ರಾಯರಡ್ಡಿಯವರು ಹೈದ್ರಾಬಾದ್ ನಿಜಾಮನಿದ್ದಂತೆ ಲೂಟಿ ಹೊಡೆಯುವದೇ ಕೆಲಸ

ಯಲಬುರ್ಗಾ:  ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾದ ಹಾಗೂ ಕೇತ್ರದ ಶಾಸಕರಾದ ಬಸವರಾಜ ರಾಯರಡ್ಡಿಯವರು ಹೈದ್ರಾಬಾದ್ ಕಾಲದ ನಿಜಾಮರಿದ್ದಂತೆ ಅಭಿವೃದ್ದಿ ಹೆಸರಿನಲ್ಲಿ ಲೂಟಿ ಹೊಡೆಯುವದೇ ಅವರ ಕೆಲಸ ಎಂದು ಜೆಡಿಎಸ್ ಯುವ ಘಟಕದ ಜಿಲ್ಲಾಧ್ಯಕ್ಷ ಕೆ.ಎಸ್.ಕೊಡತಗೇರಿ ಆರೋಪಿಸಿದರು.

ಅವರು ತಾಲೂಕಿನ ಸಂಕನೂರ ಗ್ರಾಮ ಘಟಕ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಹೈದ್ರಾಬಾದ ನಿಜಾಂ ರು ಈ ಹಿಂದೆ ಬಂದು ಇಲ್ಲಿ ಇದಿದ್ದು ಇಲ್ಲದ್ದು ದೊಚಿಕೊಂಡು ಹೋಗುತಿದ್ದರು ಅದರಂತೆ ಸಚಿವರು ಅಭಿವೃದ್ದಿ ಹೆಸರಿನಲ್ಲಿ ಗುತಿಗೆದ್ದಾರರಿಂದ ಕಳಪೆ ಮಟ್ಟದ ಕಾಮಗಾರಿ ಮಾಡಿ ಲೂಟಿ ಹೊಡೆದು ಜನರ ಕೈಗೆ ಸಿಗದೇ ಬೆಂಗಳೂರಿಗೆ ಹೋಗುತ್ತಾರೆ ಇವರಿಂದ ಇದುವರೆಗೂ ಜನರಿಗೆ ಬೇಕಾದ ಕೆಲಸ ಜನರಿಗೆ ಬೇಕಾಗುವಷ್ಠವಾಗಿಲ್ಲ ಈ ಭಾಗದಲ್ಲಿ ಜಿಂಕೆಗಳ ಹಾವಳಿಯಿಂದ ಬೆಳೆ ನಾಶವಾಗುತಿದ್ದು ಜಿಂಕೆ ವನ ಸ್ಥಾಪಿಸುತ್ತೇನೆ ಎಂದು ಹೇಳುತಿದ್ದಾರೆ ಆದರೆ ಇದು ವರೆಗೂ ಅದಕ್ಕೆ ಪ್ರಾರಂಭಕ್ಕೆ ಯಾವುದೇ ಕೆಲಸ ಮಾಡಿಲ್ಲ ನೀರಾವರಿ ಮಾಡುತ್ತೇನೆ ಸಂಪೂರ್ಣ ತಾಲೂಕ ಎಂದು ಹೇಳುವ ಇವರು ಯಾವ ರೀತಿಯಲ್ಲಿ ಕಾರ್ಯ ನೆಡೆಯುತ್ತಿದೆ ಮುಖ್ಯಮಂತ್ರಿಯವರನ್ನು ಕರೆದು ಉದ್ಘಾಟನೆ ಮಾಡಿದರು ಅದು ಅಲ್ಲಿಗೆ ಮುಕ್ತಾಯವಾಯಿತು ಇವರು ಯಾವ ರೈಲನ್ನು ಕೂಡ ಓಡಿಸುವದಿಲ್ಲ ಇವರು ಭಾಷಣದಲ್ಲಿ ಮಾತ್ರ ಕ್ಷೇತ್ರವನ್ನು ಅಭಿವೃದ್ದಿ ಮಾಡುತ್ತಾರೆ ಆದ್ದರಿಂದ ರೈತ ವಿರೋಧಿ ಬಿಜೆಪಿ ಮತ್ತು ಕಾಂಗ್ರೇಸ್ ಪಕ್ಷಕ್ಕೆ ಈ ಭಾರಿ ಮಣೆಹಾಕಬಾರದು ಕ್ಷೇತ್ರದಲ್ಲಿ ಬಿಜೆಪಿ ಕಾಂಗ್ರೇಸ್ ಪಕ್ಷದವರು ಹೊಂದಾಣಿಕೆ ರಾಜಕಾರಣ ಮಾಡುತ್ತಿದ್ದಾರೆ ಆದ್ದರಿಂದ ಈ ಭಾರಿ ತೃತೀಯ ಶಕ್ತಿಗೆ ಮತವನ್ನು ಹಾಕುವದರ ಮೂಲಕ ಮುಂದಿನ ಮುಖ್ಯಮಂತ್ರಿ ಕುಮಾರಣ್ಣ ಆಗಲು ಈ ಕ್ಷೇತ್ರದ ಜನರು ಆಶಿರ್ವಾದ ಮಾಡಬೇಕು ಎಂದರು.ನಂತರ ಜಿಲ್ಲಾ ಕಾರ್ಯಾಧ್ಯಕ್ಷ ವಿರೇಶ ಮಾಹಂತಯ್ಯನಮಠ ಮಾತನಾಡಿ ಯಲಬುರ್ಗಾ ಕ್ಷೇತ್ರದಿಂದ ಇಂದು ಅಧಿಕಾರ ಅನುಭವಿಸುತ್ತಿರುವವರು ಜನರ ಕೈಗೆ ಸಿಲುಕದ ದುಬಾರಿ ಶಾಸಕರು ಆಗಿದ್ದಾರೆ ಅವರು ಎಲ್ಲವನ್ನು ಜನತಾ ಪರಿವಾರದಿಂದ ಅನುಭವಿಸಿದ್ದಾರೆ ಆದರೆ ಅವರು ಇದು ವರಿಗೂ ಜನರಿಗೆ ಯಾವುದೇ ರೀತಿಯಾದ ಜನಪಯೋಗಿ ಕೆಲಸವನ್ನು ಮಾಡಿಲ್ಲ ಅಂತವರನ್ನು ಈ ಭಾರಿ ಸೋಲಿಸುವದರ ಮೂಲಕ ಬುದ್ದಿ ಕಲಿಸಬೇಕು ಎಂದರು.ಕಾರ್ಯಕ್ರಮದಲ್ಲಿ ಜೆಡಿಎಸ್ ತಾಲೂಕ ಅಧ್ಯಕ್ಷ ಶ್ರೀಪಾಧಪ್ಪ ಅಧಿಕಾರಿ ಮಾತನಾಡಿ ಈ ಕ್ಷೇತ್ರದಲ್ಲಿ ನಾನು ಹಲವಾರು ಏಳುಬಿಳುಗಳನ್ನು ಕಂಡಿದ್ದೇನೆ ಆದರೆ ಎಂದಿಗೂ ಕೂಡ ನಾನು ಕ್ಷೇತ್ರದ ಜನರನ್ನು ಬಿಟ್ಟು ಎಲ್ಲಿ ಹೋಗಿಲ್ಲ ಕ್ಷೇತ್ರದ ಜನರು ಯಾವುದೇ ಕಾರ್ಯಕ್ಕೂ ಕರೆದರು ನಾನು ಪಕ್ಷ ಭೇದವನ್ನು ಮರೆತು ಅವರ ಮದ್ಯೆ ನಿಂತು ಕೆಲಸವನ್ನು ಮಾಡಿದ್ದೇನೆ ಆದ್ದರಿಂದ ಈ ಭಾರಿ ಚುನಾವಣೆಯಲ್ಲಿ ನೀವು ಬಿಜೆಪಿ ಮತ್ತು ಕಾಂಗ್ರೇಸ್ ಪಕ್ಷವನ್ನು ಸೋಲಿಸಿ ಜೆಡಿಎಸ್ ಪಕ್ಷಕ್ಕೆ ಮತಹಾಕಬೇಕು ಎಂದು ಮನವಿ ಮಾಡಿಕೊಂಡರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡು ಮಾತನಾಡಿದ ಜಿಲ್ಲಾಧ್ಯಕ್ಷ ಪ್ರದೀಪಗೌಡ ಮಾಲಿಪಾಟೀಲ ಮಾತನಾಡಿ ಕುಮಾರಸ್ವಾಮಿಯವರು ಮುಂದಿನ ಚುನಾವಣೆಯಲ್ಲಿ ಮುಖ್ಯಮಂತ್ರಿಯಾದರೆ ರೈತರ ಸಂಪೂರ್ಣ ಸಾಲವನ್ನು ಮಾಡುತ್ತೇನೆ ರೈತರ ಕಷ್ಟಗಳಿಗೆ ಸ್ಪಂದಿಸುವದೇ ಜೆಡಿಎಸ್ ನ ಗುರಿ ಎಂದು ಹೇಳಿದ್ದಾರೆ ಆದ್ದರಿಂದ ಯಲಬುರ್ಗಾ ಕ್ಷೇತ್ರದ ಜನರು ಜೆಡಿಎಸ್ ಗೆ ಮತಹಾಕುವದರ ಮುಖಾಂತರ ಗೆಲ್ಲಿಸಬೇಕು ಈ ಹಿಂದೆ ಕುಮಾರಸ್ವಾಮಿಯವರ ಇಪ್ಪತ್ತು ತಿಂಗಳ ಆಡಳಿತವನ್ನು ನೋಡಿದ್ದಿರಿ ಅವರಿಗೆ ಇರುವ ಜನ ಪರ ಕಾಳಜಿ ಬೇರೆಯಾವುದೇ ರಾಜಕೀಯ ನಾಯಕರಿಗೆ ಇಲ್ಲ ಆದ್ದರಿಂದ ರಾಷ್ಟ್ರೀಯ ಪಕ್ಷಗಳಿಗೆ ಮತಹಾಕದೇ ರಾಜ್ಯದ ಹಿತ ಕಾಪಡುವ ಪ್ರಾದೇಶಿಕ ಪಕ್ಷ ಜೆಡಿಎಸ್ ಪಕ್ಷಕ್ಕೆ ಮತವನ್ನು ನೀಡಿ ಎಂದರು.ಕಾರ್ಯಕ್ರಮದ ನಿರೂಪಣೆಯನ್ನು ಶರಣಪ್ಪನವರು ನೇರವರಿಸಿಕೊಟ್ಟರು, ಪ್ರಾಸ್ತವಿಕವಾಗಿ ಹನಮಂತಪ್ಪ ದೊಡ್ಡಮನಿಯವರು ಮಾತನಾಡಿದರು.ಕಾರ್ಯಕ್ರಮದಲ್ಲಿ ಸಂಕನೂರ ಗ್ರಾಮದ ಯುವಕರು ಪಕ್ಷಕ್ಕೆ ಸೇರ್ಪಡೆಗೊಂಡರು ಶಿದ್ದಲಿಂಗಯ್ಯ ಹೀರೆಮಠ, ಮುತ್ತಣ ತೊಂಡಿಹಾಳ,ಶರಣಪ್ಪ ಹಡಪದ , ಮಾಬುಸಾಬ ಇಟಗಿ, ಸುರೇಶ ಕಟ್ಟಿಮನಿ, ಶೇಖಪ್ಪ ಹೊಸಮನಿ, ಹನಮಂತಪ್ಪ ದೊಡ್ಡಮನಿ, ಮುಖಪ್ಪ ದೊಡ್ಡಮನಿ, ಸುರೇಶ ಜೊತೆಣ್ಣನವರ, ಅಂದಪ್ಪ ಚೌಡಾಪೂರ, ಖಾದಿರಸಾಬ ಇಟಗಿ, ಬಸವರಾಜ ಮಾಲಿಪಾಟೀಲ, ಬಸವರಾಜ ಓಲಿ, ಅಬ್ದುಲ್‌ಸಾಬ ಅಮಾರವತಿ, ಎಸ್.ಬಿ..ಅರಳಿ, ತಾಯಪ್ಪ ಕಟ್ಟಿಮಿನಿ, ಶಮದಸಾಬ ಇಟಗಿ, ರಾಜೇಸಾಬ, ದಾವಲಸಾಬ ಕಡೊಲಿ, ಅಲ್ಲಾಸಾಬ ನಾಲಗಾರ, ಶರಣಯ್ಯ ಹೀರೆಮಠ, ಡಾ: ಅನ್ನಪ್ಪ ತೊಡಿಹಾಳ ಅವರು ಸೇರ್ಪಡೆಗೊಂಡರು.

Please follow and like us:
error