ಯುವಕರು ಕ್ರೀಡಾ ಸ್ಪೂರ್ತಿ ಮೈಗೂಡಿಸಿಕೊಳ್ಳಿ- ಸಾಧಿಕ್ ಅತ್ತಾರ್

ಕ್ರೀಡೆ ಜಾತಿ, ಧರ್ಮ ಮೀರಿದ ಅನುಬಂಧ
– ಶ್ರೀ ಶಾಂಭವಿ ಟ್ರೋಫಿ ಉದ್ಘಾಟನಾ ಕಾರ್ಯಕ್ರಮ
ಕೊಪ್ಪಳ : ಕ್ರೀಡಾ ಮನೋಭಾವನೆಯೊಂದಿಗೆ ಕ್ರೀಡೆಯಲ್ಲಿ ಪಾಲ್ಗೊಂಡವರು ಮಾತ್ರ ಗೆಲುವಿನೊಂದಿಗೆ ಪ್ರತಿಸ್ಪರ್ಧಿಯ ಮನ ಗೆಲ್ಲಲು ಸಾಧ್ಯವಾಗಲಿದೆ ಎಂದು ಉಡಾನ್ ಡೆವಲಪರ್‍ಸ್ ಮತ್ತು ಕನ್ಸಟ್ರಕ್ಷನ್ ಮಾಲೀಕ ಸಾಧಿಕ್ ಹುಸೇನ್ ಅತ್ತಾರ್ ಹೇಳಿದರು.ತಾಲೂಕಿನ ಹಲಗೇರಿ ಗ್ರಾಮದಲ್ಲಿ ಶ್ರೀ ಸ್ವಾಮಿ ವಿವೇಕಾನಂದ ಯುವಕರ ಗೆಳೆಯರ ಬಳಗದಿಂದ ಭಾನುವಾರ ಹಮ್ಮಿಕೊಂಡ ಶ್ರೀ ಶಾಂಭವಿ ಟ್ರೋಫಿ-೨೦೨೧ ಕ್ರಿಕೆಟ್ ಟೂರ್ನಾಮೆಂಟ್ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಕ್ರೀಡೆ ಕೇವಲ ಒಂದು ಜಾತಿಗೆ ಸಿಮೀತವಲ್ಲ. ಅದು ಜಾತಿ, ಧರ್ಮವನ್ನು ಮೀರಿದ ಸ್ನೇಹಸಂಬಂಧವಾಗಿದೆ. ತಮ್ಮಲ್ಲಿರುವ ಪ್ರತಿಭೆಯನ್ನು ಪ್ರದರ್ಶಿಸುವುದರೊಂದಿಗೆ ಸಾಧನೆಯ ಮಾರ್ಗವನ್ನು ಕ್ರಮಿಸಲು ಅವಕಾಶ ಮಾಡಿಕೊಡುವ ಕ್ರೀಡಾಸ್ಪರ್ಧೆಗಳು ಸ್ಪರ್ಧಾತ್ಮಕ ಮನೋಭಾವವನ್ನು ಬೆಳೆಸುತ್ತದೆ. ಎಲ್ಲರೊಂದಿಗೆ ಪ್ರೀತಿಯಿಂದ ಬೆರೆತು ಆತ್ಮೀಯತೆಯಿಂದ ಎಲ್ಲರನ್ನೂ ಪ್ರೋತ್ಸಾಹಿಸುತ್ತಾ ಅವರ ಯಶಸ್ಸನ್ನು ಗೌರವಿಸಬೇಕು ಎಂದರು.
ಕ್ರೀಡಾ ಧ್ವಜಾರೋಹಣ ನೆರವೇರಿಸಿ ಉದ್ಯಮಿ ರಾಜಣ್ಣ ನಾಯಕ ಕುಕನೂರ ಮಾತನಾಡಿ, ಕ್ರೀಡಾ ಸ್ಪೂರ್ತಿಯನ್ನು ಬದುಕಿನಲ್ಲಿ ಅಳವಡಿಸಿಕೊಂಡು ಸ್ಪರ್ಧಾತ್ಮಕ ಮನೋಭಾವ ಬೆಳೆಸಿಕೊಳ್ಳಿ. ಐಕ್ಯತೆ, ಬದ್ಧತೆ ಮತ್ತು ಶಿಸ್ತುಗಳೆಂಬ ಜೀವನ ಮೌಲ್ಯಗಳು ಅಭಿವ್ಯಕ್ತಿಯ ಕೇಂದ್ರವಾಗಿರುವ ಕ್ರೀಡೋತ್ಸವವು ಯಶಸ್ವಿಯಾಗಲಿ. ಕ್ರೀಡೆಗೆ ಏನೆ ಸಹಕಾರ ಬೇಕಿದ್ದರೂ ಮನಸ್ಪೂರಕವಾಗಿ ನೀಡುವೆ ಎಂದರು.
