನ ಪೋಸ್ಟರ್ ಬಿಡುಗಡೆ ಕಾರ್ಯಕ್ರಮ

ಕೊಪ್ಪಳ :  ನಗರದ ಕಲಂ ಪಬ್ಲಿಕ್ ಸ್ಕೂಲ್‌ನಲ್ಲಿ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಕೊಪ್ಪಳ ಜಿಲ್ಲಾ ಘಟಕ ವತಿಯಿಂದ ಕೇಂದ್ರ ಸರ್ಕಾರ ಜಾರಿ ಮಾಡಲು ಹೊರಟಿರುವ ರೈತ ಮತ್ತು ಜನವಿರೋಧಿ ಕಾಯ್ದೆಗಳನ್ನು ವಿರೋಧಿಸಿ ಜನಜಾಗೃತಿ ಅಭಿಯಾನದ ಪೋಸ್ಟರ್ ಬಿಡುಡೆ ಕಾರ್ಯಕ್ರಮ ಜರುಗಿತು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ಜಿಲ್ಲಾ ಅಧ್ಯಕ್ಷರಾದ ಆದಿಲ್ ಪಟೇಲ್ ವಹಿಸಿ ರೈತರಿಗೆ ಆಗುತ್ತಿರುವ ಅನ್ಯಾಯ ಹಾಗೂ ಸರ್ಕಾರ ಮಾಡುತ್ತಿರುವ ದ್ವಂದ್ವ ನೀತಿ ಬಗ್ಗೆ ಮಾತನಾಡಿದರು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಬಸವ ಸಮಿತಿ ಕೊಪ್ಪಳದ ಮುಖಂಡರಾದ ಈಶಣ್ಣ ಕೊರ್ಲಹಳ್ಳಿ ಇವರು ರೈತರಿಗೆ ಬೆಳೆದ ಬೆಳೆಗೆ ಮಾರುಕಟ್ಟೆಯಲ್ಲಿ ಆಗುವ ಅನ್ಯಾಯದ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಹಾಗೂ ಮಹಮ್ಮದ್ ಇಸ್ಮಾಯಿಲ್ ನಾಲಬಂದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕೊಪ್ಪಳ ಇವರು ಕೂಡಾ ಅತಿಥಿಗಳಾಗಿ ಆಗಮಿಸಿ ಈ ಹೋರಾಟಕ್ಕೆ ಸದಾ ನನ್ನ ಬೆಂಬಲವಿದೆ, ಎ.ಪಿ.ಎಂ.ಸಿ. ಕಾಯ್ದೆ ವಿರೋಧಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಶಾಹಿದ ತಹಶೀಲ್ದಾರ, ವೆಲ್ಫೇರ್ ಪಾರ್ಟಿಯ ನಗರಸಭೆ ಸದಸ್ಯರಾದ ಶ್ರೀಮತಿ ಸಬಿಹಾ ಪಟೇಲ್‌ರವರು ರೈತರ ಸಮಸ್ಯೆ ಕುರಿತು ಮಾತನಾಡಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಮಹ್ಮದ್ ಅಲೀಮುದ್ದೀನ್ ಸ್ವಾಗತಿಸಿದರು. ಸಲ್ಮಾ ಜಹಾಂ ವಂದನಾರ್ಪಣೆ ಮಾಡಿದರು. ಈ ಸಂದರ್ಭದಲ್ಲಿ ಕಲಂ ಪಬ್ಲಿಕ್ ಸ್ಕೂಲಿನ ಪ್ರಿನ್ಸಿಪಾಲರಾದ ಶ್ರೀಮತಿ ರೂಹಿ ಅಫ್ಜಾ, ಇಸಾಕ್ ಫಜೀಲ್, ಅಹ್ಮದ್ ಖಾನ್, ಶ್ರೀಮತಿ ಲುತ್ಫಿ ಮೈಮನ್, ಮಲ್ಲಿಕಾರ್ಜುನ, ವಿಜಯಕುಮಾರ, ಮತ್ತಿತರರು ಉಪಸ್ಥಿತರಿದ್ದರು.

Please follow and like us:
error