ಯಡಿಯೂರಪ್ಪ ಏನು ಸತ್ಯ ಹರಿಶ್ಚಂದ್ರನಾ? ಯಡಿಯೂರಪ್ಪ ಏನು ಪ್ರಾಮಾಣಿಕರಾ ಹಾಗೂ ಸತ್ಯವಂತರಾ?-ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡೂರಾವ್

koppal ಯಡಿಯೂರಪ್ಪ ಏನು ಸತ್ಯ ಹರಿಶ್ಚಂದ್ರನಾ? ಅವರು ಎಲ್ಲೆಲ್ಲಿ ಕುಳಿತು ವರ್ಗಾವಣೆ ದಂಧೆ ಮಾಡಿದ್ರೂ ನಮಗೆ ಗೊತ್ತಿಲ್ವೇ? ಯಡಿಯೂರಪ್ಪ ಏನು ಪ್ರಾಮಾಣಿಕರಾ ಹಾಗೂ ಸತ್ಯವಂತರಾ? ಕೊಪ್ಪಳದಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡೂರಾವ್ ಲೇವಡಿ

ವೈಯಕ್ತಿಕ ವಿಚಾರಗಳ ಬಗ್ಗೆ ಮಾತಾಡಬಾರದು. ಕೊಪ್ಪಳದಲ್ಲಿ ಜಿಲ್ಲಾ ಕಾಂಗ್ರೆಸ್ ಆಯೋಜಿಸಿದ ಶಕ್ತಿ ಸಂಘಟನಾ ಕಾರ್ಯಕ್ರಮಕ್ಕೆ ಚಾಲನೆ ನೀಡಲು ಆಗಮಿಸಿದ ಗುಂಡೂರಾವ್ ಅವರಿಗೆ‌ ಮಾಡೋಕೆ ಬೇರ ಕೆಲಸವಿಲ್ಲ ಇಂತಹ ಆರೋಪಗಳನ್ನ‌ ಮಾಡ್ತಾ ಕುಳಿತ್ತಿದ್ದಾರೆ ೫ ಸ್ಟಾರ್ ಹೋಟಲ್ ನಲ್ಲಿ ಸಿಎಂ‌ ಕುಮಾರಸ್ವಾಮಿ ಅವರು ವರ್ಗಾವಣೆ ದಂಧೆ ಮಾಡ್ತಾರೆ ಎಂಬ ಯಡಿಯೂರಪ್ಪ ಆರೋಪಕ್ಕೆ ತಿರುಗೇಟು ಕುಮಾರಸ್ವಾಮಿ ಎಲ್ಲಿ ಮಲಗ್ತಾರೆ ಅನ್ನೋದು ಖಾಸಗಿ ಸಂಗತಿ. ಅದನ್ನ ಯಡಿಯೂರಪ್ಪನವರು ಮಾತಾಡಬಾರದು. ಯಡಿಯೂರಪ್ಪ ಎಲ್ಲಿ ಮಲಗ್ತಾರೆ ಅಂತ ನಾವು ಹೇಳಬೇಕಾ? ಅದೆಲ್ಲ ಒಳ್ಳೇ ಬೆಳವಣಿಗೆ ಅಲ್ಲ. ಪಕ್ಷದ ಸಂಘಟನೆ ದೃಷ್ಟಿಯಿಂದ ಇಡೀ ದಿನ ಬೇರು ಮಟ್ಟದಲ್ಲಿ ಪಕ್ಷ‌ ಕಟ್ಟುವ‌ ಕೆಲಸ ನಡೆಯುತ್ತಿದೆ. ರಿವ್ಯೂ ಮಾಡಿ,ಅಗತ್ಯ ಇದ್ದಲ್ಲಿ ಪದಾಧಿಕಾರಿಗಳನ್ನು ಬದಲಾವಣೆ ಮಾಡುತ್ತೇವೆ. ಕಲ್ಲಡ್ಕ ಪ್ರಭಾಕರ ಭಟ್ಟರ ಕಾರ್ಯಕ್ರಮದಲ್ಲಿ ಆನಂದ ಸಿಂಗ್ ಭಾಗವಹಿಸಿದ ವಿಚಾರ..