ಯುಪಿಎಸ್‌ಸಿ ಪರೀಕ್ಷೆಯಲ್ಲಿ ಕೊಪ್ಪಳದ ಇಬ್ಬರು ತೇರ್ಗಡೆ

Kannadnet News ಕೊಪ್ಪಳ: ಕೊಪ್ಪಳ ಜಿಲ್ಲೆಯ ಇಬ್ಬರು ಯುವಕರು ಈ ಸಾಲಿನ ಯುಪಿಎಸ್‌ಸಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ಜಿಲ್ಲೆಗೆ ಕೀರ್ತಿ ತಂದಿದ್ದಾರೆ‌.ಗಂಗಾವತಿಯ ಬಿಜೆಪಿ ಮುಖಂಡ ಗಿರೇಗೌಡ ಅವರ ಪುತ್ರ ವಿನೋದ್ ಪಾಟೀಲ ಯುಪಿಎಸ್‌ಸಿ ಪರೀಕ್ಷೆಯಲ್ಲಿ 132ನೇ ರ್ಯಾಂಕ್ ಗಳಿಸಿದ್ದು, ರಾಜ್ಯದಲ್ಲಿ 2ನೇ ಸ್ಥಾನ ಗಳಿಸಿದ್ದಾರೆ‌. ಹಾಗೆಯೇ ಗಂಗಾವತಿಯ ಗುಮಗೇರಾದ ರಮೇಶ್ 646ನೇ ರ್ಯಾಂಕ್ ಗಳಿಸಿದ್ದು ರಾಜ್ಯದಲ್ಲಿ 33ನೇ ಸ್ಥಾನ ಗಳಿಸಿದ್ದಾರೆ. ರಮೇಶ ತಂದಿ ಯಮನಪ್ಪ ಗುಮಗೇರಿ ಸಾ” ಕಂದಕೂರ ತಾ” ಕುಷ್ಟಗಿ ಜಿ” ಕೊಪ್ಪಳ ಇವರು ಮೂಲತ ರೈತ ಕುಟುಂಬದವರು ಇವರ ತಂದೆ ರೈತರು ಹಾಗೂ ಬಡತನದ ಕುಟುಂಬದಲ್ಲಿ ಜನಸಿದರು ಮಗನನ್ನು ಓದಿಸುವ ಛಲ ಇವರ ತಂದೆಯದ್ದು ಮತ್ತು ಕಂದಕೂರಿನ ಎಲ್ಲಾ ಜನರು ಹರ್ಷವನ್ನು ವ್ಯಕ್ತಪಡಿಸಿದ್ದಾರೆ

ಯುಪಿಎಸ್‌ಸಿ ಪರೀಕ್ಷೆಯ 800 ರ್ಯಾಂಕ್‌‌ಗಳಲ್ಲಿ ರಾಜ್ಯದ 36 ಜನರು ತೇರ್ಗಡೆ ಹೊಂದಿದ್ದು, ಕೊಪ್ಪಳ ಜಿಲ್ಲೆಯ ಇಬ್ಬರು ಯುವಕರು ರ್ಯಾಂಕ್ ಪಟ್ಟಿಯಲ್ಲಿ ಸ್ಥಾನ ಗಳಿಸಿರುವುದು ವಿಶೇಷ.

Please follow and like us:
error