ರಾಷ್ಟಿಯ ಕ್ಷಯರೋಗ ನಿರ್ಮೂಲನಾ ಕಾರ್ಯಕ್ರಮದಡಿ ಗ್ರಾಮಗಳನ್ನು ದತ್ತು ತೆಗೆದುಕೊಳ್ಳಿ : ಪಿ.ಸುನೀಲ್ ಕುಮಾರ್

ಕೊಪ್ಪಳ ಜ. ರಾಷ್ಟಿçÃಯ ಕ್ಷಯರೋಗ ನಿರ್ಮೂಲನಾ ಕಾರ್ಯಕ್ರಮದಡಿ ಕ್ಷಯಮುಕ್ತ ಗ್ರಾಮವನ್ನಾಗಿಸಲು ಪ್ರತಿಯೊಂದು ಸಂಘ ಸಂಸ್ಥೆಗಳು ಆಯಾ ಗ್ರಾಮವನ್ನು ದತ್ತು ತೆಗೆದುಕೊಂಡು ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್ ಅವರು ತಿಳಿಸಿದ್ದಾರೆ.
ಭಾರತ ಸರ್ಕಾರದ ವತಿಯಿಂದ 2025ರ ರೊಳಗಾಗಿ ಕ್ಷಯ ಮುಕ್ತ ಭಾರತವನ್ನಾಗಿಸುವ ಗುರಿ ಹೊಂದಲಾಗಿದೆ.  ಇದಕ್ಕೆ ಸಂಬAಧಿಸಿದAತೆ ಬಹಳಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಅದರಂತೆ ನ್ಯಾಷನಲ್ ಸ್ಟಾçö್ಯಟಜಿಕ್ ಪ್ಲಾನ್ ( National Strategic Plan ) 2017-2025, ಪ್ರಕಾರ ಕ್ಷಯ ಮುಕ್ತ ಭಾರತ 2025 ಸಾಧಿಸಲು ಕಾರ್ಯಯೋಜನೆ ರೂಪಿಸಲಾಗಿದೆ.
ಸರಕಾರ “ಟಿ.ಬಿ ಸೋಲಿಸಿ ದೇಶವನ್ನು ಗೆಲ್ಲಿಸಿ” ( TB Harega Desh Jeetega ) ಅಭಿಯಾನವನ್ನು ಪ್ರಾರಂಭಿಸಿದ್ದು, ಇದರ ಉದ್ದೇಶ ನ್ಯಾಷನಲ್ ಸ್ಟಾçö್ಯಟಜಿಕ್ ಪ್ಲಾನ್‌ನ ತ್ವರಿತಗೊಳಿಸುವುದಾಗಿದೆ. ಇದು ಕೊಪ್ಪಳ ಜಿಲ್ಲೆಯಲ್ಲಿರುವ ಪ್ರತಿಯೊಬ್ಬರ ಸಾಮಾಜಿಕ ಜವಾಬ್ದಾರಿಯಾಗಿರುತ್ತದೆ.  ಜಿಲ್ಲೆಯಲ್ಲಿರುವ ಎಲ್ಲಾ ಸಂಘ ಸಂಸ್ಥೆಗಳು ಈ ಆಂದೋಲನದಲ್ಲಿ ಭಾಗವಹಿಸುವುದು ಮತ್ತು ಕ್ಷಯಮುಕ್ತ ಜಿಲ್ಲೆಯನ್ನಾಗಿಸುವುದು ಅತೀ ಅವಶ್ಯವಿರುತ್ತದೆ.  ಆದ್ದರಿಂದ ಪ್ರತಿಯೊಂದು ಸಂಘ ಸಂಸ್ಥೆಗಳು ಒಂದೊAದು ಗ್ರಾಮಗಳನ್ನು ಆಯ್ಕೆ ಮಾಡಿಕೊಂಡು, ದತ್ತು ಪಡೆದು ಈ ಗ್ರಾಮಗಳಲ್ಲಿ ಕ್ಷಯ ನಿರ್ಮೂಲನೆಗೆ ಅಗತ್ಯ ಕ್ರಮ ತೆಗೆದುಕೊಳ್ಳಬೇಕು.
