ರವಿವಾರದ ಮದುವೆ ಕಾರ್ಯಕ್ರಮಗಳಿಗೆ ನೀಡಿದ್ದ ಪರವಾನಿಗೆ ರದ್ದು ಪಡಿಸಿದ ಜಿಲ್ಲಾಧಿಕಾರಿ

ಕರ್ನಾಟಕ ಸರ್ಕಾರದ ಆದೇಶ ಸಂ:ಕಂಇ 158 ಟೆಎನ್‌ಆರ್‌ 2020 ದಿನಾ೦ಕ:18.05,2020ರ ಮೂಲಕ ಕೋವಿಡ್‌-19 ಸಾಂಕ್ರಾಮಿಕ ರೋಗವು ಹರಡದಂತೆ ತಡೆಗಟ್ಟುವ ಸಲುವಾಗಿ ರಾಜ್ಯಾದ್ಯಂತ ಲಾಕ್‌ಡೌನ್‌ನ್ನು ದಿನಾಂಕ:3105.2020ರವರೆಗೆ ವಿಸ್ತರಿಸಿ ಆದೇಶಿಸಲಾಗಿರುತ್ತದೆ. ಅದರನ್ವಯ ಸದರಿ
ಅವಧಿಯಲ್ಲಿ ರಾತ್ರಿ 07.00 ಗಂಟೆಯಿಂದ ಬೆಳಿಗ್ಗೆ’07.00 ಗಂಟೆಯವರೆಗೆ ಎಲ್ಲಾ ಚಟುವಟಿಕೆಗಳ ವ್ಯಕ್ತಿಗಳ ಸಂಚಾರವನ್ನು ನಿಷೇಧಿಸಲಾಗಿರುತ್ತದೆ. ಇದರೊಂದಿಗೆ ಲಾಕ್‌ಡೌನ್‌ ಅವಧಿಯಲ್ಲಿ ಬರುವ ದಿನಾಂಕ:24.05.2020 ಮತ್ತು 3105.2020ರ ಭಾನುವಾರಗಳಂದು ಸಂಪೂರ್ಣ ದಿನದ ಲಾಕ್‌ಡೌನ್‌
ಜಾರಿಗೊಳಿಸಿದ್ದು, ಸಂಪೂರ್ಣ ದಿನ ಎಲ್ಲಾ ಅವಶ್ಯಕವಲ್ಲದ ಚಟುವಟಿಕೆಗಳ ವ್ಯಕ್ತಿಗಳ ಸಂಚಾರವನ್ನು ನಿಷೇಧಿಸಲಾಗಿರುತ್ತದೆ.
ಆದ್ದರಿಂದ, ಭಾನುವಾರಗಳಂದು ಪೂರ್ಣ ದಿನ ಲಾಕ್‌ಡೌನ್‌ ಜಾರಿಯಲ್ಲಿರುವುದರಿಂದ ದ ಮತ್ತು ಸಿ.ಆರ್‌.ಪಿ.ಸಿ ಕಲಂ 144ರಡಿಯಲ್ಲಿ ನಿಷೇಧಾಜ್ಞೆಯನ್ನು ಜಾರಿಯಲ್ಲಿರುವುದರಿಂದ, ಈ ಕಾರ್ಯಾಲಯದಿಂದ ದಿನಾಂಕ:24.95.2020 ಮತ್ತು 31952029ರಂದು ಮದುವೆ ಕಾರ್ಯಕ್ರಮಗಳಿಗಾಗಿ ನೀಡಲಾಗಿರುವ ಎಲಾ ಪರವಾನಗಿಗಳನ್ನು ರದ್ದುಪಡಿಸಲಾಗಿದೆ.
ಸದರಿ ದಿನಗಳಂದು ಯಾವುದೇ ಮದುವೆ ಕಾರ್ಯಕ್ರಮಗಳನ್ನು ಆಯೋಜಿಸಿದಲ್ಲಿ ಮತ್ತು ಲಾಕ್‌ಡೌನ್‌ ನಿಯಮಾವಳಿಗಳನ್ನು ಉಲ್ಲಂಘಿಸಿದಲ್ಲಿ ಅಂತಹವರ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆ 2005ರ ಸೆಕ್ಷೆನ್‌ 188ರ ಅಡಿಯಲ್ಲಿನ ಕಾನೂನು ಶ್ರಮ ಮತ್ತು ಅನ್ವಯವಾಗಬಹುದಾದ ಇತರೆ ಕಾನೂನು
ಉಪಬಂಧಗಳ ಮೇರೆಗೆ ಶಿಸ್ತು ಕ್ರಮ ಜರುಗಿಸಲಾಗುವುದು.

ರವಿವಾರ ಸಂಪೂರ್ಣ ಲಾಕ್ ಡೌನ್ ಇರುವುದರಿಂದ ಜಿಲ್ಲಾಡಳಿತದಿಂದ ಮದುವೆ ಕಾರ್ಯಕ್ರಮಗಳಿಗೆ ನೀಡಿದ್ದ ಪರವಾನಿಗೆ ರದ್ದು ಪಡಿಸಿದ ಜಿಲ್ಲಾಧಿಕಾರಿ. ಆದೇಶ ಉಲ್ಲಂಘಿಸಿದಲ್ಲಿ ಕಾನೂನು ಕ್ರಮದ ಎಚ್ಚರಿಕೆಯನ್ನು ಜಿಲ್ಲಾಧಿಕಾರಿಗಳು ನೀಡಿದ್ದಾರೆ.

Please follow and like us:
error