ರೂ.೩.೫ ಕೋಟಿಯ ಲ್ಯಾಬ್ ಕಟ್ಟಡ ಕಾಮಗಾರಿಗೆ ಶಾಸಕರಿಂದ ಭೂಮಿಪೂಜೆ


ಕೊಪ್ಪಳ:೦೪, ದದೇಗಲ್ ಗ್ರಾಮದಲ್ಲಿರುವ ಸರಕಾರಿ ಡಿಪ್ಲೋಮಾ ಕಾಲೇಜಿನಲ್ಲಿ ರೂ.೩.೫ ಕೋಟಿಯ ಹೆಚ್ಚುವರಿ ಕಟ್ಟಡ ಹಾಗೂ ವಿಧ್ಯಾರ್ಥಿಗಳಿಗೆ ಲ್ಯಾಬ್ ಕಟ್ಟಡ ಕಾಮಗಾರಿಗೆ ಭೂಮಿಪೂಜೆ ಹಾಗೂ ಪ್ರದೇಶಾಭಿವೃದ್ಧಿ ಯೋಜನೆ ಅಡಿಯಲ್ಲಿ ರೂ.೫.೫ ಲಕ್ಷದ ಶುದ್ದ ಕುಡಿಯುವ ನೀರಿನ ಘಟಕ ಉದ್ಘಾಟಿಸಿ ಬಳಿಕ ಮಾತನಾಡಿದ ಶಾಸಕ ಕೆ.ರಾಘವೇಂದ್ರ ಹಿಟ್ನಾಳರವರು ಆಧುನಿಕ ಶಿಕ್ಷಣದಲ್ಲಿ ತಾಂತ್ರಿಕ ಶಿಕ್ಷಣಕ್ಕೆ ಹೆಚ್ಚು ಪ್ರಾದಾನ್ಯತೆ ಇದ್ದು, ವಿಧ್ಯಾರ್ಥಿಗಳು ಐ.ಟಿ.ಐ/ಡಿಪ್ಲೋಮಾ ವ್ಯಾಸಾಂಗ ಮುಗಿಸಿ ಇಂಜೀನಿಯರಿಂಗ್ ಕೋರ್ಸಗೆ ಹೋಗಲು ಅನೇಕ ಅವಕಾಶಗಳು ಇರುತ್ತವೆ. ಉತ್ತಮ ಪಲಿತಾಂಶ ಹೊಂದಿದ ವಿಧ್ಯಾರ್ಥಿಗಳಿಗೆ ಕ್ಯಾಂಪಸ್ ಮೂಲಕವೇ ಉದ್ಯೋಗ ಅವಕಾಶ ಕಲ್ಪಿಸಲಾಗುವುದು. ಕೊಪ್ಪಳ ಜಿಲ್ಲೆಯಲ್ಲಿ ಈಗಾಗಲೇ ಇಂಜೀನಿಯರಿಂಗ್ ಕಾಲೇಜು ಪ್ರಾರಂಭಗೊಂಡಿದ್ದು, ಶೀಘ್ರವೇ ಗಂಗಾವತಿಯಲ್ಲಿಯೂ ಸರಕಾರಿ ಇಂಜೀನಿಯರಿಂಗ್ ಕಾಲೇಜು ಪ್ರಾರಂಭಗೊಳ್ಳಲಿದ್ದು, ಜಿಲ್ಲೆಯ ಡಿಪ್ಲೋಮಾ ವಿಧ್ಯಾರ್ಥಿಗಳಿಗೆ ಇಂಜೀನಿಯರಿಂಗ್ ವ್ಯಾಸಂಗಕ್ಕಾಗಿ ಸಾಕಷ್ಟು ಅವಕಾಶಗಳಿದ್ದು, ಇದರ ಸದುಪಯೋಗ ಮಾಡಿಕೊಳ್ಳಬೇಕೆಂದು ವಿಧ್ಯಾರ್ಥಿಗಳಿಗೆ ಕರೆ ನೀಡಿದರು.
ಈ ಸಂದರ್ಭದಲ್ಲಿ ಜಿ.ಪಂ.ಮಾಜಿ ಸದಸ್ಯ ಪ್ರಸನ್ನ ಗಡಾದ, ನಗರಸಭೆ ಸದಸ್ಯ ಅಕ್ಬರಪಾಷಾ ಪಲ್ಟನ, ಪ್ರಾಚಾರ್ಯರ ವಾದಿರಾಜಮಠ, ಮುಖಂಡರುಗಳಾದ ಗಾಳೆಪ್ಪ ಪೂಜಾರ, ಅಂದಾನಸ್ವಾಮಿ, ಮೌಲಾಹುಸ್ಸೇನ ಕೋಳೂರು, ಉಪನ್ಯಾಸಕರು ವಿಧ್ಯಾರ್ಥಿಗಳು, ವಕ್ತಾರ ರವಿ ಕುರಗೋಡ ಯಾದವ್,ಉಪಸ್ಥಿತರಿದ್ದರು.

Please follow and like us:
error