ರೂ ೧೦ ಕೋಟಿಯ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕರಿಂದ ಭೂಮಿಪೂಜೆ

ಕೊಪ್ಪಳ:೧೮, ಹಿಟ್ನಾಳ ಜಿಲ್ಲಾ ಪಂಚಾಯತಿಯ ವಿವಿಧ ಗ್ರಾಮಗಳಲ್ಲಿ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಯೋಜನೆ ಎಸ್.ಸಿ.ಪಿ ಹಾಗೂ ಟಿ.ಎಸ್.ಪಿ ಯೋಜನೆ ಅಡಿಯಲ್ಲಿ ಹಾಗೂ ರೈಟ್ಸ್ ಯೋಜನೆ ಅಡಿಯಲ್ಲಿ ಅಂದಾಜು ಮೊತ್ತ ರೂ.೧೦ ಕೋಟಿಯ ವೆಚ್ಚದ ಅಡಿಯಲ್ಲಿ ಸಿಸಿ ರಸ್ತೆ, ಪ್ರಾಥಮಿಕ ಆರೋಗ್ಯ ಕೇಂದ್ರ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಹೆಚ್ಚುವರಿ ಕೊಠಡಿ ನಿರ್ಮಾಣ ಕಾಮಗಾರಿ, ಉರ್ದು ಪ್ರಾಥಮಿಕ ಶಾಲಾ ಕಟ್ಟಡ, ಆಂಬ್ಯೂಲನ್ಸ್ ಲೋಕಾರ್ಪಣೆ ಹಾಗೂ ಸರಕಾರಿ ಆಸ್ಪತ್ರೆ ಉದ್ಘಾಟನೆ ನೇರವೇರಿಸಿ ಬಳಿಕ ಮಾತನಾಡಿದ ಶಾಸಕ ಕೆ.ರಾಘವೇಂದ್ರ ಹಿಟ್ನಾಳರವರು, ಜನಪರ ಕಲ್ಯಾಣ ಯೋಜನೆಗಳನ್ನು ಹಂತ ಹಂತವಾಗಿ ಕ್ಷೇತ್ರಕ್ಕೆ ಸಮಗ್ರ ಅನುದಾನ ತಂದು ಗ್ರಾಮೀಣ ಭಾಗದ ಜನತೆಗೆ ಅತ್ಯವಶ್ಯಕ ಇರುವ ಮೂಲಭೂತ ಸೌಕರ್ಯಗಳನ್ನು ಅತ್ಯಂತ ಶರವೇಗದಲ್ಲಿ ಕಲ್ಪಿಸಲಾಗುತ್ತಿದ್ದು, ಸರ್ಕಾರ ಕೊಡಮಾಡ್ಲಪಡುವ ಅನುದಾನದ ಸದ್ಬಳಕೆಯ ಸದೂಪಯೋಗ ಪ್ರತಿಯೊಬ್ಬರು ಮಾಡಿಕೊಂಡಾಗ ಅನುದಾನದ ಮಹತ್ವದ ಅರಿವು ಮೂಡುತ್ತದೆ. ಕ್ಷೇತ್ರದ ಎಲ್ಲಾ ಗ್ರಾಮಗಳಿಗೂ ಕುಡಿಯುವ ನೀರು, ಸುಸರ್ಜಿತ ರಸ್ತೆಗಳ ನಿರ್ಮಾಣ, ಚರಂಡಿ, ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಸಮುದಾಯ ಭವನಗಳ ನಿರ್ಮಾಣ ಈ ೨೦ ವರ್ಷಗಳಲ್ಲಿ ಕೊಪ್ಪಳ ಕ್ಷೇತ್ರವು ಅಭಿವೃದ್ಧಿ ಹೊಂದುತ್ತಿರುವುದು ಇತಿಹಾಸವಾಗಿದೆ. ಈಗಾಗಲೇ ಗ್ರಾಮೀಣ ಭಾಗದಲ್ಲಿ ಅವಶ್ಯಕತೆ ಇರುವ ಗ್ರಾಮಗಳಿಗೆ ನೀರಾವರಿ ಸೌಲಭ್ಯಗಳನ್ನು ಕಲ್ಪಿಸಲಾಗಿದ್ದು, ಕೊಪ್ಪಳ ಕ್ಷೇತ್ರವು ಬರುವ ದಿನಗಳಲ್ಲಿ ಒಂದು ಮಾದರೀಯ ಕ್ಷೇತ್ರವನ್ನಾಗಿ ಮಾಡುವುದೇ ನನ್ನ ರಾಜಕೀಯ ಆಧ್ಯತೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ತಾ.ಪಂ.ಅಧ್ಯಕ್ಷ ಬಾಲಚಂದ್ರನ್, ಮಾಜಿ ಜಿ.ಪಂ.ಅಧ್ಯಕ್ಷ ಟಿ.ಜನಾರ್ಧನ ಹುಲಗಿ, ತಾ.ಪಂ.ಸದಸ್ಯ ಯಂಕಪ್ಪ ಹೊಸಳ್ಳಿ, ಮೂರ್ತೇಪ್ಪ ಹಿಟ್ನಾಳ, ವೆಂಕಟೇಶ ಕಂಪಸಾಗರ, ಎ.ಪಿ.ಎಮ್.ಸಿ.ಮಾಜಿ ಅಧ್ಯಕ್ಷ ಶಿವಲಿಂಗಪ್ಪ, ಜಿ.ಪಂ.ಮಾಜಿ ಸದಸ್ಯ ರಮೇಶ ಹಿಟ್ನಾಳ, ವೀರಣ್ಣ ಹುಲಗಿ, ಭರಮಪ್ಪ ಬೇಲ್ಲದ್, ರಾಮರ್ಮೂತಿ, ವಿಜಯಕುಮಾರ ಪಾಟೀಲ, ಬಸವರಾಜ ಆನೆಗುಂದಿ, ನಗರಸಭೆ ಸದಸ್ಯ ಅಕ್ಬರಪಾಷಾ ಪಲ್ಟನ, ಅಶೋಕ ಇಳಿಗೇರ, ಪ್ರಭುರಾಜ ಪಾಟೀಲ, ಬಾಬುಗೌಡ ಪಾಟೀಲ, ಜಿಯಾ ಖಾನ್, ವಿಜಯಕುಮಾರ ಹುಲಗಿ, ಶಂಕ್ರಪ್ಪ ಮುನಿರಾಬಾದ್, ಬಿಸ್ಮಿಲ್ಲಾ ಖಾನ್, ಶೇರು ಮುನಿರಾಬಾದ್,ವೈದ್ಯಾದೀಕಾರಿಗಳು, ಅಭಿಯಂತರರು ಹಾಗೂ ಗುತ್ತಿಗೆದಾರರು ಉಪಸ್ಥಿತರಿದ್ದರು.

Please follow and like us:
error