ಯುವತಿ ಕಾಣೆ : ಪತ್ತೆಗೆ ಮನವಿ

ಕೊಪ್ಪಳ, ಜೂ : ಕೊಪ್ಪಳ ತಾಲ್ಲೂಕಿನ ಲಾಚನಕೇರಿ ನಿವಾಸಿ ಅಂಜನವ್ವ ತಂ ರಂಗಪ್ಪ ಹಾದಿಮನಿ (18 ವರ್ಷ) ಎಂಬ ಯುವತಿ ಜೂ.08 ರಂದು ಮಧ್ಯಾಹ್ನ ಬೇವಿನಹಳ್ಳಿ ಗ್ರಾಮದಿಂದ ತಮ್ಮ ಸ್ವಂತ ಊರು ಲಾಚನಕೇರಿಗೆ ಹೋಗುತ್ತೇನೆ ಎಂದು ಹೋದವಳು ಕಾಣೆಯಾಗಿದ್ದು, ಈ ಕುರಿತು ಮುನಿರಾಬಾದ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾಣೆಯಾದ ಯುವತಿಯ ಚಹರೆ: ಯುವತಿಯು 5 ಅಡಿ 4 ಇಂಚು ಎತ್ತರ, ಕೋಲು ಮುಖ, ಸಾದಗೆಂಪು ಮೈಬಣ್ಣ, ಸಾಧಾರಣ ಮೈಕಟ್ಟು ಹೊಂದಿದ್ದು, ಕಾಣೆಯಾದಾಗ ಕೆಂಪು ಬಣ್ಣದ ಟಾಪ್ ಮತ್ತು ಪ್ಯಾಂಟ್ ಕನ್ನಡಕವನ್ನು ಧರಿಸಿರುತ್ತಾಳೆ. ಕನ್ನಡ ಭಾಷೆ ಮಾತನಾಡುತ್ತಾಳೆ.
ಯುವತಿಯ ಬಗ್ಗೆ ಮಾಹಿತಿ ಸಿಕ್ಕಲ್ಲಿ ಅಥವಾ ಪತ್ತೆಯಾದಲ್ಲಿ ಮುನಿರಾಬಾದ ಪೋಲಿಸ್ ಠಾಣೆ ಪಿ.ಎಸ್.ಐ ದೂ. ಸಂ. 08539-270333, ಮೊ.ಸಂ. 9480803748, ಕೊಪ್ಪಳ ಗ್ರಾಮೀಣ ವೃತ್ತ ಸಿ.ಪಿ.ಐ ರೂರಲ್- ದೂ.ಸಂ.08539-222433, ಮೊ.ಸಂ.9480803731, ಕೊಪ್ಪಳ ಡಿ.ವೈ.ಎಸ್.ಪಿ ದೂ.ಸಂ. 08539-230342, ಮೊ.ಸಂ.9480803720 ಹಾಗೂ ಜಿಲ್ಲಾ ಕಂಟ್ರೋಲ್ ರೂಂ-08539-230222-100 ಸಂಪರ್ಕಿಸಿ ಮಾಹಿತಿ ನೀಡುವಂತೆ ಪ್ರಕಟಣೆ ಕೋರಿದೆ.

Please follow and like us:
error