ರಾಜ್ಯ ಮಟ್ಟದ ಇನ್ವಿಟೆಷನಲ್ ಕರಾಟೆ ಚಾಂಪಿಯನ್ ಶಿಪ್‌ನಲ್ಲಿ ಕೊಪ್ಪಳದ ಎಸ್.ಸಿ.ಆರ್ ಕರಾಟೆ ಸಂಸ್ಥೆಯ ಪ್ರಥಮ.


ಕೊಪ್ಪಳ ೨೧: ಇತ್ತಿಚೆಗೆ ಜನೆವರಿ ೧೯,೨೦ ರಂದು ಗದಗ ಜಿಲ್ಲಾ ರೋಣದಲ್ಲಿ ನಡೆದ ಪ್ರಥಮ ರಾಜ್ಯ ಮಟ್ಟದ ಇನ್ವಿಟೆಷನಲ್ ಕರಾಟೆ ಚಾಂಪಿಯನ್ ಶಿಪ್‌ನಲ್ಲಿ ಕೊಪ್ಪಳದ ಎಸ್.ಸಿ.ಆರ್ ಕರಾಟೆ ಸಂಸ್ಥೆಯ ಗಿರೀಶ್ ಎಮ್.ಕೋಳೂರ ಕಥಾ ವಿಭಾಗದಲ್ಲಿ ಪ್ರಥಮ, ಚಂದ್ರಹಾಸ್ ಚಿನ್ನೂರು ದ್ವೀತಿಯ, ಕಿರ್ತನ್ ಎಮ್. ಕೋಳೂರು, ಗಣೇಶ ಹೂಗಾರ್, ಪ್ರಜ್ವಲ್ ಎಮ್. ಕೋಳೂರು, ಕಿರಣ್ ಎಮ್. ಕೆ ತೃತೀಯ ಸ್ಥಾನ ಗಳಿಸಿ ಸಂಸ್ಥೆಗೆ ಕೀರ್ತಿ ತಂದಿರುತ್ತಾರೆ. ಈ ಎಲ್ಲಾ ವಿದ್ಯಾರ್ಥಿಗಳಿಗೆ ಸಂಸ್ಥೆಯ ಮುಖ್ಯಸ್ಥರಾದ ಸೈಯದ್ ಪಾಷಾ ಹೂಗಾರ್ ರವರು ಅಭಿನಂದಿಸಿದ್ದಾರೆ.