ಕ್ರೀಡಾಪಟು ಸೈಯದ್ ಮೈನುದ್ದೀನ್ ಹುಸೇನ್ ಬಲ್ಲೇ ಮಾತನಾಡಿ, ನಿರ್ಣಾಯಕರು ಯಾವುದೇ ಗೊಂದಲ ನಿರ್ಣಯ ನೀಡದೇ, ಕ್ರೀಡೆಯ ಪ್ರದರ್ಶನಕ್ಕೆ ತಕ್ಕಂತೆ ನಿರ್ಣಾಯಕರು ನಿರ್ಣಯವನ್ನು ನೀಡಿ ಉತ್ತಮ ಕ್ರೀಡಾಪಟುವನ್ನು ಉನ್ನತ ಸ್ಥಾನಕ್ಕೆ ಹೋಗಲು ಪ್ರೋತ್ಸಾಹಿಸಿ, ಮಾರ್ಗದರ್ಶನ ಮಾಡಿ ಎಂದರು.
ಗ್ರಾಪಂ ಸದಸ್ಯ ಕಳಕನಗೌಡ ಪಾಟೀಲ್ ಮಾತನಾಡಿ, ಕ್ರೀಡೆ ಮನುಷ್ಯನ ಅವಿಭಾಜ್ಯ ಅಂಗವಾಗಿದ್ದು, ಪ್ರತಿಯೊಬ್ಬರು ಕ್ರೀಡಾ ಮನೋಭಾವ ಮೈಗೂಡಿಸಿಕೊಳ್ಳಿ. ಕ್ರೀಡೆ ಎಲ್ಲರ ಸಹಕಾರ ನೀಡಲಿ ಎಂದರು.
ಮಾಜಿ ಗ್ರಾಪಂ ಸದಸ್ಯ ಕರಿಯಪ್ಪ ಹಳ್ಳಿಕೇರಿ, ಹಿರಿಯ ಕ್ರೀಡಾಪಟು ವಿಶ್ವನಾಥ ಬಡಿಗೇರ ಮಾತನಾಡಿದರು.
ಈ ವೇಳೆ ಉಡಾನ್ ಡೆವಲಪರ್‍ಸ್ ಮತ್ತು ಕನ್ಸಟ್ರಕ್ಷನ್ ಮ್ಯಾನೇಜರ್ ಮೈನುದ್ದೀನ್ ವರ್ದಿ, ಗ್ರಾಪಂ ಉಪಾಧ್ಯಕ್ಷ ಅರ್ಜುನಪ್ಪ ಮುದ್ದಾಬಳ್ಳಿ, ಗ್ರಾಪಂ ಸದಸ್ಯರಾದ ನಾಗರಾಜ ಪಾಲಂಕಾರ, ಜಗದೀಶ ಓಜನಹಳ್ಳಿ, ಮಲ್ಲಿಕಾರ್ಜುನ ಮಡಿವಾಳರ, ಸುಭಾಷ್ ಹೂಗಾರ, ಪ್ರಕಾಶ ಚನ್ನನಗೌಡ್ರ, ಆರ್.ಜಿ. ತಿಮ್ಮನಗೌಡ, ಹನುಮಪ್ಪ ತಳವಾರ, ಸೋಹೆಲ್ ಕೊಪ್ಪಳ, ಅಶೋಕ ಅಬ್ಬಿಗೇರಿ, ಹನುಮಂತಪ್ಪ ಅಬ್ಬಿಗೇರಿ, ಹನುಮಂತ ಹಳ್ಳಿಕೇರಿ, ಗವಿಸಿದ್ದಪ್ಪ ಕಮ್ಮಾರ, ವೀರಣ್ಣ ಕಂಬಳಿ, ಬಸವರಾಜ ಹಂದ್ರಾಳ, ವೆಂಕಟೇಶ ನಾಯಕ, ಭೀಮಣ್ಣ ಗುಡ್ಲಾನೂರ ಸೇರಿದಂತೆ ಇತರರಿದ್ದರು.

Please follow and like us:
error