ಮೋದಿಯವರೇನು ಪ್ರಶ್ನಾತೀತರಾ ? -ಮಾಜಿ ಸಚಿವ ಶಿವರಾಜ್ ತಂಗಡಗಿ

ಸವದಿಯ  ಸೋತು ಉಪಮುಖ್ಯಮಂತ್ರಿಯಾಗಿದ್ದೀರಿ, ಇನ್ನೊಂದು ಸಲ ಸೋತರೆ ಈ ರಾಜ್ಯದ ಮುಖ್ಯಮಂತ್ರಿಯಾಗ್ತೀರಿ

Koppal  ನನಗೆ ದೊಡ್ಡ ಲೀಡರ್ ಆಗೋ ಆಸೆ ಇಲ್ಲ. ನೆರೆಸಂತ್ರಸ್ತರಿಗೆ ಪರಿಹಾರ ಹಣ ತಗೊಂಡು ಬನ್ನಿ ನಾಳೇನೆ ನಿಮ್ಮನ್ನ ಅಭಿನಂದಿಸುತ್ತೇನೆ.   ನೆರೆ ಸಂತ್ರಸ್ತರ ದುಡ್ಡು ತೆಗೆದುಕೊಂಡು ಬನ್ನಿ ನಾನೂ  ನಿಮ್ಮ ಬ್ಯಾನರ್ ಹಾಕುತ್ತೇನೆ. ಅಭಿನಂದನೆಗಳು ಹೇಳ್ತೀನಿ ಎಲ್ರೀಗೂ ಕೊಪ್ಪಳದ ಕಾರಟಗಿಯಲ್ಲಿ ಮಾಜಿ ಸಚಿವ ಶಿವರಾಜ್ ತಂಗಡಗಿ ಹೇಳಿಕೆ

ಮೋದಿಯವರೇನು ಪ್ರಶ್ನಾತೀತರಾ ? ಅವರಿಗೆ ಪ್ರಶ್ನೆ ಮಾಡುವ ಹಕ್ಕು ನನಗಿಲ್ಲವಾ ನಾನೂ ಈ ದೇಶದ ಪ್ರಜೆ, ಮಾಜಿ ಸಚಿವ. ನನಗೆ ಪ್ರಶ್ನೆ ಮಾಡುವ ಹಕ್ಕಿದೆ. ಪ್ರಶ್ನೆ ಮಾಡಲು ಸಂವಿಧಾನದಲ್ಲಿ ಅವಕಾಶವಿದೆ. ಪ್ರಶ್ನೆ ಕೇಳಿ ದೊಡ್ಡ ಲೀಡರ್ ಆಗೋ ಅವಶ್ಯಕತೆ ಇಲ್ಲ . ಜನರು ಮನಸ್ಸು ಮಾಡಿದ್ರೆ ನಾನು ಲೀಡರ್ ಆಗ್ತೀನಿ ಇಲ್ಲಂದ್ರೆ ಮನೆಯಲ್ಲಿ ಇರ್ತೀನಿ. ಸವದಿಯವರು ಹೇಳಿದ್ರು ತಂಗಡಗಿ ಸೋತಿದ್ದರಿಂದ ಸ್ತಿಮಿತ ಕಳೆದುಕೊಂಡಿದ್ದಾರೆ ಅಂತಾ ಏನೋ ಹೇಳಿದ್ರು.. ಖಾಲಿ ಕುಂತಾನ ಅಂದ್ರು, ನಾನು ಸವದಿಯವರಿಗೆ ಕೇಳ್ತೀನಿ ನೀವು ಸೋತು ಉಪಮುಖ್ಯಮಂತ್ರಿಯಾಗಿದ್ದೀರಿ, ಇನ್ನೊಂದು ಸಲ ಸೋತರೆ ಈ ರಾಜ್ಯದ ಮುಖ್ಯಮಂತ್ರಿಯಾಗ್ತೀರಿ ಮಾಜಿ ಸಚಿವ ಶಿವರಾಜ ತಂಗಡಗಿ ವ್ಯಂಗ್ಯ

Please follow and like us:
error