ರಾಜ್ಯಮಟ್ಟದ ಆದಿಬಣಜಿಗ ಸಮಾಜದ ಯುವ ನಾಯಕತ್ವ ತರಬೇತಿ ಶಿಬಿರ ಸಮ್ಮೇಳನ-ವೈಜನಾಥ ದಿವಟರ

ಕೊಪ್ಪಳ: ೨೨, ಇದೇ ದಿನಾಂಕ: ೨೪ ಮತ್ತು ೨೫ ರಂದು ಕೂಡಲಸಂಗಮದಲ್ಲಿ ರಾಜ್ಯಮಟ್ಟದ ೨ನೇ ಆದಿಬಣಜಿಗ ಸಮಾಜದ ಯುವ ನಾಯಕತ್ವ ತರಬೇತಿ ಶಿಬಿರವನ್ನು ಸಮ್ಮೇಳನವನ್ನು ಆಯೋಜಿಸಲಾಗಿದೆ ಎಂದು ಕೊಪ್ಪಳ ಜಿಲ್ಲಾ ಆದಿಬಣಜಿಗ ಸಮಾಜದ ಜಿಲ್ಲಾಧ್ಯಕ್ಷ ವೈಜನಾಥ ದಿವಟರ ತಿಳಿಸಿದರು.

ಅವರು ಇಂದು ಸಮಾಜದ ಕಾರ್ಯಾಲಯದಲ್ಲಿ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ ೨೪, ೨೫ ರಂದು ಕೂಡಲಸಂಗಮದಲ್ಲಿ ರಾಜ್ಯ ಯುವ ವೇದಿಕೆಗಳ ೨ನೇ ಸಮ್ಮೇಳನವನ್ನು ಏರ್ಪಡಿಸಲಾಗಿದ್ದು, ಯುವ ನಾಯಕತ್ವ ತರಭೇತಿ ಶಿಬಿರ ಎಂದು ಯುವ ನಾಯಕತ್ವ ಬಗ್ಗೆ ರಾಜ್ಯದ ವಿವಿಧ ಜಿಲ್ಲೆಗಳ ಸಮಾಜದ ಹಿರಿಯರ ಅನುಭವಿಗಳಿಂದ ಸಮಾಜದ ಅಭಿವೃದ್ದಿ, ಸಂಘಟನೆ ಶಕ್ತಿ ಮತ್ತು ಶೈಕ್ಷಣಿಕ ಕುರಿತು ಉಪನ್ಯಾಸ ನೀಡುವುದರ ಮುಖಾಂತರ ಕಾರ್ಯಕ್ರಮ ಉದ್ಘಾಟನೆಗೊಳ್ಳಲಿದ್ದು, ಹಾಗೆಯೇ ದಿ:೨೪ ರಂದು ಸಾಯಾಂಕಾಲ ಯುವ ವೇದಿಕೆ ಘಟಕಗಳ ಯುವಕರಿಂದ ಕಲಾ ಪ್ರದರ್ಶನ ಅಂಗವಾಗಿ ಮನರಂಜನಾ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗುವುವು ಮತ್ತು ೨೫ ನೇ ರವಿವಾರದಂದು ಬೆಳಗ್ಗೆ ಯೋಗ ದ್ಯಾನದ ಮುಖಾಂತರ ಕಾರ್ಯಕ್ರಮ ಪ್ರಾರಂಭಗೊಂಡು ಸಮಾಜದ ಚಿಂತನ-ಮಂಥನವೆಂಬ ಸಮಾಜದ ಹಿರಿಯರ ಸಮ್ಮುಖದಲ್ಲಿ ವಿವಿಧ ವಿಷಯಗಳ ಬಗ್ಗೆ ಉಪನ್ಯಾಸ ಕಾರ್ಯಕ್ರಮಗಳು ನೀಡುವುದರೊಂದಿಗೆ ಸಮಾರೂಪ ಸಮಾರಂಭ ಜರುಗುಲಿದ್ದು, ರಾಜ್ಯ ಮಟ್ಟದ ೨ನೇ ಪೂರ್ವಭಾವಿ ಸಭೆ ಮುಕ್ತಾಯಗೊಳ್ಳಲಿದ್ದು ಈ ಕಾರ್ಯಕ್ರಮಕ್ಕೆ ಜಿಲ್ಲೆಯ ಸಮಾಜದ ಭಾಂದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಮ್ಮೇಳನ ಯಶಸ್ವಿಗೆ ಸಹಕರಿಸಬೇಕೆಂದು ಮನವಿ ಮಾಡಿಕೊಂಡಿದ್ದಾರೆ.

ಇಂದು ನಡೆದ ಪೂರ್ವಭಾವಿ ಸಭೆಯಲ್ಲಿ ಕರ್ನಾಟಕ ಯುವ ವೇದಿಕೆ ಸಂಘಟಕರಾದ ಸಾಹೇಬಗೌಡ ಕೊಪ್ಪಳ, ಜಿಲ್ಲಾ ಕಾರ್ಯದರ್ಶಿ ಪರಮಾನಂದ ಯಾಳಗಿ, ಸಮಾಜದ ತಾಲೂಕು ಅಧ್ಯಕ್ಷ ರಮೇಶ ಉಮಚಗಿ, ಯುವ ವೇದಿಕೆ ಅದ್ಯಕ್ಷ ಚಂದ್ರು ದಿವಟರ, ಪದಾಧಿಕಾರಿಗಳಾದ ಮಹಾಂತೇಶ, ಆರ್.ಎಚ್.ಪೂಜಾರ, ರವಿ ದಿವಟರ, ನಾಗರಾಜ ದಿವಟರ್, ನಟರಾಜ ದಿವಟರ ಸೇರಿದಂತೆ ಇನ್ನಿತರು ಉಪಸ್ಥಿತರಿದ್ದರು.

Please follow and like us:
error