ರಕ್ತದಾನ ಮತ್ತು ಆರೋಗ್ಯ ಸೇವೆ ಬೆಲೆ ಕಟ್ಟಲಾಗದ್ದು ಃ ಶಂಕರ್‌ಗೌಡ

ಕೊಪ್ಪಳ: ಮನುಕುಲದ ಕಲ್ಯಾಣಕ್ಕಾಗಿ ರಕ್ತದಾನ ಮತ್ತು ಆರೋಗ್ಯ ಸೇವೆ ಬೆಲೆಕಟ್ಟಲಾಗದ ಸೇವೆಗಳು ಎಂದು ತಾಲೂಕು ಪಂಚಾಯಿತಿ ಸದಸ್ಯ ಶಂಕರಗೌಡ ಟಿ. ಕೆ.ಅವರು ಹೇಳಿದ್ದಾರೆ.ತಾಲೂಕಿನ ಬೇವೂರು ಗ್ರಾಮದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜೆಸಿಐ ಹಾಗೂ (ನ್ಯಾಷನಲ್ ಇಂಟಿಗ್ರೇಟೆಡ್ ಮೆಡಿಕಲ್ ಅಸೋಷಿಯೇಶನ್) ನಿಮಾ ಸಂಸ್ಥೆ ಜಂಟಿಯಾಗಿ ಹಮ್ಮಿಕೊಂಡಿದ್ದ ರಕ್ತದಾನ ಮತ್ತು ನೇತ್ರ ತಪಾಸಣಾ ಶಿಬಿರದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.ಗ್ರಾಮೀಣ ಪ್ರದೇಶದಲ್ಲಿ ಇಂಥ ಸೇವೆಗಳು ನಡೆಯುತ್ತಿರುವುದು ಶ್ಲಾಘನೀಯವಾಗಿದೆ.ಇದನ್ನು ಅರ್ಥಪೂರ್ಣವಾಗಿ ಮಾಡಿ ಸ್ಥಳೀಯ ಆಡಳಿತ ಮತ್ತು ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯು ಮುನ್ನಡೆಸುತ್ತಿರುವುದು ನಿಜಕ್ಕೂ ಶ್ಲಾಘನಿಯ.ವೈದ್ಯರು ಸೇರಿದಂತೆ ಅನೇಕರು ಈ ಶಿಬರದಲ್ಲಿ ಶ್ರಮಿಸಿದ್ದಾರೆ. ಅವರಿಗೆ ಇದರ ಅಗತ್ಯತತೆ ಇಲ್ಲದೆ ಇದ್ದರೂ ಅವರುಶ್ರಮವಹಿಸಿ, ನಾವು ಸಮಾಜಕ್ಕೆ ಏನಾದರೂ ಮಾಡಬೇಕು ಎಂದು ತಮ್ಮನ್ನು ತಾವು ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಅವರ ಸೇವೆಯೂ ಅಗಣನೀಯ ಎಂದರು.ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಜಿಲ್ಲಾಧ್ಯಕ್ಷ ಸೋಮರಡ್ಡಿ ಅಳವಂಡಿ ರಕ್ತದಾನ ಶಿಬಿರ ಮತ್ತುನೇತ್ರ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿ, ಸೇವೆಯನ್ನು ಬದುಕಿನಲ್ಲಿ ಪ್ರತಿಯೊಬ್ಬರು ಅಳವಡಿಸಿಕೊಳ್ಳಬೇಕು.ಮನುಷ್ಯ ಪ್ರಾಣಿಯಂತೆ ಬದುಕುವುದಕ್ಕಿಂತ ಮನುಕುಲದ ಏಳ್ಗೆಗಾಗಿ ಆತನು ಶ್ರಮಿಸಬೇಕು ಎಂದರಲ್ಲದೇ, ಕೊಪ್ಪಳದಲ್ಲಿ ರೆಡ್ ಕ್ರಾಸ್ ಸಂಸ್ಥೆ ಪ್ರಾರಂಭಿಸಿದ ಮೇಲೆ ಈ ವರೆಗೂ ಅನೇಕ ಸಾಧನೆಯ ಮೈಲುಗಲ್ಲಾಗಿವೆ. ಅದರಲ್ಲೂ ಅನೇಕರ ಜೀವ ಉಳಿಯುವುದಕ್ಕೆ ಸಹಾಯವಾಗಿದೆ. ವೈದ್ಯಕೀಯ ಕ್ಷೇತ್ರದ ಪ್ರಗತಿಗೆ ನಾಂದಿಯಾಗಿದೆ. ಕೊಪ್ಪಳದಲ್ಲಿ ಎದೆಹಾಲು ಬ್ಯಾಂಕ್ ಮಾಡುವ ದಿಸೆಯಲ್ಲಿ ಪ್ರಯತ್ನ ನಡೆದಿದ್ದು, ಶೀಘ್ರದಲ್ಲಿಯೇ ಅದನ್ನು ಅನುಷ್ಠಾನ ಮಾಡುವ ಪ್ರಯತ್ನ ನಡೆದಿದೆ ಎಂದರು.ಕಾರ್ಯಕ್ರಮದಲ್ಲಿ ಗ್ರಾಪಂ ಅಧ್ಯಕ್ಷ ಸೋಮಲಿಂಗಪ್ಪ ಕೋಳಜಿ, ಉಪಾಧ್ಯಕ್ಷೆ ಅನ್ನಪೂರ್ಣ ಗಡಾದ್, ಯಲಬುರ್ಗಾ ತಾಲೂಕುವೈದ್ಯಾಧಿಕಾರಿ ಮಂಜುನಾಥ ಬ್ಯಾಳಹುಣಸಿ, ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಸುನಿಲ್ ಚಿತ್ರಗಾರ, ನಿಮಾ ಸಂಸ್ಥೆಯ ರಾಜ್ಯ ಕಾರ್ಯದರ್ಶಿ ಸಿ.ಎಸ್.ಕರಮುಡಿ, ನಿಮಾ ಜಿಲ್ಲಾಧ್ಯಕ್ಷ ಮಂಜುನಾಥ ಅಕ್ಕಿ, ಜೆಸಿಐ ಅಧ್ಯಕ್ಷ ಕೀರ್ತಿ ಪಾಟೀಲ್, ನಿಮಾ ತಾಲೂಕಾಧ್ಯಕ್ಷ ಡಾ. ಮಲ್ಲಪ್ಪ ಪಲೋಟಿ, ಪಿಡಿಓ ಹನುಮಂತ ನಾಯಕ್, ಡಾ. ಬಿ.ಎಲ್.ಕಲ್ಮಠ, ಡಾ. ಶಿವನಗೌಡ ದಾನರಡ್ಡಿ, ಡಾ. ಸುಧಾಕರ, ಡಾ. ವಿಜಯಕುಮಾರ ದಾನಿ, ಡಾ. ರುದ್ರಾಕ್ಷಿ ದೇವರಗುಡಿ, ಡಾ. ಕಸ್ತೂರಿ ಕರಮುಡಿ, ಭಾರತಿ ಗುಡ್ಲಾನೂರು ಸೇರಿ ಇತರರು ಉಪಸ್ಥಿತರಿದ್ದರು.ಡಾ. ಮಂಜುನಾಥ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಡಾ. ಶಿವನಗೌಡ ಅವರು ಪ್ರಸ್ತಾವಿಕ ಮಾತನಾಡಿದರು.

Please follow and like us:
error