ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ: ಚಿಣ್ಣರಿಂದ ಚಾಲನೆ

ಕೊಪ್ಪಳ , : ರಾಷ್ಟ್ರೀಯ ಗ್ರಂಥಾಲಯ ಸಪ್ತಾಹದ ಅಂಗವಾಗಿ ನಗರದ ಸಾರ್ವಜನಿಕ ಗ್ರಂಥಾಲಯ ಇಲಾಖೆ ಆಯೋಜಿಸಿರುವ ಪುಸ್ತಕ ಪ್ರದರ್ಶನಕ್ಕೆ ಚಿಣ್ಣರಿಂದ ಚಾಲನೆ ದೊರೆಯಿತು. ಮಕ್ಕಳ ದಿನಾಚರಣೆಯೂ ಗ್ರಂಥಾಲಯ ಸಪ್ತಾಹದ ಸಂದರ್ಭದಲ್ಲಿಯೇ ಆಚರಿಸಲ್ಪಡುವುದರಿಂದ ಈ ಅರ್ಥಪೂರ್ಣ ಕಾರ್ಯಕ್ರಮ ವಿಶೇ?ತೆ ಪಡೆಯಿತು.
ನಗರದ ಸಾಹಿತ್ಯ ಭವನದ ಬಳಿಯ ಜಿಲ್ಲಾ ಕೇಂದ್ರ ಗ್ರಂಥಾಲಯದಲ್ಲಿ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹದ ಅಂಗವಾಗಿ ಇಂದಿನಿಂದ ಪ್ರಾರಂಭವಾದ ಪುಸ್ತಕ ಪ್ರದರ್ಶನವನ್ನು ಕಿರಿಯ ವಿದ್ಯಾರ್ಥಿ ಓದುಗಳಾದ ಮಹತಿ ಎ.ಪ್ಯಾಟಿ ಉದ್ಘಾಟಿಸಿ,ಪಂಚತಂತ್ರದ ಆಯ್ದ ನೀತಿ ಕಥೆಗಳನ್ನು ವಾಚನ ಮಾಡಿದಳು.
ಭಾರತೀಯ ಗ್ರಂಥಾಲಯ ಪಿತಾಮಹ ಡಾ.ಎಸ್.ಆರ್.ರಂಗನಾಥನ್ ಅವರ ಭಾವಚಿತ್ರಕ್ಕೆ ಗೌರವ ಸಲ್ಲಿಸಲಾಯಿತು. ವಿದ್ಯಾರ್ಥಿ ಓದುಗರಾದ ಕೃತಿಕಾ ಎಸ್.ಗದಗ ಸುಗಮ ಸಂಗೀತ ಪ್ರಸ್ತುತ ಪಡಿಸಿದಳು. ಉದಯ ಎಂ.ಡೊಳ್ಳಿನ, ಆದರ್ಶ ಎಂ.ಸಾಲಿಮಠ ಶಕ್ತಿವರ್ಧನ ಮತ್ತಿತರರು ವಚನಗಳನ್ನು ಹೇಳಿದರು.
ನವೆಂಬರ್ ೨೦ ರವರೆಗೆ ಪುಸ್ತಕ ಪ್ರದರ್ಶನ ಮುಂದುವರೆಯಲಿದ್ದು, ಕಿಟ್ಟೆಲ್ ರ ನಿಘಂಟು, ಗೆಜೆಟಿಯರ್ ಗಳು,ಕಾದಂಬರಿಗಳು ಸೇರಿದಂತೆ ಕನ್ನಡ, ಇಂಗ್ಲೀ? ಹಾಗೂ ಹಿಂದಿ ಪುಸ್ತಕಗಳು ಇವೆ.
ಗ್ರಂಥಾಲಯ ಸಹಾಯಕರಾದ ನಾಗರಾಜನಾಯಕ ಡಿ.ಡೊಳ್ಳಿನ, ವಿಜಯಲಕ್ಷ್ಮೀ ವಡ್ಡಟ್ಟಿ , ಸಿಬ್ಬಂದಿ ವರ್ಗದ ಗಂಗಮ್ಮ ಡೊಳ್ಳಿನ, ಹುಲಿಗೆಮ್ಮ ಬಣಕಾರ, ಅನ್ನಪೂರ್ಣಮ್ಮ. ಸೇರಿದಂತೆ ಗ್ರಂಥಾಲಯದ ಓದುಗರಾದ ಕಲ್ಲಯ್ಯ, ಯಶೋಧಾ, ಶರಣಬಸವ, ಪ್ರಶಾಂತ, ನೀಲಪ್ಪ, ಫಕೀರಪ್ಪ, ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು

Please follow and like us:
error