ರೂ.೧.ಕೋಟಿ ೭೦ ಲಕ್ಷದ ರಸ್ತೆ ಕಾಮಗಾರಿಗೆ ಶಾಸಕರಿಂದ ಭೂಮಿಪೂಜೆ


ಕೊಪ್ಪಳ:೦೮, ಚಿಕ್ಕಸಿಂದೋಗಿ ಗ್ರಾಮದಿಂದ ಗೊಂಡಬಾಳ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ೨.೫ ಕಿ.ಮೀ. ರಸ್ತೆ ಅಂದಾಜು ಮೊತ್ತ ೧ ಕೋಟಿ ೭೦ ಲಕ್ಷದ ರಸ್ತೆ ನಿರ್ಮಾಣದ ಕಾಮಗಾರಿಗೆ ಭೂಮಿಪೂಜೆ ನೇರವೇರಿಸಿ ಬಳಿಕ ಮಾತನಾಡಿದ ಶಾಸಕ ಕೆ.ರಾಘವೇಂದ್ರ ಹಿಟ್ನಾಳರವರು, ಗ್ರಾಮ ವಿಕಾಸನ ಯೋಜನೆ ಅಡಿಯಲ್ಲಿ ಕ್ಷೇತ್ರದ ಪ್ರತಿ ಗ್ರಾಮಕ್ಕೂ ಅತ್ಯವಶ್ಯಕ ಇರುವ ಮೂಲಭೂತ ಸೌಕರ್ಯಗಳನ್ನು ಹಂತ-ಹಂತವಾಗಿ ಕಲಿಸಿದ್ದು, ಪ್ರತಿ ಸಣ್ಣ ಗ್ರಾಮಕ್ಕೆ ರೂ.೧ ಕೋಟಿಗಿಂತ ಹೆಚ್ಚು ಅನುದಾನ ಮಂಜೂರು ಮಾಡಿಸಿದ್ದು, ದೊಡ್ಡ ಗ್ರಾಮಗಳಿಗೆ ೫ ರಿಂದ ೭ ಕೋಟಿವರೆಗೆ ಅನುದಾನ ಕಲ್ಪಿಸಿ ಜನರಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿದೆ. ಈ ೬ ವರ್ಷದ ಅವಧಿಯಲ್ಲಿ ಕ್ಷೇತ್ರವೂ ಸರ್ವಾಂಗೀಣ ಅಭೀವೃದ್ಧಿ ಪಥದತ್ತ ಸಾಗುತ್ತಿದ್ದು, ಬರುವ ದಿನಗಳಲ್ಲಿ ಕೊಪ್ಪಳ ಕ್ಷೇತ್ರವನ್ನು ಒಂದು ಮಾದರಿಯ ಕ್ಷೇತ್ರವನ್ನಾಗಿ ಮಾಡುವೇನು. ಜನರು ಸರ್ಕಾರದ ಅನುದಾನವನ್ನು ಸದ್ಬಳಕೆ ಮಾಡಿಕೊಂಡು ಗುಣಮಟ್ಟದ ಕಾಮಗಾರಿಗೆ ಕೈಜೋಡಿಸಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಜಿ.ಪಂ.ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಎಸ್.ಬಿ.ನಾಗರಳ್ಳಿ, ಕುಡಾ ಮಾಜಿ ಅಧ್ಯಕ್ಷ ಜುಲ್ಲು ಖಾದ್ರಿ, ಎ.ಪಿ.ಎಮ್.ಸಿ.ಅಧ್ಯಕ್ಷ ಜಡಿಯಪ್ಪ ಬಂಗಾಳಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಸುರೇಶ ಬೂಮರೆಡ್ಡಿ, ಖಾಟನ್ ಪಾಷಾ, ಕೆ.ಎಮ್.ಎಫ್.ಮಾಜಿ ಅಧ್ಯಕ್ಷ ವೆಂಕನಗೌಡ್ರು ಹಿರೇಗೌಡ್ರು, ತಾ.ಪಂ.ಸದಸ್ಯೆ ರಾಜುರೆಡ್ಡಿ, ನಿಂಗಪ್ಪ ಯತ್ನಟ್ಟಿ, ನಗಸಭೆ ಸದಸ್ಯ ಅಕ್ಬರಪಾಷಾ ಪಲ್ಟನ, ಮುಖಂಡರುಗಳಾದ ಗಾಳೆಪ್ಪ ಪೂಜಾರ, ಕೇಶವರೆಡ್ಡಿ, ಕೃಷ್ಣ ಗಲಬಿ, ಅಂದಾನಸ್ವಾಮಿ, ಲೋಕೋಪಯೋಗಿ ಇಲಾಖೆ ಅಭಿಯಂತರರಾದ ವೆಂಕಟೇಶ, ಗುತ್ತಿಗೆದಾರರಾದ ಹೊಸಗೇರಿ, ಶರಣಪ್ಪ ಸಜ್ಜನ್, ಬಸವರಾಜ ಬಂಗಿ,ಸರ್ವಜ್ನೆಪ್ಪ, ವಕ್ತಾರ ಕುರಗೋಡ ಯಾದವ್ ರವಿ ಉಪಸ್ಥಿತರಿದ್ದರು.

Please follow and like us:
error