ಆಯ್ಕೆ ಮಾಡಿಕೊಂಡ ಗ್ರಾಮದಲ್ಲಿ ಕ್ಷಯರೋಗದ ಕುರಿತು ಅರಿವು ಮತ್ತು ಜಾಗೃತಿ ಮೂಡಿಸುವುದರ ಜೊತೆಗೆ ಸಂಶಯಾಸ್ಪದ ಕ್ಷಯದ ಲಕ್ಷಣಗಳನ್ನು ಹೊಂದಿದ ವ್ಯಕ್ತಿಗೆ ತಪಾಸಣೆಗೆ ಕಳುಹಿಸಿಕೊಡುವುದು.  ಆರ್ಥಿಕವಾಗಿ ದುರ್ಬಲತೆ ಹೊಂದಿದ ಕ್ಷಯರೋಗಿಗಳಿಗೆ ಪೌಷ್ಟಿಕ ಆಹಾರದ ಸೌಲಭ್ಯ ಒದಗಿಸುವುದು.  ಗ್ರಾಮದ ಶಾಲೆಗಳಲ್ಲಿ ಮಕ್ಕಳಿಗೆ ಕ್ಷಯರೋಗದ ಲಕ್ಷಣಗಳು ಮತ್ತು ಪ್ರತಿಬಂಧಕ ಕ್ರಮಗಳ ( Preventive measures) ಬಗ್ಗೆ ತಿಳಿಸುವುದು.  ಗ್ರಾಮ ಪಂಚಾಯತಿ ಸದಸ್ಯರಿಗೆ, ಸ್ತಿçà ಶಕ್ತಿ ಸಂಘಗಳಿಗೆ, ಇತರೆ ಸ್ವ ಸಹಾಯ ಸಂಘದವರಿಗೆ ಅರಿವು ಮತ್ತು ಜಾಗೃತಿ ಮೂಡಿಸುವುದರೊಂದಿಗೆ ಸದರಿಯವರನ್ನು ಕ್ಷಯರೋಗ ನಿರ್ಮೂಲನೆಯಲ್ಲಿ ಭಾಗವಹಿಸುವಂತೆ ಮನವೊಲಿಸುವುದು.  ಗುಣಮುಖ ಹೊಂದಿದ ಮತ್ತು ಚಿಕಿತ್ಸೆಯಲ್ಲಿರುವ ಕ್ಷಯರೋಗಿಗಳ ಸಹಕಾರದಿಂದ ಕ್ಷಯಮುಕ್ತ ನಿರ್ಮೂಲನಾ ಸಮಿತಿ ರಚನೆಯೊಂದಿಗೆ ಗ್ರಾಮದ ಕ್ಷಯರೋಗದ ಪ್ರಗತಿಯನ್ನು ಹೆಚ್ಚಿಸಬೇಕು.
ಚಿಕಿತ್ಸೆ ಬಿಟ್ಟ ರೋಗಿಗಳನ್ನು ಮನವೊಲಿಸಿ ಚಿಕಿತ್ಸೆಯನ್ನು ಪೂರ್ಣಗೊಳಿಸಲು ಪ್ರೇರೆಪಿಸಬೇಕು.  ನಿಯತಕಾಲಿಕವಾಗಿ ಮನೆ ಭೇಟಿ ಮತ್ತು ದುರ್ಬಲ ವರ್ಗದವರಲ್ಲಿ (ಮಧುಮೇಹ, ಧೂಮಪಾನ, ಮದ್ಯಪಾನ, ಅಪೌಷ್ಟಿಕತೆ, ಹೆಚ್.ಐ.ವಿ.) ಕ್ಷಯ ತ್ವರಿತವಾಗಿ ಪತ್ತೆ ಹಚ್ಚುವಲ್ಲಿ ಪ್ರಯತ್ನಿಸಬೇಕು.  ಗ್ರಾಮದಲ್ಲಿ ಡಂಗೂರ, ಬೀದಿ ನಾಟಕ, ರಸಪ್ರಶ್ನೆ ಕಾರ್ಯಕ್ರಮ, ಧಾರ್ಮಿಕ ಮುಖಂಡರ ಮುಖಾಂತರ ಕ್ಷಯದ ಜಾಗೃತಿ ಮೂಡಿಸಬೇಕು.  ಈ ಕಾರ್ಯಕ್ರಮಕ್ಕೆ ಸರಕಾರದಿಂದ ಯಾವುದೇ ಆರ್ಥಿಕ ಸೌಲಭ್ಯವಿರುವುದಿಲ್ಲ. ಇದು ಸಾಮಾಜಿಕ ಜವಾಬ್ದಾರಿಯಾಗಿರುವುದರಿಂದ ವಿವರಗಳಿಗೆ ಜಿಲ್ಲಾ ಕ್ಷಯರೋಗ ನಿಯಂತ್ರಣ ಅಧಿಕಾರಿಗಳು, ಕೊಪ್ಪಳ ಇವರನ್ನು ಸಂಪರ್ಕಿಸಬೇಕು.
ಒಟ್ಟಾರೆಯಾಗಿ ಕ್ಷಯ ಮುಕ್ತ ಜಿಲ್ಲೆಯನ್ನಾಗಿಸಲು ಪ್ರತಿಯೊಬ್ಬ ಸಾರ್ವಜನಿಕರ ಪಾಲ್ಗೊಳ್ಳುವಿಕೆ ಪ್ರಮುಖ ಪಾತ್ರವಾಗಿದ್ದು, ಎಲ್ಲಾ ಸಂಘ ಸಂಸ್ಥೆಗಳು ಒಂದೊAದು ಗ್ರಾಮವನ್ನು ದತ್ತು ತೆಗೆದುಕೊಳ್ಳವುದರ ಮೂಲಕ ಕೊಪ್ಪಳ ಜಿಲ್ಲೆಯ ಕ್ಷಯ ಮುಕ್ತ ಅಭಿಯಾನದಲ್ಲಿ ಪಾಲ್ಗೊಳ್ಳಲು  ತಿಳಿಸಿದೆ.

Please follow and like us:
error