ಮೋದಿ ಅವರಿಂದ ದೇಶದ ಚಿತ್ರಣವೇ ಬದಲಾಗಿದೆ – ಸಂಸದ ಸಂಗಣ್ಣ ಕರಡಿ

ಕೊಪ್ಪಳ: ಉಜ್ವಲ ಯೋಜನೆ ಸೇರಿದಂತೆ ಹಲವಾರು ಯೋಜನೆಗಳನ್ನು ಜಾರಿಗೊಳಿಸಿ ದೇಶದ ಪ್ರಗತಿಗೆ ಶ್ರಮಿಸುತ್ತಿರುವ ಮೋದಿ ಅವರಿಂದ ದೇಶದ ಚಿತ್ರಣವೇ ಬದಲಾಗಿದೆ. ಯಾರು ಉಹಿಸಲಾರದಷ್ಟು ಸಾಧನೆಗಳನ್ನು ಮಾಡಿ ತೋರಿಸಿದ್ದಾರೆ ಎಂದು ಸಂಸದ ಸಂಗಣ್ಣ ಕರಡಿ ಹೇಳಿದರು.
ತಾಲೂಕಿನ ನೀರಲಗಿ, ಮತ್ತೂರು, ತಿಗರಿ, ಹನಕುಂಟಿ ಗ್ರಾಮಗಳಲ್ಲಿ ಪ್ರಧಾನಮಂತ್ರಿ ಉಜ್ವಲ ಯೋಜನೆ ಅಡಿಯಲ್ಲಿ ಫಲಾನುಭವಿಗಳಿಗೆ ಮಂಗಳವಾರ ಎಲ್‌ಪಿಜಿ ಗ್ಯಾಸ್ ಕಿಟ್ ವಿತರಿಸಿ ಅವರು ಮಾತನಾಡಿದರು.
ದೇಶದ ಅರ್ಥವ್ಯವಸ್ಥೆಯಲ್ಲಿ ಕಳೆದರಡು ವರ್ಷಗಳಲ್ಲಿ ಮಹತ್ತರ ಬದಲಾವಣೆಗಳಾಗಿವೆ. ಅಲ್ಲದೇ ಬಡ ಮಹಿಳೆಯರು ಅಡುಗೆ ಮನೆಯಲ್ಲಿ ಆಹಾರ ಬೇಯಿಸಲು ಪಡುವ ಕಷ್ಟಗಳನ್ನು ಪರಿಹರಿಸುವುದಕ್ಕಾಗಿ ಉಜ್ವಲ ಯೋಜನೆಯನ್ನು ಜಾರಿಗೊಳಿಸಿದರು. ಇದರಿಂದಲೇ ತಿಳಿಯುತ್ತದೆ ಅವರ ಕಾರ್ಯ ಯೋಜನೆಗಳು ತಳಮಟ್ಟದ ಸಮುದಾಯವನ್ನು ಅಭಿವೃದ್ಧಿ ಪಡಿಸುವ ದೀಶೆಯಲ್ಲಿ ಕೂಡಿರುತ್ತವೆ ಎಂಬುದು, ಉಜ್ವಲ ಯೋಜನೆಯ ಲಾಭವನ್ನು ದೇಶದಲ್ಲಿ ೫ ಸಾವಿರ ಕೋಟಿ ಮಹಿಳೆಯರು ಪಡೆಯಲಿದ್ದಾರೆ. ರಾಜ್ಯದಲ್ಲಿ ೩೬ ಲಕ್ಷ ಮಹಿಳೆಯರು, ಕೊಪ್ಪಳ ಜಿಲ್ಲೆಯಲ್ಲಿ ೨೯೮೬೦ ಮಹಿಳೆಯರು ಈ ಸೌಲಭ್ಯವನ್ನು ಪಡೆದುಕೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು.
ಅಲ್ಲದೇ ಉಚಿತವಾಗಿ ಬ್ಯಾಂಕ್ ಖಾತೆ ಮಾಡಿಸುವ ಯೋಜನೆಯನ್ನು ಜಾರಿಗೊಳಿಸಿ, ಗ್ರಾಮೀಣ ಭಾಗದವರು ಕೂಡ ಬ್ಯಾಂಕಿನ ಸೌಲಭ್ಯ ಪಡೆಯಬಹುದು ಎಂಬುದನ್ನು ಮೋದಿ ಅವರು ತೋರಿಸಿಕೊಟ್ಟರು. ಎಷ್ಟೋ ಗ್ರಾಮೀಣರಿಗೆ ರಾಷ್ಟ್ರೀಕೃತ ಬ್ಯಾಂಕುಗಳ ಪರಿಚಯವೇ ಇರಲಿಲ್ಲ. ಈ ದೀಶೆಯಲ್ಲಿ ಅವರು ಯೋಚಿಸಿ, ಬ್ಯಾಂಕ್ ಖಾತೆ ಯೋಜನೆ ಜಾರಿಗೆ ತಂದಿದ್ದಾರೆ ಎಂದರು.

ಈ ಸಂದರ್ಭದಲ್ಲಿ ವಿರೇಶ ಸಜ್ಜನ್, ಮಂಜುನಾಥ ಹಂದ್ರಾಳ, ಶೇಖಣ್ಣ ಲಕ್ಷಾಣಿ, ಶರಣಪ್ಪ ಮತ್ತೂರು, ಹನಮರಡ್ಡಿ ದಲ್ಲಳಗಿ, ಉಮೇಶಗೌಡ ಪಾಟೀಲ, ಪಕೀರಪ್ಪ ಕುರಿ, ಗೋಣೆಪ್ಪ ಬಸರಕೋಡ, ಜಗನ್ನಾಥ ಆನಂದಳ್ಳಿ, ಶಂಕ್ರಪ್ಪ ಹೊನ್ನೂರ, ಗಿರೀಶ ಕೆರೆ, ಜಗದಯ್ಯ ಹಿರೇಮಠ, ವೆಂಕಟೇಶ ತಳವಾರ ಸೇರಿದಂತೆ ಇನ್ನಿತರರು ಇದ್ದರು.

Please follow and like us:
error

Related posts