ಆನಂದ್ ಸಿಂಗ್ ಯಾವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ ಗೊತ್ತಿಲ್ಲ. ವಿಚಾರಿಸ್ತಿನಿ. ಪಕ್ಷವನ್ನು ಬಿಟ್ಟು ಯಾರು ಹೋಗುವುದಿಲ್ಲ ಪಕ್ಷ, ಸರಕಾರದ ಬಗ್ಗೆ ಯಾರೂ ಎಲ್ಲೂ ಅಸಮಾಧಾನ ವ್ಯಕ್ತಪಡಿಸಿಲ್ಲ. ಸರಕಾರಕ್ಕೆ ತೊಂದರೆ ಇಲ್ಲ. ಕಾಂಗ್ರೆಸ್-ಜೆಡಿಎಸ್ ನಾಯಕರು ಒಗ್ಗಟ್ಟಾಗಿದ್ದೇವೆ. ಡಿಸೆಂಬರ್ ೨೨ನೇ ತಾರೀಖು ಸಂಪುಟ ವಿಸ್ತರಣೆ ಆಗ್ತದೆ. ಸಮನ್ವಯ ಸಮಿತಿ ಅಧ್ಯಕ್ಷರು ಈಗಾಗಲೇ ತಿಳಿಸಿದ್ದಾರೆ. ಬರ ಪರಿಹಾರ‌‌ ಕಾಮಗಾರಿಗಳನ್ನು ಸರಕಾರ ಉದಾಸೀನ ಮಾಡಿಲ್ಲ.‌ ಕಾರ್ಯಗಳು ನಡೀತಿವೆ. ಅನುದಾನ ಬಿಡುಗಡೆ ಮಾಡಲಾಗಿದೆ.ಆಪರೇಷನ್ ಹಸ್ತ ಮಾಡುವ ಇರಾದೆ ನಮಗಿಲ್ಲ. ಬಿಜೆಪಿ ಬೋಗಸ್ ಪಟ್ಟಿ ಬಿಡುಗಡೆ ಮಾಡ್ತಿದೆ. ಬರೀ ಸುಳ್ಳು. ಸುಳ್ಳೇ ಬಿಜೆಪಿ ಜಾಯಮಾನ ಆಪರೇಷನ್ ‌ನ ಬಿಜೆಪಿ ಪ್ರಯತ್ನ ನಿರಂತರವಾಗಿದೆ. ಅದು ಯಶಸ್ವಿಯಾಗಲ್ಲ. ನಮ್ಮಲ್ಲಿಯೂ ಬಿಜೆಪಿ ಪಟ್ಟಿ ಇದೆ. ನಾವು ಸಮಯ ಬಂದಾಗ ಹೇಳ್ತೀನಿ ಅವರ ಕಡೆ ಬರುವುದಕ್ಕೆ ತಯಾರಿದ್ದಾರೆ ಬಿಜೆಪಿ ಅಂತೆ ನಾವು ಆಪರೇಷ ಮಾಡುತ್ತಿಲ್ಲ ಬಿಜೆಪಿ ಮಾಡುತ್ತಿರುವುದು ಒಳ್ಳೆ ಸಂಪ್ರಾದಾಯವಲ್ಲ ಎಂದು ಹೇಳಿದರು. ಈ ಸಂದರ್ಭದಲ್ಲಿ ಡಿಸಿಸಿ ಅಧ್ಯಕ್ಷ ಶಿವರಾಜ್ ತಂಗಡಗಿ , ಶಾಸಕರಾದ ರಾಘವೇಂದ್ರ ಹಿಟ್ನಾಳ, ಅಮರೇಗೌಡ ಬಯ್ಯಾಪೂರ, ಮಾಜಿ ಶಾಸಕರಾದ ಹಸನಸಾಬ ದೋಟಿಹಾಳ, ಬಸವರಾಜ್ ಹಿಟ್ನಾಳ, ಡಿಸಿಸಿ ಜಿಲ್ಲಾ ಪ್ರದಾನ ಕಾರ್ಯದರ್ಶಿ ರಾಜಶೇಖರ ಹಿಟ್ನಾಳ ಸೇರಿದಂತೆ ಇತರರು ಉಪಸ್ಥಿತರಿದ್ದರು.

Please follow and like us:
error