ಯುವಜನತೆಯಲ್ಲಿ ಹೊಸದನ್ನು ಸಾಧಿಸುವ ಅಗಾಧ ಸಾಮರ್ಥ್ಯವಿದೆ – ಸೋಮರಡ್ಡಿ

ಕೊಪ್ಪಳ  ಜ.10: ಯುವಜನತೆಗೆ ಸರಿದಾರಿಯಲ್ಲಿ ಸಾಗುವ ಶಕ್ತಿಯಿದೆ.ಹೊಸದನ್ನು ಸಂಶೋಧಿಸಿ,ಸಾಧಿಸುವ ಅಪರಿಮಿತವಾದ ಸಾಮರ್ಥ್ಯ ನಮ್ಮ ಯುವ ಜನಾಂಗಕ್ಕಿದೆ ,ಅವರನ್ನು ಸಕಾರಾತ್ಮಕ ನಿಟ್ಟಿನಲ್ಲಿ ಕೊಂಡೊಯ್ಯುವ ಹೊಣೆ ಒಟ್ಟಾರೆ ಸಮಾಜದ ಮೇಲಿದೆ ಎಂದು ಪತ್ರಕರ್ತ ಸೋಮರಡ್ಡಿ ಅಳವಂಡಿ ಹೇಳಿದರು.

ಆನೆಗೊಂದಿ ಉತ್ಸವದ ಶ್ರೀವಿದ್ಯಾರಣ್ಯ ವೇದಿಕೆಯಲ್ಲಿ ಇಂದು ನಡೆದ ಯುವಗೋಷ್ಟಿಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.

ಶ್ರೇಷ್ಠತೆ ಮತ್ತು ಪಕ್ವತೆಗಳನ್ನು ಸುಲಭವಾಗಿ ಮುಟ್ಟಿಸುವ ಶಕ್ತಿ ಆಧುನಿಕ ಮಾಧ್ಯಮಗಳಿಗೆ ಇದೆ.ಅವುಗಳ ಸರಿಯಾದ ಬಳಕೆಯಾಗಬೇಕು.ದೂರದ ಇರಾನ್,ಇರಾಕ್,ಅಮೇರಿಕದಲ್ಲಿ ಉಂಟಾಗಿರುವ ರಾಜಕೀಯ ಬೆಳವಣಿಗೆಗಳ ಆಧಾರದಲ್ಲಿ ವಿಭಿನ್ನ ಬಗೆಯ ಆತಂಕಗಳನ್ನು ಹರಡುವ ಪ್ರಯತ್ನಗಳು ಸರಿಯಲ್ಲ. ಗಾಂಧೀ,ಅಂಬೇಡ್ಕರ್ ಅವರ ಮರು ಓದು ,ಆದರ್ಶಗಳ ಅಳವಡಿಕೆಗೆ ನಾವೆಲ್ಲ ಆದ್ಯತೆ ನೀಡಬೇಕು ಎಂದರು.

Please follow and like us:
error