ಯುವ ಜನತೆ ಮನಸ್ಸಿನಲ್ಲಿ ಒಳ್ಳೆಯ ವಿಚಾರಗಳನ್ನೇ ಆರಿಸಿ ತುಂಬಿಕೊಳ್ಳುವ ಅಗತ್ಯ ಇದೆ-ಡಾ. ಗುರುರಾಜ ಕರ್ಜಗಿ

ಕೊಪ್ಪಳ: ಇಂದು ಯುವ ಜನತೆ ಮನಸ್ಸಿನಲ್ಲಿ ಒಳ್ಳೆಯ ವಿಚಾರಗಳನ್ನೇ ಆರಿಸಿ ತುಂಬಿಕೊಳ್ಳುವ ಅಗತ್ಯ ಇದೆ ಎಂದು ಖ್ಯಾತ ಶಿಕ್ಷಣ ತಜ್ಞ ಡಾ. ಗುರುರಾಜ ಕರ್ಜಗಿ ಆಭಿಪ್ರಾಯ ವ್ಯಕ್ತಪಡಿಸಿದರು. ಶ್ರೀ ಗವಿಸಿದ್ಧೇಶ್ವರ ಪದವಿ ಹಾಗೂ ಪದವಿ ಪೂರ್ವ ಮಹಾವಿದ್ಯಾಲಯ ಜಂಟಿಯಾಗಿ ಆಯೋಜಿಸಿದ ವ್ಯಕ್ತಿತ್ವ ವಿಕಾಸನದ ಜೀವನ ದರ್ಶನ ಕಾರ್ಯಕ್ರಮದಲ್ಲಿ ಮನೆ ಮಗುವಿನ ಮನ ಅರಳಿಸಲಿ ಎಂಬ ಶಿರ್ಷಿಕೆಯ ಅಡಿ ವಿದ್ಯಾರ್ಥಿಗಳನ್ನು ಕುರಿತು ಮಾತನಾಡಿದರು.
ಜೀವನ ಒಂದು ಸುಂದರವಾದ ಹೂತೋಟವಿದ್ದಂತೆ. ಇಲ್ಲಿ ಬಣ್ಣ ಬಣ್ಣದ ಹೂವುಗಳನ್ನು ನಾವೇ ಬೆಳೆಸಿಕೊಳ್ಳಬೇಕು. ಒಳ್ಳೆಯದನ್ನೇ ಆರಿಸಿಕೊಂಡರೇ ಹೂಬುಟ್ಟಿಯಾಗುತ್ತದೆ. ಕೆಟ್ಟದ್ದನ್ನು ಆರಿಸಿ ತುಂಬಿದರೆ ಕಸದ ಬುಟ್ಟಿಯಾಗುತ್ತದೆ. ಒಳ್ಳೆಯದನ್ನು ಮಾತ್ರ ಸ್ವೀಕರಿಸುವ ಅರಿವು ಯುವ ಜನತೆಗೆ ಇರಬೇಕು. ಮೈಕಲ್ ಎಂಜಿಲೋ ಎಂಬ ಶಿಲ್ಪ ಕಲಾವಿದ ಮೊದಲ ಬಾರಿಗೆ ಪ್ರಕೃತಿಯ ಕಲ್ಲನ್ನು ಬಳಸಿಕೊಂಡು ಮೂರ್ತಿಯನ್ನಾಗಿಸಿದ. ಅಲ್ಲಿಯವರೆಗೂ ಕಲ್ಲಿನೊಳಗಣ ಶಿಲ್ಪ ಕಲೆಯ ಅರಿವು ಇರಲಿಲ್ಲ. ಈ ರೀತಿ ಪ್ರಕೃತಿಂiiನ್ನು ಬಳಸಿಕೊಂಡಾಗ ಮಾತ್ರ ಸಂಸ್ಕೃತಿ ಅರಿವು ಉಂಟಾಗುತ್ತದೆ. ಬಳಸದೇ ಇದ್ದಾಗ ವಿಕೃತಿ ಉಂಟಾಗುತ್ತದೆ.
ಮುಂದುವರೆದು ಮಕ್ಕಳು ಯಾವುದನ್ನು ಬಯಸುತ್ತಾರೆಯೋ ಅದಕ್ಕೆ ಪಾಲಕರು ಪೂರಕ ವಾತಾವರಣ ಒದಗಿಸಬೇಕು. ಈ ಮೊದಲು ದೊಡ್ಡ ಕುಟುಂಬ ನಮ್ಮದಾಗಿತ್ತು. ಒಬ್ಬರನ್ನು ನೋಡಿ ಮತ್ತೊಬ್ಬರು ಕಲಿಯುವ ಅವಕಾಶಗಳಿದ್ದವು. ಈಗ ಅವೆಲ್ಲಾ ಇಲ್ಲದಾಗಿದೆ. ಮಕ್ಕಳಿಗೆ ಪಾಲಕರೇ ದಾರಿ ದೀಪವಾಗಬೇಕು. ಪ್ರತಿಯೊಬ್ಬರು ಮೊದಲು ತಾಯಿ ತಂದೆಗಳಿಗೆ ಗೌರವಿಸುವದನ್ನು ಕಲಿಯಬೇಕು. ದೇವರ ಮೇಲಿನ ನಂಬಿಕೆ ಬರುವಂತಹ ಪುಸ್ತಕಗಳ ಬಳಕೆ, ಶ್ರದ್ಧೆ, ಪೌಷ್ಟಿಕತೆ ಹಾಗೂ ದೇಶ ಪ್ರೇಮದದ ಬಗ್ಗೆ ಅರಿವನ್ನು ಪಾಲಕರು ಮೂಡಿಸಬೇಕೆಂದು ಮಾತನಾಡಿದರು.
ಎಸ್.ಜಿ ಟ್ರಸ್ಟ ಕಾರ್ಯದರ್ಶಿ ಎಸ್ ಮಲ್ಲಿಕಾರ್ಜುನ, ಪದವಿ ಪ್ರಾಚಾರ್ಯ ಎಂ.ಎಸ್ ದಾದ್ಮಿ, ಪದವಿ ಪೂರ್ವ ಪ್ರಾಚಾರ್ಯ ಡಾ.ಸಿದ್ದಲಿಂಗಪ್ಪ ಕೊಟ್ನೆಕಲ್, ಶೈಕ್ಷಣಿಕ ನಿದೇಶಕ ಶಿವಾನಂದ ಮಠದ, ಗ್ರಂಥಪಾಲಕಿ ನೀತೂ ಜೈನ್ ಇದ್ದರು. ಕಾರ್ಯಕ್ರಮದ ನಿರೂಪಣೆಯನ್ನು ಶರಣಬಸಪ್ಪ ಬಿಳಿಎಲೆ ನೆರವೇರಿಸಿದರು. ಎಲ್ಲ ಸಿಬ್ಬಂದಿ , ಅಪಾರ ವಿದ್ಯಾರ್ಥಿಗಳು ಭಾಗವಹಿಸಿದ್ದರು.